ಕಿಟ್ಟಿ ಓ ನೀಲ್ ಅವರು ಹುಟ್ಟಿನಿಂದಲೇ ಕಕಿವುಡುತನವನ್ನು ಹೊಂದಿದ್ದರು. ಆದರೆ ಇದನ್ನೇ ಪಾಸಿಟಿವ್ ಆಗಿ ತೆಗೆದುಕೊಂದು, ಅದು ನನ್ನ ಆಸ್ತಿ ಎಂದುಕೊಂಡು ಜೀವನದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ತನ್ನ ಎಷ್ಟೇ ಕಷ್ಟಗಳಿದ್ದರು ವೃತ್ತಿಪರ ಅಥ್ಲೀಟ್ ಆಗುವ ತನ್ನ ಕನಸನ್ನು ನನಸಾಗಿಸುವ ಛಲವನ್ನು ಹೊಂದಿದ್ದರು ಎಂದು ಗೂಗಲ್ ಹೇಳಿದೆ. ಓ ನೀಲ್ ವಾಟರ್ ಸ್ಕೀಯಿಂಗ್ ಮತ್ತು ಮೋಟಾರ್‌ಸೈಕಲ್ ರೇಸಿಂಗ್‌ನಂತಹ ಹೈ-ಸ್ಪೀಡ್ ಕ್ರೀಡೆಗಳಲ್ಲಿ ಭಾಗವಹಿಸಿ ತನ್ನ ಸಾಧನೆ ಏನೆಮದು ಜಗತ್ತಿಗೆ ತೋರಿಸಿದ್ದಾರೆ.