ಸ್ಮಾರ್ಟ್ಫೋನ್ಗಳು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಈಗಂತೂ ಸ್ಮಾರ್ಟ್ಫೋನ್ ಇಲ್ಲದೇ ಜೀವನವೇ ಇಲ್ಲವಂಬಂತಾಗಿದೆ. ಎಲ್ಲಿ ಹೋಗಬೇಕಾದರೂ ಈ ಸ್ಮಾರ್ಟ್ಫೋನ್ಗಳು ಅಗತ್ಯವಾಗಿದೆ. ಆದ್ದರಿಂದ ಕೀಪ್ಯಾಡ್ ಫೋನ್ ಬಳಸುತ್ತಿದ್ದವರು ಕೂಡ ಅದನ್ನು ಬದಲಿಸಿ ಸ್ಮಾರ್ಟ್ಫೋನ್ಗಳನ್ನು ಬಳಸುತ್ತಿದ್ದಾರೆ. ಇದೀಗ ಅಮೆಜಾನ್ನಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳು ಮಾರಾಟವಾಗುತ್ತಿದೆ.
ಈ ಸ್ಮಾರ್ಟ್ಫೋನ್ನ ಕ್ಯಾಮೆರಾ ಫೀಚರ್ಸ್ ಬಗ್ಗೆ ಹೇಳುವುದಾದರೆ ಇದರ ಹಿಂಭಾಗದಲ್ಲಿ 50MP ಹೈ ರೆಸಲ್ಯೂಶನ್ ಕ್ಯಾಮೆರಾವನ್ನು ಹೊಂದಿದೆ. ಎಕ್ಸ್ಟ್ರಾ ಕ್ಲ್ಯಾರಿಟಿಗಾಗಿ, ಕ್ಯಾಮೆರಾದಲ್ಲಿ F1.6 ದೊಡ್ಡ ಅಪಾರ್ಚರ್ಅನ್ನು ಕೂಡ ಆ್ಯಡ್ ಮಾಡಲಾಗಿದೆ. ಇದರಿಂದ ಫೋಟೋಗಳನ್ನು ತೆಗೆಯುವಾಗ ಉತ್ತಮ ಗುಣಮಟ್ಟದಲ್ಲಿ ಮೂಡಿಬರಲು ಸಾಧ್ಯವಾಗುತ್ತದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಿದ್ದಾರೆ. 6.6 ಇಂಚಿನ ಫುಲ್ ಹೆಚ್ಡಿ ಸ್ಕ್ರೀನ್ ಅನ್ನು ಹೊಂದಿದೆ. ಗೇಮಿಂಗ್ಗಾಗಿ ಉತ್ತಮ ಪ್ರೊಸೆಸರ್ ಅನ್ನು ಹೊಂದಿದೆ.
ಇದು 6.8 ಇಂಚಿನ ಪೂರ್ಣ ಹೆಚ್ಡಿ ಡಾಟ್ ಡಿಸ್ಪ್ಲೇ ಒಳಗೊಂಡಿದೆ. ಈ ಡಿಸ್ಪ್ಲೇ ಗೇಮಿಂಗ್ ಮತ್ತು ವಿಡಿಯೋಗಳನ್ನು ವೀಕ್ಷಿಸಲು, ಬ್ರೌಸಿಂಗ್ ಮಾಡಲು ಇದು ಉತ್ತಮ ಸ್ಮಾರ್ಟ್ಫೋನ್ ಆಗಿದೆ. ಜಿ85 ಪ್ರೊಸೆಸರ್ ಅನ್ನು ಗೇಮಿಂಗ್ಗಾಗಿ ನೀಡಲಾಗಿದೆ, ಇದರಿಂದ ನೀವು ಪೂರ್ಣವಾಗಿ ಗೇಮಿಂಗ್ ಅನ್ನು ಆಡಬಹುದಾಗಿದೆ. ಇದರ ಕ್ಯಾಮೆರಾ ಫೀಚರ್ಸ್ನಲ್ಲಿ ಈ ಸ್ಮಾರ್ಟ್ಫೋನ್ನ ಹಿಂಭಾಗದಲ್ಲಿ 48MP ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 8MP ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.