ಯೂಟ್ಯೂಬರ್ಗಳಿಗೆ ದೊಡ್ಡ ಸುದ್ದಿ. ಕಿರು ವಿಡಿಯೋಗಳ ಮೂಲಕ ಹಣ ಗಳಿಸಲು ಬಯಸುವವರಿಗೆ ಇದೊಂದು ಬಂಪರ್ ಆಫರ್. ಯೂಟ್ಯೂಬ್ ಪಾಲುದಾರ ಕಾರ್ಯಕ್ರಮ' (YPP) ಕೆಲವು ನಿಯಮಗಳನ್ನು ಸೇರಿಸುವ ಮೂಲಕ ಹೊಸ 'ಶಾರ್ಟ್ಸ್ ಮಾನಿಟೈಸೇಶನ್ ಮಾಡ್ಯೂಲ್' ಅನ್ನು ಇದೀಗ ಪರಿಚಯಿಸಿದೆ. ಈ ಕಿರುವಿಡಿಯೋ ಅಥವಾ ಶಾರ್ಟ್ಸ್ಗಳ ಮೂಲಕ ಹಣಗಳಿಕೆ ಮಾಡ್ಯೂಲ್ ಪ್ರಕಾರ, ಶಾರ್ಟ್ಸ್ನಲ್ಲಿ ಬರುವಂತಹ ಜಾಹೀರಾತುಗಳಿಂದ ಹಣವನ್ನು ನೀಡುತ್ತದೆ.
ಯೂಟ್ಯೂಬ್ನ ಹೊಸ ನಿಯಮ: ಇನ್ಮುಂದೆ ಯೂಟ್ಯೂಬ್ ಕ್ರಿಯೇಟರ್ಸ್ಗಳಿಗೆ ಇನ್ನಷ್ಟು ಹಣವನ್ನು ಗಳಿಸುವ ವೇದಿಕೆ ಯೂಟ್ಯೂಬ್ ಆಗಲಿದೆ. ಆದರೆ ರಚನೆಕಾರರು ಹೊಸ ನಿಯಮಗಳು ಮತ್ತು ಮಾಡ್ಯೂಲ್ಗಳನ್ನು ಒಪ್ಪಿಕೊಳ್ಳಬೇಕು ಮತ್ತು ಅನುಸರಿಸಬೇಕು. ಯೂಟ್ಯೂಬ್ ಕ್ರಿಯೇಟರ್ಸ್ಗಾಗಿ ಮೂರು ಹೊಸ ಮಾಡ್ಯೂಲ್ಗಳನ್ನು ಪರಿಚಯಿಸಿದೆ. ಅವುಗಳೆಂದರೆ.."ವಾಚ್ ಪೇಜ್ ಮಾನಿಟೈಸೇಶನ್ ಮಾಡ್ಯೂಲ್", "ಶಾರ್ಟ್ಸ್ ಮಾನಿಟೈಸೇಶನ್ ಮಾಡ್ಯೂಲ್", "ಕಾಮರ್ಸ್ ಪ್ರಾಡಕ್ಟ್ ಅಡೆಂಡಮ್ ಮಾಡ್ಯೂಲ್‘
ಯೂಟ್ಯೂಬ್ ಕ್ರಿಯೇಟರ್ಸ್ ವಾಚ್ ಪೇಜ್ ಮಾನಿಟೈಸೇಶನ್ ಮಾಡ್ಯೂಲ್ನ ನಿಯಮಗಳನ್ನು ಅನುಸರಿಸಿದರೆ, ಅವರು ವೀಕ್ಷಿಸಿದ ಗಂಟೆಗಳ ವಿಡಿಯೋಗಳು ಮತ್ತು ಅವರ ಚಾನಲ್ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ಆಧರಿಸಿ ಅವರಿಗೆ ಹಣವನ್ನು ಪಾವತಿಸಲಾಗುತ್ತದೆ. 'ಶಾರ್ಟ್ಸ್ ಮಾನಿಟೈಸೇಶನ್ ಮಾಡ್ಯೂಲ್' ನಿಯಮಗಳ ಪ್ರಕಾರ, ಕಿರು ವಿಡಿಯೋಗಳ ಮಧ್ಯದಲ್ಲಿ ಬರುವಂತಹ ಜಾಹೀರಾತು ವೀಕ್ಷಣೆ ಸಮಯವನ್ನು ಅವಲಂಬಿಸಿ ಆದಾಯವನ್ನು ರಚಿಸಲಾಗುತ್ತದೆ. 'ಕಾಮರ್ಸ್ ಪ್ರಾಡಕ್ಟ್ ಅಡೆಂಡಮ್' ಮೂಲಕ, ರಚನೆಕಾರರು ಅಭಿಮಾನಿಗಳಿಂದ ದೇಣಿಗೆ ಅಥವಾ ಡೊನೇಶನ್ ಅನ್ನು ಪಡೆಯುವ ಫೀಚರ್ ಅನ್ನು ರಚಿಸಬಹುದಾಗಿದೆ. ಇದನ್ನು ಫ್ಯಾನ್ ಫಂಡಿಂಗ್ ಫೀಚರ್ ಎನ್ನಬಹುದು.
ಇದುವರೆಗೆ ಅಸ್ತಿತ್ವದಲ್ಲಿರುವ ಯೂಟ್ಯೂಬ್ ಚಾನೆಲ್ಗಳು ಈ ಹೊಸ 'ಯೂಟ್ಯೂಬ್ ಪಾಲುದಾರ ಕಾರ್ಯಕ್ರಮ' (YPP) ಬಿಡುಗಡೆ ಮಾಡಿದ ನಿಯಮಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಪ್ರಪಂಚದಲ್ಲಿರುವಂತಹ ಎಲ್ಲಾ ಯೂಟ್ಯೂಬ್ ಕ್ರಿಯೇಟರ್ಸ್ ಈ ಹೊಸ YPP ನಿಯಮಗಳನ್ನು ಒಪ್ಪಿಕೊಳ್ಳಲು ಜುಲೈ 10, 2023 ಕೊನೆಯ ದಿನವಾಗಿದೆ. ಈ ದಿನಾಂಕದ ನಂತರ, ನಿಯಮಗಳನ್ನು ಒಪ್ಪಿಕೊಳ್ಳದ ಯೂಟ್ಯೂಬ್ ಕ್ರಿಯೇಟರ್ಸ್ಗಳ ಚಾನೆಲ್ಗಳನ್ನು ಡಿಲೀಟ್ ಮಾಡುವುದಲ್ಲದೆ, ಮಾನಿಟೈಸೇಶನ್ ಒಪ್ಪಂದವನ್ನೂ ತೆಗೆದುಹಾಕಲಾಗುತ್ತದೆ ಎಂದು ಹೇಳಿದೆ.
ನಾಲ್ಕು ವರ್ಷಗಳ ಹಿಂದೆ, ಯೂಟ್ಯೂಬ್ ಚಾನೆಲ್ಗಳು ಅಷ್ಟೊಂದು ಜನಪ್ರಿಯತೆಯಲ್ಲಿರಲಿಲ್ಲ. ಆದರೆ ಕೋವಿಡ್ ಅವಧಿಯಲ್ಲಿ ಒಟಿಟಿಯ ಜನಪ್ರಿಯತೆಯಂತೆಯೇ, ಯೂಟ್ಯೂಬ್ನ ಕ್ರೇಜ್ ಅಪಾರವಾಗಿ ಹೆಚ್ಚಾಗಿದೆ. ಸಣ್ಣದಾಗಿ ಆರಂಭವಾದ ಯೂಟ್ಯೂಬ್ ಚಾನೆಲ್ ಗಳು ಸ್ಯಾಟಲೈಟ್ ಚಾನೆಲ್ ಗಳಿಗೆ ಗಂಭೀರ ಪೈಪೋಟಿ ನೀಡುತ್ತಿವೆ. ಅದೇ ರೀತಿ ಲಾಭವೂ ಸಹ ಹೆಚ್ಚುತ್ತಿದೆ. ಯೂಟ್ಯೂಬ್ ಮೂಲಕ ಜನರಲ್ಲಿರುವಂತಹ ವಿಭಿನ್ನ ಪ್ರತಿಭೆಗಳು ಕೂಡ ಹೊರಬರುತ್ತಿವೆ
ಯೂಟ್ಯೂಬ್ನಲ್ಲಿ ಕಿರುಚಿತ್ರಗಳನ್ನು ನಿರ್ದೇಶಿಸಿವರು ನಂತರ ಚಲನಚಿತ್ರ ಮಾಡುವ ಅವಕಾಶವನ್ನು ಪಡೆದರು ಮತ್ತು ಈಗ ದೇಶದ ಅತಿದೊಡ್ಡ ಬಜೆಟ್ ಚಿತ್ರ ಮಾಡುವ ಮಟ್ಟಕ್ಕೆ ಅಭಿವೃದ್ಧಿಯಾಗಿದ್ದಾರೆ. ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ಶಿಕ್ಷಕರು ತಮ್ಮ ಶಿಕ್ಷಣ ಮತ್ತು ಅಡುಗೆಯ ಜ್ಞಾನವನ್ನು ಯೂಟ್ಯೂಬ್ನಲ್ಲಿ ವಿಡಿಯೋಗಳಾಗಿ ಅಪ್ಲೋಡ್ ಮಾಡುವ ಮೂಲಕ ಸಾವಿರಾರು ರೂಪಾಯಿ ಹಣ ಸಂಪಾದಿಸುತ್ತಿದ್ದಾರೆ. ಅದೇ ರೀತಿ ಟ್ರಾವೆಲಿಂಗ್ ಲಾಗ್ಗಳಿಂದ ಲಕ್ಷಗಟ್ಟಲೆ ಹಣ ಗಳಿಸುವ ಅನೇಕ ಜನರಿದ್ದಾರೆ.