Google Map updates; ಇನ್ಮುಂದೆ ನಿಮ್ಮ ಊರಿನ ಸ್ಥಳ, ರಸ್ತೆ ಮಾಹಿತಿಯನ್ನು ಮ್ಯಾಪ್ನಲ್ಲಿ ಸೇರಿಸಬಹುದು!
ಇದೀಗ ಪರಿಚಯಿಸಿದ ನೂತನ ಫೀಚರ್ಸ್ನಿಂದ ಬಳಕೆದಾರರಿಗೆ ಮತ್ತಷ್ಟು ಪ್ರಯೋಜನ ಸಿಗಲಿದೆ ಜೊತೆಗೆ ತಮ್ಮ ಊರಿನ ರಸ್ತೆ ಹೆಸರು, ಮಾಹಿತಿ ಸೇರಿದಂತೆ ಯಾವುದಾದರು ಹೊಸ ಬದಲಾವಣೆ ಆಗಿದ್ದರೆ. ಅಂತಹ ಬದಲಾವಣೆಗಳನ್ನು ಸೇರಿಸಬಹುದಾಗಿದೆ.
ಜನಪ್ರಿಯ ಗೂಗಲ್ ಮ್ಯಾಪ್ನಲ್ಲಿ ಹೊಸ ಅಪ್ಡೇಟ್ವೊಂದನ್ನು ನೀಡಲಾಗಿದೆ. ಬಳಕೆದಾರರು ಹೊಸ ರಸ್ತೆಯನ್ನು ಸೇರ್ಪಡೆ ಮಾಡುವುದರ ಜೊತೆಗೆ ಹಲವಾರು ಸೌಲಭ್ಯಗಳನ್ನು ಇದರಲ್ಲಿ ಪರಿಚಯಿಸಿದೆ.
2/ 7
ವಿಶ್ವದಾದ್ಯಂತ ಸಾಕಷ್ಟು ಜನರು ಗೂಗಲ್ ಮ್ಯಾಪ್ ಬಳಸುತ್ತಿದ್ದಾರೆ. ಗೊತ್ತಿಲ್ಲದೆ ಇರುವ ಸ್ಥಳದ ಬಗ್ಗೆ ಮತ್ತು ಅಲ್ಲಿರುವ ಸೌಲಭ್ಯ, ರಸ್ತೆ ಸೌಕರ್ಯದ ಬಗ್ಗೆ ತಿಳಿಯಲು ಗೂಗಲ್ ಮ್ಯಾಪ್ ಬಳಸುತ್ತೇವೆ. ಅದನ್ನು ಮೂಲವಾಗಿಟ್ಟುಕೊಂಡು ಸಂಚರಿಸುತ್ತೇವೆ.
3/ 7
ಇದೀಗ ಪರಿಚಯಿಸಿದ ನೂತನ ಫೀಚರ್ಸ್ನಿಂದ ಬಳಕೆದಾರರಿಗೆ ಮತ್ತಷ್ಟು ಪ್ರಯೋಜನ ಸಿಗಲಿದೆ ಜೊತೆಗೆ ತಮ್ಮ ಊರಿನ ರಸ್ತೆ ಹೆಸರು, ಮಾಹಿತಿ ಸೇರಿದಂತೆ ಯಾವುದಾದರು ಹೊಸ ಬದಲಾವಣೆ ಆಗಿದ್ದರೆ. ಅಂತಹ ಬದಲಾವಣೆಗಳನ್ನು ಸೇರಿಸಬಹುದಾಗಿದೆ.
4/ 7
ಅದರ ಜೊತೆಗೆ ಹೊಸ ರಸ್ತೆಯ ಸೌಲಭ್ಯಗಳಿದ್ದರೆ ಅವುಗಳನ್ನು ಕೂಡಾ ಮ್ಯಾಪ್ನಲ್ಲಿ ಸೇರಿಸಬಹುದಾಗಿದೆ. ಆ್ಯಪ್ ಬಳಕೆದಾರರು ಈ ಬದಲಾವಣೆಯನ್ನು ಮಾಡಬಹುದಾಗಿದೆ.
5/ 7
ಗೂಗಲ್ ಮ್ಯಾಪ್ ಈ ನೂತನ ಸೌಲಭ್ಯಕ್ಕೆ ಡ್ರಾಯಿಂಗ್ ಎಂದು ಹೆಸರಿಟ್ಟಿದೆ. ಇದು ಮೈಕ್ರೊಸಾಫ್ಟ್ನ ‘ಮೈಕ್ರೋಸಾಫ್ಟ್ ಫೇಯಿಂಟ್’’ ಫೀಚರ್ ಹೋಲುತ್ತಿದ್ದು, ಸುಲಭವಾಗಿ ಗೂಗಲ್ನಲ್ಲಿ ಬದಲಾವಣೆ ಮಾಡಬಹುದಾಗಿದೆ.
6/ 7
ಗೂಗಲ್ ಮ್ಯಾಪ್ ಬಳಕೆದಾರರು ಒಂದು ಸ್ಥಳದ ಕುರಿತ ಮಾಹಿತಿಯನ್ನು ಜೊತೆಗೆ ಮ್ಯಾಪ್ನಲ್ಲಿ ಹೊಸ ಬದಲಾವಣೆಯನ್ನು ಮಾಡಿದ ಬಳಿಕ ಆ ಮಾಹಿತಿ ಸರಯಾಗಿದೆಯಾ ಎಂದು ತಿಳಿಯಲು ಗೂಗಲ್ 7 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ..
7/ 7
ಇದರ ಜೊತೆಗೆ ಗೂಗಲ್ ಫೋಟೋ ಅಪ್ಡೇಟ್ ಮಾಡುವ ಸೌಲಭ್ಯವನ್ನು ತರಲು ಮುಂದಾಗಿದೆ. ಬಳಕೆದಾರರು ಪ್ರದೇಶದ ಫೋಟೋ ಕ್ಲಿಕ್ಕಿಸುವದರ ಜೊತೆಗೆ ಮಾಹಿತಿ ಹಂಚಿಕೊಳ್ಳಬಹುದಾಗಿದೆ.