ಇಂದು ಸ್ಮಾರ್ಟ್‌ಫೋನ್‌ನಲ್ಲಿರುವ ಕ್ಯಾಮೆರಾ ಅತ್ಯಂತ ಮಹತ್ವದ್ದಾಗಿದೆ. ಹೆಚ್ಚಿನ ಜನರು ಮಾತನಾಡಲು ಮಾತ್ರ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದಿಲ್ಲ, ಬದಲಿಗೆ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಗಾಗಿಯೂ ಸ್ಮಾರ್ಟ್ಫೋನ್ಗಳು ಬಹಳಷ್ಟು ಸಹಾಯಕವಾಗುತ್ತದೆ. ಇನನ್ಉ ಕೆಲವರು ರೀಲ್ಸ್, ಶಾರ್ಟ್ ವಿಡಿಯೋಗಳನ್ನು ಮಾಡಲು ಸಹ ಫೋನ್‌ನ ಕ್ಯಾಮೆರಾವನ್ನು ಬಳಸುತ್ತಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ, ಅವರು ತಮ್ಮ ಫೋನ್‌ನ ಕ್ಯಾಮೆರಾದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಸ್ಮಾರ್ಟ್‌ಫೋನ್ ಕ್ಯಾಮೆರಾದಿಂದ ಯಾವಾಗಲೂ ಉತ್ತಮ ಫೋಟೋಗಳನ್ನು ತೆಗೆಯಬೇಕಾದರೆ, ನೀವು ಕಾಲಕಾಲಕ್ಕೆ ಅದನ್ನು ಕ್ಲೀನ್ ಮಾಡುತ್ತಿರಬೇಕು. ನಿಮ್ಮ ಫೋನ್‌ನ ಕ್ಯಾಮೆರಾ ಬ್ಲರ್ ಆಗಿದ್ದರೆ ಮತ್ತು ಅದರಿಂದ ಉತ್ತಮ ಫೋಟೋಗಳು ತೆಗೆಯಲು ಸಾಧ್ಯವಾಗುತ್ತಿಲ್ಲವೆಂದರೆ, ಇಂದು ನಾವು ನಿಮಗೆ ಕೆಲವು ಟ್ರಿಕ್‌ಗಳನ್ನು ಹೇಳುತ್ತೇವೆ. ಈ ಮೂಲಕ ನೀವು ಫೋನ್‌ನ ಕ್ಯಾಮೆರಾವನ್ನು ಚಿಟಿಕೆಯಲ್ಲಿ ಕ್ಲೀನ್ ಮಾಡಬಹುದು.