ಗೂಗಲ್ ಹೊಸ ಸ್ಮಾರ್ಟ್ವಾಚ್ವೊಂದನ್ನು ಸಿದ್ಧಪಡಿಸಿದ್ದು, ಮೇ 26 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಜನಪ್ರಿಯ ಟಿಪ್ಸ್ಟಾರ್ ಜಾನ್ ಪ್ರಾಸರ್ ಹೇಳಿದ್ದಾರೆ. ಟ್ವೀಟ್ನಲ್ಲಿ, ಜಾನ್ ಪ್ರಾಸ್ಸರ್ ಅವರು ಪಿಕ್ಸೆಲ್ ವಾಚ್ ಮೇ ತಿಂಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಗೂಗಲ್ ಪ್ಲಾನ್ ಹಾಕಿಕೊಂಡಿದೆ ಎಂದಿದ್ದಾರೆ. ಆದರೆ ಬಿಡುಗಡೆಯ ದಿನಾಂಕಗಳು ಮುಂದಕ್ಕೆ ಹೋಗುವ ಸಾಧ್ಯತೆಯು ಇರಬಹುದು ಎಂದು ಹೇಳಿದ್ದಾರೆ.