ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಫೋಟೋಗ್ರಫಿಗಾಗಿ ಹೆಚ್ಚಿನ ಪಿಕ್ಸೆಲ್ ಹೊಂದಿದ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿರುವಿರಾ? ಆದರೆ ನಿಮಗೆ ಒಳ್ಳೆಯ ಸುದ್ದಿ. ಇದೀಗ ಫ್ಲಿಪ್ಕಾರ್ಟ್ ವಿಶೇಷ ಸೇಲ್ ಒಂದನ್ನು ಆರಂಭಿಸಿದೆ. ಈ ಸೇಲ್ನಲ್ಲಿ 200 ಎಮ್ಪಿ ಸೆನ್ಸಾರ್ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಯಲ್ಲಿ ಪಡೆಯಬಹುದು.
ಇನ್ಫಿನಿಕ್ಸ್ ಝೀರೋ ಅಲ್ಟ್ರಾ ಫೋನ್ ಕೂಡ ರೂ. 33,750 ರಿಯಾಯಿತಿಯಲ್ಲಿ ಖರೀದಿಗೆ ಬರಲಿದೆ. ಈ ಫೋನ್‌ನ 8 GB RAM, 256 GB ಮೆಮೊರಿ ರೂಪಾಂತರದ ಬೆಲೆ ರೂ. 49,999 ಆಗಿದೆ. ಆದರೆ ಇದನ್ನು ರೂ. 36,999 ಖರೀದಿಸಬಹುದು. ಅಂದರೆ ರೂ. 13 ಸಾವಿರರದವರೆಗೆ ಈ ಸ್ಮಾರ್ಟ್‌ಫೋನ್ ಮೇಲೆ ರಿಯಾಯಿತಿ ಬರಲಿದೆ. ಅಲ್ಲದೆ ಬ್ಯಾಂಕ್ ಆಫರ್ ಮೂಲಕ ಖರೀದಿಸಿದರೆ ರೂ. 750 ಬರಲಿದೆ. ಅಲ್ಲದೇ ರೂ.20 ಸಾವಿರದವರೆಗೆ ಎಕ್ಸ್ ಚೇಂಜ್ ಆಫರ್ ಸಹ ಲಭ್ಯವಿದೆ. ಅಂದರೆ ಈ ಎಲ್ಲಾ ಕೊಡುಗೆಗಳನ್ನು ಸೇರಿಸಿದರೆ, ಈ ಫೋನ್ ಅನ್ನು ಕೇವಲ ರೂ. 16,249 ಗೆ ಖರೀದಿಸಬಹುದು.
ರೆಡ್ಮಿ ನೋಟ್ 12 ಪ್ರೋ ಪ್ಲಸ್ 5ಜಿ ಫೋನ್ ಅನ್ನು ರೂ. 29,999 ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಈ ರೆಡ್ಮಿ ನೋಟ್ 12 ಪ್ರೋ ಪ್ಲಸ್ 5ಜಿ ಫೋನ್‌ನ 8GB RAM, 256GB ಮೆಮೊರಿ ರೂಪಾಂತರದ ಬೆಲೆ ರೂ. 33,999 ಆಗಿದೆ. ಆದರೆ ಇದು ರೂ. 29,999 ಖರೀದಿಸಬಹುದು. ಅಂದರೆ ರೂ. 4 ಸಾವಿರ ರಿಯಾಯಿತಿ ಲಭ್ಯವಿದೆ. ಬ್ಯಾಂಕ್ ಮೂಲಕ ಖರೀದಿಸಿದರೆ ರೂ. 2500 ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಅಲ್ಲದೆ ಎಕ್ಸ್ಚೇಂಜ್ ಆಫರ್ ರೂ. 22 ಸಾವಿರದವರೆಗೆ ಲಭ್ಯವಿದೆ. ಅಂದರೆ ನೀವು ಈ ಎಲ್ಲಾ ಕೊಡುಗೆಗಳನ್ನು ಸೇರಿಸಿದಾಗ ನೀವು ಈ ಫೋನ್ ಅನ್ನು ಕೇವಲ 5499 ರೂಪಾಯಿಗೆ ಖರೀದಿಸಬಹುದು. ಇನ್ನು ಈ ಸ್ಮಾರ್ಟ್ಫೋ್ 6.67 ಇಂಚಿನ ಸ್ಕ್ರೀನ್, ಮೀಡಿಯಾ ಟೆಕ್ ಡೈಮೆನ್ಶನ್ 1080 ಪ್ರೊಸೆಸರ್, 200 ಎಂಪಿ ಹಿಂಬದಿ ಕ್ಯಾಮೆರಾ, 16 ಎಂಪಿ ಫ್ರಂಟ್ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.