ಪ್ಲೇ ಸ್ಟೋರ್ನಿಂದ 600 ಆ್ಯಪ್ಗಳನ್ನು ಕಿತ್ತೆಸೆದ ಗೂಗಲ್: ಯಾವ ಕಾರಣಕ್ಕಾಗಿ ಗೊತ್ತಾ?
Google Play store: ಪ್ಲೇ ಸ್ಟೋರ್ನಲ್ಲಿ ದೊರಕುವ ಸಾಕಷ್ಟು ಆ್ಯಪ್ಗಳು ಜಾಹೀರಾತನ್ನು ಪ್ರಕಟಿಸುತ್ತವೆ. ಆದರೆ ಕೆಲವೊಂದು ಆ್ಯಪ್ಗಳು ಬಳಕೆದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.
ಗೂಗಲ್ 600 ಆ್ಯಪ್ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಿದೆ. ಜಾಹೀರಾತು ನೀತಿಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಗೂಗಲ್ ಈ ರೀತಿಯ ನಿರ್ಧಾರ ಕೈಗೊಂಡಿದೆ.
2/ 10
ಪ್ಲೇ ಸ್ಟೋರ್ನಲ್ಲಿ ದೊರಕುವ ಸಾಕಷ್ಟು ಆ್ಯಪ್ಗಳು ಜಾಹೀರಾತನ್ನು ಪ್ರಕಟಿಸುತ್ತವೆ. ಆದರೆ ಕೆಲವೊಂದು ಆ್ಯಪ್ಗಳು ಬಳಕೆದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.
3/ 10
ಈ ಹಿನ್ನೆಲೆಯಲ್ಲಿ ಗೂಗಲ್ ಆ್ಯಡ್ಮಾಬ್ ಮತ್ತು ಗೂಗಲ್ ಆ್ಯಡ್ ಮ್ಯಾನೇಜರ್ನಿಂದಲೂ ಅವುಗಳಿಗೆ ನಿಷೇಧ ಹೇರಿತ್ತು.
4/ 10
ಬಳಕೆದಾರರನ್ನು ದಾರಿ ತಪ್ಪಿಸುವ ಇಂತಹ ಆ್ಯಪ್ಗಳನ್ನು ಮಶೀನ್ ಲರ್ನಿಂಗ್ ತಂತ್ರಜ್ಞಾನದ ಮೂಲಕ ಗೂಗಲ್ ಪತ್ತೆಹಚ್ಚಿ ತೆಗೆದು ಹಾಕಿದೆ.
5/ 10
ಸುಮಾರು 600 ಆ್ಯಪ್ಗಳು ಜಾಹೀರಾತು ನೀತಿಯನ್ನು ಉಲ್ಲಂಘಿಸಿದ್ದವು. ಈ ಕಾರಣಕ್ಕಾಗಿ ಗೂಗಲ್ ಪ್ಲೇ ಸ್ಟೋರ್ನಿಂದ ಕೆಲ ಆ್ಯಪ್ಗಳನ್ನು ಕಿತ್ತೆಸೆದಿದೆ.
6/ 10
2019 ರಲ್ಲಿ ಗೂಗಲ್ ಬಳಕೆದಾರರಿಗೆ ತೊಂದರೆ ನೀಡುವ ಸಾವಿರಾರು ಆ್ಯಪ್ಗಳನ್ನು ತೆಗೆದು ಹಾಕಿತ್ತು.
7/ 10
ಆ್ಯಂಡ್ರಾಯ್ಡ್ಗೆ ಬಳಸಲಾಗುವ ಅಪ್ಲಿಕೇಶನ್ಗಳಲ್ಲಿ ಜಾಹೀರಾತನ್ನು ನಿಯಂತ್ರಿಸುವ ಕೆಲಸ ಗೂಗಲ್ ಮಾಡುತ್ತಿದೆ. ಆದರೆ ಕೆಲ ಆ್ಯಪ್ಗಳು ಗೂಗಲ್ಗೆ ತಿಳಿಯದೆ ಜಾಹೀರಾತು ನೀತಿಯನ್ನು ಉಲ್ಲಂಘಿಸಿದ್ದವು.
8/ 10
ಕೆಲ ದಿನಗಳ ಹಿಂದೆ ಗೂಗಲ್ 24 ಮಾಲ್ವೇರ್ ಆ್ಯಪ್ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಿದೆ.
9/ 10
ಈ ಆ್ಯಪ್ಗಳನ್ನು ಚೀನಾದ ಶೆನ್ಜೆನ್ ಹವ್ಕ್ ಕಂಪೆನಿ ಸಿದ್ಧಪಡಿಸಿದ್ದು, 38 ಮಿಲಿಯನ್ ಜನರು ಈ ಆ್ಯಪ್ಗಳನ್ನು ಬಳಸುತ್ತಿದ್ದಾರೆ ಎಂದು ವಿಪಿಎನ್ ಪ್ರೋ ವರದಿ ಮಾಡಿತ್ತು.
10/ 10
ಗೂಗಲ್ ನಿಯಮವನ್ನು ಉಲ್ಲಂಘಿಸಿದ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೂಗಲ್ ತಿಳಿಸಿತ್ತು.