Phone Charging Tips: ಸ್ಮಾರ್ಟ್​​​ಫೋನ್​ ಚಾರ್ಜ್​ ಮಾಡುವಾಗ ಪಾಲಿಸಬೇಕಾದ ನಿಯಮಗಳು ಇಲ್ಲಿದೆ

ಅನೇಕ ಸ್ಮಾರ್ಟ್‌ಫೋನ್ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಯೆಂದರೆ ಅದು ಬ್ಯಾಟರಿ. ಫೋನ್ ಖರೀದಿಸಿದ ಕೆಲವೇ ದಿನಗಳಲ್ಲಿ ಬ್ಯಾಟರಿ ಬಾಳಿಕೆ ಹಾಳಾಗಿದೆ ಎಂದು ಹಲವರು ಹೇಳುತ್ತಾರೆ. ಆದರೆ ಈ 40-80 ನಿಯಮ ಪಾಲಿಸಿದರೆ ಬ್ಯಾಟರಿ ಸಮಸ್ಯೆ ಎದುರಾಗುವುದಿಲ್ಲ ಎನ್ನುತ್ತಾರೆ ತಜ್ಞರು. ಹಾಗಿದ್ರೆ ಮೊಬೈಲ್​ ಬ್ಯಾಟರಿ ಸಮಸ್ಯೆ ಎದುರಿಸಲು ಇಲ್ಲಿದೆ ಟಿಪ್ಸ್​.

First published:

  • 18

    Phone Charging Tips: ಸ್ಮಾರ್ಟ್​​​ಫೋನ್​ ಚಾರ್ಜ್​ ಮಾಡುವಾಗ ಪಾಲಿಸಬೇಕಾದ ನಿಯಮಗಳು ಇಲ್ಲಿದೆ

    ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಅತ್ಯಂತ ಅಗತ್ಯ ವಸ್ತುವಾಗಿದೆ ಎಂದು ಹೇಳಬಹುದು. ಆದರೂ, ಸ್ಮಾರ್ಟ್ ಫೋನ್‌ನಲ್ಲಿ ಪ್ರಮುಖ ವಿಷಯವೆಂದರೆ ಅದರ ಬ್ಯಾಟರಿ. ಬದಲಾದ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ, ಕಂಪನಿಗಳು ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಗಳನ್ನು ತಯಾರಿಸುತ್ತಿವೆ. ಆದರೆ ಕೆಲವೊಂದು ಬಾರಿ ಬಾಳಿಕೆ ಬರುವುದಿಲ್ಲ ಎಂಬ ದೂರುಗಳು ಸಹ ಇವೆ.

    MORE
    GALLERIES

  • 28

    Phone Charging Tips: ಸ್ಮಾರ್ಟ್​​​ಫೋನ್​ ಚಾರ್ಜ್​ ಮಾಡುವಾಗ ಪಾಲಿಸಬೇಕಾದ ನಿಯಮಗಳು ಇಲ್ಲಿದೆ

    ಆದರೆ.. ಹಲವಾರು ಜನರು ಸ್ಮಾರ್ಟ್​​ಫೋನ್​ ಚಾರ್ಜ್ ಮಾಡುವಾಗ ಯಾವುದೇ ಮುನ್ನೆಚ್ಚರಿಕೆಗಳನ್ನು ಅನುಸರಿಸದಿರುವುದರಿಂದ ಬ್ಯಾಟರಿ ಬಾಳಿಕೆ ಹಾಳಾಗುತ್ತಿದೆ. ಬ್ಯಾಟರಿಯನ್ನು ಚಾರ್ಜ್ ಮಾಡುವಾಗ ಕೆಲವು ಸಲಹೆಗಳು ಮತ್ತು ನಿಯಮಗಳನ್ನು ಅನುಸರಿಸುವ ಮೂಲಕ ಬ್ಯಾಟರಿ ಬಾಳಿಕೆಯನ್ನು ಉತ್ತಮಗೊಳಿಸಬಹುದು.

    MORE
    GALLERIES

  • 38

    Phone Charging Tips: ಸ್ಮಾರ್ಟ್​​​ಫೋನ್​ ಚಾರ್ಜ್​ ಮಾಡುವಾಗ ಪಾಲಿಸಬೇಕಾದ ನಿಯಮಗಳು ಇಲ್ಲಿದೆ

    ಅನೇಕ ಜನರು ಫೋನ್ ಅನ್ನು ಹಲವು ಬಾರಿ ಚಾರ್ಜ್ ಮಾಡುತ್ತಲೇ ಇರುತ್ತಾರೆ. ಹೀಗೆ ಮಾಡುವುದರಿಂದ ಬ್ಯಾಟರಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು.ಆದ್ದರಿಂದ ಸ್ಮಾರ್ಟ್​ಫೋನ್​ ಅನ್ನು ಪದೇ ಪದೇ ಚಾರ್ಜ್​​ಗೆ ಇಡಬಾರದು.

    MORE
    GALLERIES

  • 48

    Phone Charging Tips: ಸ್ಮಾರ್ಟ್​​​ಫೋನ್​ ಚಾರ್ಜ್​ ಮಾಡುವಾಗ ಪಾಲಿಸಬೇಕಾದ ನಿಯಮಗಳು ಇಲ್ಲಿದೆ

    ಬ್ಯಾಟರಿ ಚಾರ್ಜಿಂಗ್​​​ಗೆ ಹಲವಾರು ಸೂಕ್ತ ವಿಧಾನಗಳಿವೆ, ಅವುಗಳಲ್ಲಿ ಒಂದು 40-80 ಶೇಕಡಾದ ನಿಯಮವಾಗಿದೆ. ಬಹುಶಃ ನೀವು ಅದರ ಬಗ್ಗೆ ಕೇಳಿರಬಹುದು ಅಥವಾ ಎಲ್ಲೋ ಓದಿರಬಹುದು. ಒಂದು  ವೇಳೆ, ಬ್ಯಾಟರಿ ಚಾರ್ಜಿಂಗ್​​ನ 40-80 ನಿಯಮ ಏನು ಮತ್ತು ಅದು ಏಕೆ ಮುಖ್ಯವಾಗಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

    MORE
    GALLERIES

  • 58

    Phone Charging Tips: ಸ್ಮಾರ್ಟ್​​​ಫೋನ್​ ಚಾರ್ಜ್​ ಮಾಡುವಾಗ ಪಾಲಿಸಬೇಕಾದ ನಿಯಮಗಳು ಇಲ್ಲಿದೆ

    40-80 ನಿಯಮವು ಬ್ಯಾಟರಿ ಮೇಲಾಗುವ ಹಾನಿಯನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ಒಂದು ಮಾರ್ಗವಾಗಿದೆ. ಸರಳವಾಗಿ ಹೇಳುವುದಾದರೆ, ಈ ನಿಯಮವು ಬ್ಯಾಟರಿಯನ್ನು 40% ಕ್ಕಿಂತ ಕಡಿಮೆ ಮತ್ತು 80% ಕ್ಕಿಂತ ಹೆಚ್ಚು ಚಾರ್ಜ್ ಮಾಡಬಾರದು ಎಂಬುದಾಗಿದೆ.

    MORE
    GALLERIES

  • 68

    Phone Charging Tips: ಸ್ಮಾರ್ಟ್​​​ಫೋನ್​ ಚಾರ್ಜ್​ ಮಾಡುವಾಗ ಪಾಲಿಸಬೇಕಾದ ನಿಯಮಗಳು ಇಲ್ಲಿದೆ

    ಸಾಮಾನ್ಯವಾಗಿ 80% ಕ್ಕಿಂತ ಹೆಚ್ಚು ಚಾರ್ಜ್ ಮಾಡುವುದರಿಂದ ಬ್ಯಾಟರಿ ಬಾಳಿಕೆ ವೇಗವಾಗಿ ಹಾಳಾಗುತ್ತದೆ. ಆಧುನಿಕ ಫೋನ್ ಬ್ಯಾಟರಿ (ಲಿಥಿಯಂ-ಐಯಾನ್) 2 - 3 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ ಮತ್ತು ಸಾಮಾನ್ಯ ಲಿಥಿಯಂ ಐಯಾನ್ ಬ್ಯಾಟರಿಯು 300 ರಿಂದ 500 ಚಾರ್ಜ್‌ಗಳ ಜೀವಿತಾವಧಿಯನ್ನು ಹೊಂದಿರುತ್ತದೆ.

    MORE
    GALLERIES

  • 78

    Phone Charging Tips: ಸ್ಮಾರ್ಟ್​​​ಫೋನ್​ ಚಾರ್ಜ್​ ಮಾಡುವಾಗ ಪಾಲಿಸಬೇಕಾದ ನಿಯಮಗಳು ಇಲ್ಲಿದೆ

    ಉತ್ತಮ ಬ್ಯಾಟರಿ ಬಾಳಿಕೆಗಾಗಿ, ನಿಮ್ಮ ಫೋನ್ ಎಂದಿಗೂ 40% ಕ್ಕಿಂತ ಕಡಿಮೆ ಅಥವಾ 80% ಕ್ಕಿಂತ ಹೆಚ್ಚಿರಬಾರದು.ಆದರೆ ಹೆಚ್ಚಿನ ಜನರು ತಮ್ಮ ಸ್ಮಾರ್ಟ್​ಫೋನ್​ಗಳು ಫುಲ್​ ಚಾರ್ಜ್​​ ಅನ್ನು ಹೊಂದಿರಬೇಕು ಎಂದು ಭಾವಿಸುತ್ತಾರೆ. ಆದರೆ 100% ದಷ್ಟು ಚಾರ್ಜ್ ಮಾಡಿದರೆ ಅದು ಒಳ್ಳೆಯದಲ್ಲ.

    MORE
    GALLERIES

  • 88

    Phone Charging Tips: ಸ್ಮಾರ್ಟ್​​​ಫೋನ್​ ಚಾರ್ಜ್​ ಮಾಡುವಾಗ ಪಾಲಿಸಬೇಕಾದ ನಿಯಮಗಳು ಇಲ್ಲಿದೆ

    ಇದು ನಿಮ್ಮ ಸ್ಮಾರ್ಟ್​​ಫೋನ್​ನ ಬ್ಯಾಟರಿ ಸಮಸ್ಯೆಯನ್ನು ನಿವಾರಿಸಲು ಇರುವಂತಹ ಒಂದು ಮಾರ್ಗವಾಗಿದೆ.

    MORE
    GALLERIES