ಇದೇ ಡಿಸೆಂಬರ್ 8 ರಂದು ಭಾರತೀಯ ಮೊಬೈಲ್ ಮಾರುಕಟ್ಟೆಗೆ ರಿಯಲ್ ಮಿ 10 ಪ್ರೋ ಸಿರಿಸ್ನ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿದೆ ಎಂದು ತಂತ್ರಜ್ಞರು ಹೇಳಿದ್ದಾರೆ. ಇದರಲ್ಲಿ ರಿಯಲ್ ಮಿ 10 ಪ್ರೋ ಮತ್ತು ರಿಯಲ್ ಮಿ 10 ಪ್ರೋ + ಎಂಬ ಎರಡು ಫೋನುಗಳಿವೆ. ರಿಯಲ್ ಮಿ 10 ಪ್ರೋ + ಮೊಬೈಲ್ನ ಬೆಲೆ 25,000 ರೂಪಾಯಿಗಳಿಗಿಂತ ಕಡಿಮೆ ಇರಬಹುದು ಎಂದು ಕೆಲ ವರದಿಗಳು ತಿಳಿಸಿವೆ.
ಐಕ್ಯೂ 11 ಪ್ರೋ ಮಾದರಿಯ ಸ್ಮಾರ್ಟ್ಫೊನ್ ಆಲ್ಫಾ, ಲೆಜೆಂಡ್ ಮತ್ತು ಮಿಂಟ್ ಗ್ರೀನ್ ಬಣ್ಣಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಎರಡೂ ಸ್ಮಾರ್ಟ್ಫೋನ್ಗಳು ಕ್ವಾಲ್ಕಂ ಸ್ನಾಪ್ಡ್ರಾಗನ್ 8 Gen 2 ಪ್ರೊಸೆಸರ್ನಿಂದ ಚಾಲಿತವಾಗಲಿವೆ. ವಿಶೇಷವೆಂದರೆ ಐಕ್ಯೂ 11 ಪ್ರೋ 200W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್ಫೋನ್ಗಳು 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರಲಿದೆ.