ಇ-ಕಾಮರ್ಸ್ ವ್ಯವಹಾರವು ಪ್ರಸ್ತುತ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಅನೇಕ ಜನರು ಆನ್ಲೈನ್ನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಆದರೆ ಕೆಲವು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಉತ್ಪನ್ನಗಳ ಬಗ್ಗೆ ನಕಲಿ ರಿವ್ಯೂವ್ ನೀಡುತ್ತದೆ. ಈ ರೀತಿಯಿಂದ ಇತ್ತೀಚೆಗೆ ಗ್ರಾಹಕರು ಹೆಚ್ಚು ಮೋಸಹೋಗುತ್ತಿದ್ದಾರೆ. ಜೊತೆಗೆ ಸಾಕಷ್ಟು ನಷ್ಟವನ್ನೂ ಅನುಭವಿಸುತ್ತಿದ್ದಾರೆ.
ಈ ಪದ್ಧತಿಗಳನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಆನ್ಲೈನ್ ನಕಲಿ ರಿವ್ಯೂವ್ ನೀಡುವವರಿಗೆ ಮಾನದಂಡಗಳನ್ನು ಅನುಷ್ಠಾನಗೊಳಿಸುವ ವಿಶ್ವದ ಮೊದಲನೆಯ ನಿಯಮವನ್ನು ಸರ್ಕಾರ ನಬಿಡುಗಡೆ ಮಅಡಿದೆ.. ಆನ್ಲೈನ್ ವಿಮರ್ಶೆಗಳಿಗೆ ಸರ್ಕಾರ ವಿಧಿಸಿರುವ ನಿಯಮಾವಳಿಗಳು ನವೆಂಬರ್ 25 ರಿಂದ ಜಾರಿಗೆ ಬಂದಿದ್ದು.ಇಲ್ಲಿ ಗ್ರಾಹಕರು ಯಾವುದೇ ಉತ್ಪನ್ನವನ್ನು ನೋಡಬೇಕದರೆ ಅದರ ವಿಮರ್ಶೆಗಳು ಯಾರು, ಎಲ್ಲಿಂದ ಯಾವ ರೀತಿಯಲ್ಲಿ ರಿವ್ಯೂವ್ ನೀಡಿದ್ದಾರೆಂದು ನೋಡಬಹುದಾಗಿದೆ.
ಸರ್ಕಾರವು ರಚಿಸಿದ ಹೊಸ ನಿಯಮಗಳ ಪ್ರಕಾರ.. ಎಲ್ಲಾ ಇ-ಕಾಮರ್ಸ್ ಕಂಪನಿಗಳು, ಪ್ರಯಾಣ, ಟಿಕೆಟಿಂಗ್ ಪೋರ್ಟಲ್ಗಳು, ಆನ್ಲೈನ್ ಫುಡ್ ಡೆಲಿವರಿ ,ಅಪ್ಲಿಕೇಶನ್ಗಳು ತಮ್ಮ ಪೋರ್ಟಲ್ಗಳಲ್ಲಿ ನೀಡಲಾಗುವ ಉತ್ಪನ್ನಗಳು ಮತ್ತು ಸೇವೆಗಳ ಕುರಿತು ಹಣಕೊಟ್ಟು ಅಥವಾ ಸ್ಪಾನ್ಸರ್ ಮಾಡಿದ ವಿಮರ್ಶೆಗಳನ್ನು ಸ್ವಯಂಪ್ರೇರಣೆಯಿಂದ ಬಹಿರಂಗಪಡಿಸಬೇಕು. ಈ ರೀತಿಯ ಕಂಪನಿಗಳು ಮೂರನೇ ವ್ಯಕ್ತಿಗಳು ಖರೀದಿಸಿದ ಅಥವಾ ಬರೆದ ವಿಮರ್ಶೆಗಳನ್ನು ಪ್ರಕಟಿಸಲು ಸಾಧ್ಯವಿಲ್ಲ.
ಉತ್ಪನ್ನಗಳು ಮತ್ತು ಸೇವೆಗಳ ನಕಲಿ ಮತ್ತು ಮೋಸದ ವಿಮರ್ಶೆಗಳ ಬೆದರಿಕೆಯನ್ನು ತಡೆಯಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ತಂದ ಆನ್ಲೈನ್ ಗ್ರಾಹಕ ವಿಮರ್ಶೆಗಳು ಮತ್ತು ರೇಟಿಂಗ್ಗಳ ಕುರಿತು ಸರ್ಕಾರವು ಸೋಮವಾರ ಹೊಸ ಮಾನದಂಡಗಳನ್ನು ಅನಾವರಣಗೊಳಿಸಿದೆ. ಯಾವುದೇ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಇಂತಹ ನಕಲಿ ವಿಮರ್ಶೆಗಳನ್ನು ಬರೆಯುವ ಗ್ರಾಹಕರಿಗೂ ಈ ನಿಯಮ ಅನ್ವಯಿಸುತ್ತದೆ ಎಮದು ಸರ್ಕಾರ ತಿಳಿಸಿದೆ.
ಈ ಎಲ್ಲಾ ನಿಯಮಗಳನ್ನು ಅನುಸರಿಸಲು ವಿಫಲವಾದರೆ ಅನ್ಯಾಯದ ವ್ಯಾಪಾರ ಅಭ್ಯಾಸ ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು BIS ಎಚ್ಚರಿಸಿದೆ. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತ ನಿಧಿ ಖರೆ, ಈ ಫೇಕ್ ರಿವ್ಯೂವ್ಗಳನ್ನು ವಿವರಿಸಿದ್ದಾರೆ. ಆನ್ಲೈನ್ ವಿಮರ್ಶೆಗಳು ಮೂರು ಪ್ರಮುಖ ಕ್ಷೇತ್ರಗಳಲ್ಲಿ ಗ್ರಾಹಕರ ಮೇಲೆ ಪ್ರಮುಖ ಪ್ರಭಾವ ಬೀರುತ್ತವೆ ಎಂದು ಹೇಳಿದ್ದಾರೆ.
ಇವುಗಳಲ್ಲಿ ಪ್ರವಾಸ, ಪ್ರಯಾಣ, ಉಪಹಾರಗೃಹ, ಆಹಾರ ಪದಾರ್ಥಗಳು ಸೇರಿವೆ. ಹೊಸ ಮಾನದಂಡಗಳ ಪ್ರಕಾರ, BIS ವಿಮರ್ಶೆಗಳನ್ನು ವಿನಂತಿಸಿದ ಮತ್ತು ಅಪೇಕ್ಷಿಸದ ಎಂದು ಎರಡು ಆಯ್ಕೆಯನ್ನು ನೀಡಿದೆ. ಯಾವುದೇ ಸಂಸ್ಥೆಯಲ್ಲಿ ವಿಮರ್ಶೆಗಳನ್ನು ನಿರ್ವಹಿಸುವ ಒಬ್ಬ ವ್ಯಕ್ತಿ ಇರುತ್ತಾರೆ. ಈ ವ್ಯಕ್ತಿಯನ್ನು ವಿಮರ್ಶೆ ನಿರ್ವಾಹಕ ಎಂದು ಕರೆಯಲಾಗುತ್ತದೆ. ಇವರು ತಮ್ಮ ಸಂಸ್ಥೆಗೆ ಬಂದ ರಿವ್ಯೂವ್ಗಳನ್ನು ಬೇಕಾ, ಬೇಡವೆ ಎಂದು ನಿರ್ಧರಿಸುತ್ತಾರೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಒಂದು ಉದ್ಯಮ ಯಶಸ್ಸು ಕಾಣಬೇಕಾದರೆ ಇದಕ್ಕೆ ಪರ್ಮಾಣಿಕತೆ ಮುಖ್ಯ ಎಂದು ಹೇಳುತ್ತಾರೆ. ಸದ್ಯಕ್ಕೆ ಮಾತ್ರ ಈ ನಿಯಮವನ್ನು ಜಾರಿಗೊಳಿಸಲಾಗುವುದು ಮತ್ತು ಈ ರೀತಿಯ ಮೋಸಗಳು ಹೆಚ್ಚಾದರೆ, ಮುಂದಿನ ದಿನಗಳಲ್ಲಿ ಅದನ್ನು ಕಡ್ಡಾಯಗೊಳಿಸಲಾಗುವುದು ಎಂದು ಅವರು ಹೇಳಿದರು. ಇವೆಲ್ಲವೂ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ.