ಅಗ್ಗದ ಯೋಜನೆಗಳಿಗಾಗಿ ಟೆಲಿಕಾಂ ಕಂಪನಿಗಳ ನಡುವೆ ನಿರಂತರ ಪೈಪೋಟಿ ನಡೆಯುತ್ತಲೇ ಇದೆ. ಈ ಹಿನ್ನಲೆಯಲ್ಲಿ ಪ್ರಮುಖ ಟೆಲಿಕಾಂ ಕಂಪನಿ ಏರ್ ಟೆಲ್ ಇತ್ತೀಚೆಗೆ ಎರಡು ಹೊಸ ಪ್ಲ್ಯಾನ್ ತಂದಿದೆ. ಈ ಯೋಜನೆಗಳ ಬೆಲೆ ರೂ.489 ಮತ್ತು ರೂ.509. ಈ ಯೋಜನೆಗಳಲ್ಲಿ ಗ್ರಾಹಕರು ಉತ್ತಮ ಡೇಟಾ ಪ್ರಯೋಜನವನ್ನೂ ಪಡೆಯುತ್ತಾರೆ. ಹೆಚ್ಚಿನ ಡೇಟಾವನ್ನು ಬಳಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಯೋಜನೆಗಳನ್ನು ಪರಿಚಯಿಸಿದೆ.