ಫೈಲ್ ಡಿಲೀಟ್ ಆಗುತ್ತದೆ: ಅನೇಕ ಬಾರಿ ನಾವು ಕೆಲವು ಫೈಲ್ ಅಥವಾ ಡಾಕ್ಯುಮೆಂಟ್ ಅನ್ನು ಸಿಸ್ಟಮ್‌ನಲ್ಲಿ ಎಲ್ಲೋ ಸೇವ್ ಮಾಡಿ ಇಟ್ಟಿರುತ್ತೇವೆ. ಆದರೆ ಕೆಲವೊಮ್ಮೆ ನಾವು ಅದನ್ನು ಎಲ್ಲಿ ಸೇವ್ ಮಾಡಿದ್ದೇವೆ ಎಂಬುದನ್ನು ಮರೆತುಬಿಡುತ್ತೇವೆ. ಆದರೆ, ಅವುಗಳನ್ನು ಹುಡುಕಲು ಹಲವು ಮಾರ್ಗಗಳಿವೆ. ಆದರೆ ಕೆಲವೊಮ್ಮೆ ನಾವು ಸೇವ್ ಮಾಡಿದ ಫೈಲ್ಗಳು ತನ್ನಷ್ಟಕ್ಕೆ ಡಿಲೀಟ್ ಆಗಿರುತ್ತವೆ. ಇದಕ್ಕೂ ವೈರಸ್ಗಳು ಅಥವಾ ಮಾಲ್ವೇರ್ಗಳೇ ಕಾರಣ.
ಸುರಕ್ಷಿತವಾಗಿರುವುದು ಹೇಗೆ?: ಒಮ್ಮೆ ವೈರಸ್ ನಿಮ್ಮ ಕಂಪ್ಯೂಟರ್ ಅನ್ನು ಪ್ರವೇಶಿಸಿದ್ರೆ ಹೇಗೆ ರಕ್ಷಿಸಿಕೊಳ್ಳೋದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮೊದಲಿಗೆ ನೀವು ಅಪ್-ಟು-ಡೇಟ್ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಹಾಗೆಯೇ ಯಾವುದೇ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವಾಗ ಅಥವಾ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವಾಗ ಎಚ್ಚರದಿಂದಿರಬೇಕು.