ಆಟೋಸ್ಕ್ರೀನ್ ಮೋಡ್ನಲ್ಲಿಡಿ: ಫೋನ್‌ನಲ್ಲಿ ಆಟೊ ಬ್ರೈಟ್‌ನೆಸ್ ಅನ್ನು ಆನ್ ಮಾಡಿಡುವುದು ಉತ್ತಮವಾದ ವಿಚಾರವಾಗಿದೆ. ನೀವು ಸಾಧ್ಯವಾದಷ್ಟು ಫೋನ್ ಸ್ಕ್ರೀನ್‌ನ ಬ್ರೈಟ್‌ನೆಸ್ ಅನ್ನು ಕಡಿಮೆ ಮಾಡಿ. ಇದರಿಂದ ಕೂಡ ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ನಿಮಗೆ ಉಳಿಸಬಹುದಾಗಿದೆ. ಅಥವಾ ಆಟೋ ಬ್ರೈಟ್‌ನೆಸ್ ಮೋಡ್ನಲ್ಲಿಟ್ಟರೆ ನಿಮ್ಮ ವಾತಾವರಣಕ್ಕೆ ತಕ್ಕಂತೆ ಬ್ರೈಟ್‌ನೆಸ್ ಬದಲಾಗುತ್ತಿರುತ್ತದೆ. ಈ ಮೂಲಕವೂ ಮೊಬೈಲ್ನ ಚಾರ್ಜಿಂಗ್ ಸಾಮರ್ಥ್ಯವನ್ನು ಉಳಿಸಬಹುದು.
ಅನಗತ್ಯ ಆ್ಯಪ್ಗಳನ್ನು ಡಿಲೀಟ್ ಮಾಡಿ: ಆಂಡ್ರಾಯ್ಡ್ ಇಲ್ಲವೇ ಐಫೋನ್ ಆಗಿರಲಿ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನ ಬ್ಯಾಟರಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಅಪ್ಲಿಕೇಶನ್‌ಗಳು ಶೇಕಡಾ 10 ಕ್ಕಿಂತ ಅಧಿಕ ಬ್ಯಾಟರಿಯನ್ನು ಬಳಸಿಕೊಳ್ಳುತ್ತಿದೆ ಎಂದಾದಲ್ಲಿ ಅಂತಹ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ಇನ್ನು ಅನಗತ್ಯವಾದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವುದು ಉತ್ತಮ.