GoPro Hero 10 Black: ಆ್ಯಕ್ಷನ್ ಕ್ಯಾಮೆರಾ ತಯಾರಕ ಗೋಪ್ರೊ ತನ್ನ ಮುಂದಿನ ಸಾಧನವಾದ ಗೋಪ್ರೊ ಹೀರೋ 10 ಬ್ಲ್ಯಾಕ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡುತ್ತಿದೆ. ಅದಕ್ಕೂ ಮುಂಚೆ ಗೋಪ್ರೊ ಹೀರೋ 10 ಬ್ಲ್ಯಾಕ್ ಕುರಿತ ಸಂಪೂರ್ಣ ಮಾಹಿತಿ ಸೋರಿಕೆಯಾಗಿದೆ. ವಿನ್ಫ್ಯೂಚರ್ ಗೋಪ್ರೊ ಕ್ಯಾಮೆರಾದ ಬಗ್ಗೆ ಸೋರಿಕೆ ಮಾಡಿದ್ದು, ಹೆಚ್ಚು ಶಕ್ತಿಶಾಲಿ ಜಿಪಿ 2 ಪ್ರೊಸೆಸರ್ನೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ.
ಹೊಸ ಗೋಪ್ರೊ 10 ಬ್ಲಾಕ್ನಲ್ಲಿ ಅಳವಡಿಸಿರುವ ಜಿಪಿ 2 ಪ್ರೊಸೆಸರ್ 5.3 ಕೆ ವೀಡಿಯೋಗಳನ್ನು 60 ಎಫ್ಪಿಎಸ್ನಲ್ಲಿ ಅಥವಾ 4ಕೆ ವಿಡಿಯೋಗಳನ್ನು 120 ಎಫ್ಪಿಎಎಸ್ನಲ್ಲಿ ಚಿತ್ರೀಕರಿಸುವ ಬೆಂಬಲದೊಂದಿಗೆ ಕಾರ್ಯಕ್ಷಮತೆಯಲ್ಲಿ ಪ್ರಮುಖ ಉತ್ತೇಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ನಿಧಾನ ಚಲನೆಯ ಶಾಟ್ಗಳಿಗೆ ಉಪಯುಕ್ತವಾಗಿದೆ. (ಚಿತ್ರ ಕ್ರೆಡಿಟ್: ವಿನ್ ಫ್ಯೂಚರ್). (Image Credit: WinFuture)