ನಮ್ಮಲ್ಲಿ ಈ ಮೊಬೈಲ್ ಪ್ರಿಯರು ಹೊಸ ಹೊಸ ಮೊಬೈಲ್ ಫೋನ್ ಗಳು ಯಾವಾಗ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತೆ ಅಂತ ತುಂಬಾನೇ ಕಾತುರತೆಯಿಂದ ಕಾಯುತ್ತಾ ಕುಳಿತಿರುತ್ತಾರೆ. ಈಗ ಮತ್ತೊಂದು ಮಧ್ಯಮ ಶ್ರೇಣಿಯ ಫೋನ್ ಬಿಡುಗಡೆಯ ದಿನಾಂಕವನ್ನು ಗೂಗಲ್ ಇಂಡಿಯಾ ತಿಳಿಸಿದೆ. ಹೊಸ ಪಿಕ್ಸೆಲ್ ಫೋನ್ ಮೇ 11 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು ಇದು ಫ್ಲಿಪ್ಕಾರ್ಟ್ನಲ್ಲಿ ಮೊಬೈಲ್ ಪ್ರಿಯರಿಗೆ ಖರೀದಿಗಾಗಿ ಲಭ್ಯವಿರುತ್ತದೆ ಎಂದು ಟೆಕ್ ದೈತ್ಯ ಗೂಗಲ್ ಇಂಡಿಯಾ ತನ್ನ ಟ್ವಿಟ್ಟರ್ ಖಾತೆಯ ಪುಟದಲ್ಲಿ ಘೋಷಿಸಿದೆ.
ಪಿಕ್ಸೆಲ್ 7ಎ ಗೂಗಲ್ ನ ಟೆನ್ಸರ್ ಜಿ 2 ಚಿಪ್ಸೆಟ್ ಅನ್ನು ಬಳಸುತ್ತದೆ ಎಂದು ಇಲ್ಲಿಯವರೆಗೆ ಸೋರಿಕೆಯಾದ ಮಾಹಿತಿಗಳು ಸೂಚಿಸಿದ್ದವು. ಪಿಕ್ಸೆಲ್ 6 ಸೀರಿಸ್ ಫೋನ್ ನ ಬಿಡುಗಡೆಯೊಂದಿಗೆ ಕಂಪನಿಯು ತನ್ನ ಕಂಪನಿಯಲ್ಲಿ ತಯಾರಿಸಿದ ಚಿಪ್ಸೆಟ್ ಅನ್ನು ಬಳಸಲು ಪ್ರಾರಂಭಿಸಿತು. ಇದು ಎಲ್‌ಪಿಡಿಡಿಆರ್ 5 ರ‍್ಯಾಮ್ ಮತ್ತು ಯುಎಫ್ಎಸ್ 3.1 ಸ್ಟೋರೇಜ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.