ಮೊಬೈಲ್ ಬಳಸದೇ ಇರುವವರು ಯಾರಿದ್ದಾರೆ ಹೇಳಿ, ಈಗ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದ್ದೇ ಇದೆ. ಆದರೆ ಈ ಮೊಬೈಲ್ಗಳು ಇತ್ತೀಚಿನ ಯುಗದಲ್ಲಿ ಪ್ರಮುಖ ಸಾಧನವಾಗಿಬಿಟ್ಟಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಮೊಬೈಲ್ಗಳು ಬಿಡುಗಡೆಯಾಗುತ್ತಿರುತ್ತದೆ. ಅದ್ರಲ್ಲಿ ಐಫೋನ್ಗಳು ಕೂಡ ಒಂದು. ಈ ಸ್ಮಾರ್ಟ್ಫೋನ್ಗಳು ತನ್ನದೇ ಆದ ಶೈಲಿಯಲಗಲಿ ಮಾರುಕಟ್ಟೆಯಲ್ಲಿ ಸ್ಥಾನವನ್ನು ಪಡೆದುಕೋಮಡಿದೆ. ಈ ಸ್ಮಾರ್ಟ್ಫೋನ್ನ ಬೆಳವಣಿಗೆಗ ಇದರ ಫೀಚರ್ಸ್ಗಳೇ ಕಾರಣ ಅಂತಾನೂ ಹೇಳ್ಬಹುದು.
2019 ರಲ್ಲಿ, ಆ್ಯಪಲ್ ಕಂಪನಿಯು ಐಫೋನ್ 11 ಸರಣಿಯನ್ನು ಪ್ರಾರಂಭಿಸಿತು. ಅದರ ಮುಂದುವರಿಕೆಯಾಗಿ, ಐಫೋನ್ 11 ಪ್ರೋ ಮತ್ತು ಐಫೋನ್ 11 ಪ್ರೋ ಮ್ಯಾಕ್ಸ್ ಸೀರಿಸ್ಗಳು ಸಹ ಮಾರುಕಟ್ಟೆಯನ್ನು ಪ್ರವೇಶಿಸಿವೆ. ಐಫೋನ್ 11 ಅನ್ನು ಮಾರುಕಟ್ಟೆಯಲ್ಲಿ ಬಹಳಷ್ಟು ಬೇಗನೆ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ಫೋನ್ನ ಆರಂಭಿಕ ಬೆಲೆ 64,900 ರೂಪಾಯಿಯಾಗಿದೆ. 2020 ರಲ್ಲಿ, ಇದು ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಫೋನ್ ಎಂಬ ದಾಖಲೆಯನ್ನು ಕೂಡ ಪಡೆದಿದೆ.
ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಆಗಿರುವ ಫ್ಲಿಪ್ಕಾರ್ಡ್ಐಫೋನ್ 11 ನಲ್ಲಿ ರೂ.3991 ರ ರಿಯಾಯಿತಿಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಗ್ರಾಹಕರು ಈ ಕೊಡುಗೆಯೊಂದಿಗೆ ಖರೀದಿ ಮಾಡಬಹುದು ಅಂದರೆ ರೂ.39,999 ಕ್ಕೆ ಐಫೋನ್ 11 ಅನ್ನು ಹೊಂದಬಹುದು. ನೀವು ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಮೂಲಕ ರೂ.5000 ಕ್ಕಿಂತ ಹೆಚ್ಚಿನ ಶಾಪಿಂಗ್ ಮಾಡಿದರೆ, ನೀವು 10% ರಿಯಾಯಿತಿಯನ್ನು ಅಂದರೆ ರೂ.1500 ವರೆಗೆ ಈ ಸ್ಮಾರ್ಟ್ಫೋನ್ ಅನ್ನು ಪಡೆಯಬಹುದು
ಐಫೋನ್ 11 6.1-ಇಂಚಿನ ಲಿಕ್ವಿಡ್ ರೆಟಿನಾ HD ಡಿಸ್ಪ್ಲೇಯನ್ನು ಹೊಂದಿದೆ. ಇದು 12MP ಡ್ಯುಯಲ್ ಸೆನ್ಸಾರ್ ಹಿಂಬದಿಯ ಕ್ಯಾಮೆರಾ, 12MP ಸೆಲ್ಫಿ ಶೂಟರ್ ಕ್ಯಾಮೆರಾ, A13 ಬಯೋನಿಕ್ ಚಿಪ್ ಸೆಟ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನೂ, ಈ ಐಫೋನ್ 11 ಸೀರಿಸ್ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಸೇಲ್, ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ನಲ್ಲಿ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದ ಸ್ಮಾರ್ಟ್ಫೋನ್ ಆಗಿದೆ.