Tech Tips: ವಾಟ್ಸಾಪ್​​ ಬಳಕೆದಾರರಿಗೆ ಗುಡ್​ ನ್ಯೂಸ್​! ಇನ್ಮುಂದೆ ಅಪ್ಲಿಕೇಶನ್​​ನಲ್ಲಿ ಈ ಸಮಸ್ಯೆಗಳು ಬರೋದೇ ಇಲ್ಲ

WhatsApp: ವಾಟ್ಸಾಪ್​​ ಹೊಸ ಫೀಚರ್ಸ್​​​ಗಳೊಂದಿಗೆ ಭಾರೀ ಮುಂಚೂಣಿಯಲ್ಲಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗುತ್ತಿದೆ. ಆರಂಭದಲ್ಲಿ ಕೇವಲ ಪಠ್ಯ ಸಂದೇಶಗಳನ್ನು ಕಳುಹಿಸಲು ಮಾತ್ರ ಸಾಧ್ಯವಿತ್ತು, ಈಗ ಈ ಅಪ್ಲಿಕೇಶನ್‌ನಲ್ಲಿ ಕರೆಗಳು ಮತ್ತು ವಿಡಿಯೋ ಕರೆಗಳನ್ನು ಸಹ ಮಾಡಲು ಸಾಧ್ಯವಿದೆ. ಇದೀಗ ಬಳಕೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಮತ್ತೆ ಹೊಸ ಫೀಚರ್​ವೊಂದನ್ನು ಪರಿಚಯಿಸಿದೆ.

First published:

  • 17

    Tech Tips: ವಾಟ್ಸಾಪ್​​ ಬಳಕೆದಾರರಿಗೆ ಗುಡ್​ ನ್ಯೂಸ್​! ಇನ್ಮುಂದೆ ಅಪ್ಲಿಕೇಶನ್​​ನಲ್ಲಿ ಈ ಸಮಸ್ಯೆಗಳು ಬರೋದೇ ಇಲ್ಲ

    ವಾಟ್ಸಾಪ್​​ ಹೊಸ ಫೀಚರ್ಸ್​​​ಗಳೊಂದಿಗೆ ಭಾರೀ ಮುಂಚೂಣಿಯಲ್ಲಿರುವ ಮೆಸೇಜಿಂಗ್ ಅಪ್ಲಿಕೇಶನ್ ಆಗುತ್ತಿದೆ. ಆರಂಭದಲ್ಲಿ ಕೇವಲ ಪಠ್ಯ ಸಂದೇಶಗಳನ್ನು ಕಳುಹಿಸಲು ಮಾತ್ರ ಸಾಧ್ಯವಿತ್ತು, ಈಗ ಈ ಅಪ್ಲಿಕೇಶನ್‌ನಲ್ಲಿ ಕರೆಗಳು ಮತ್ತು ವಿಡಿಯೋ ಕರೆಗಳನ್ನು ಸಹ ಮಾಡಲು ಸಾಧ್ಯವಿದೆ. ಇದೀಗ ಬಳಕೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಮತ್ತೆ ಹೊಸ ಫೀಚರ್​ವೊಂದನ್ನು ಪರಿಚಯಿಸಿದೆ.

    MORE
    GALLERIES

  • 27

    Tech Tips: ವಾಟ್ಸಾಪ್​​ ಬಳಕೆದಾರರಿಗೆ ಗುಡ್​ ನ್ಯೂಸ್​! ಇನ್ಮುಂದೆ ಅಪ್ಲಿಕೇಶನ್​​ನಲ್ಲಿ ಈ ಸಮಸ್ಯೆಗಳು ಬರೋದೇ ಇಲ್ಲ

    ವಾಟ್ಸಾಪ್​ ಇತ್ತೀಚೆಗೆ ಕೆಲವು ಸುಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ವಿಶೇಷವಾಗಿ ವೆಬ್ ಆವೃತ್ತಿಗಾಗಿ ಹೊಸ ಅಪ್ಲಿಕೇಶನ್ ಅನ್ನು ತರುವುದು, ಕರೆ ವೇಗವನ್ನು ಹೆಚ್ಚಿಸುವುದು ಮತ್ತು ಉತ್ತಮ ಬಹು-ಸಾಧನ ಬೆಂಬಲ. ಇದರಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಆ ಪ್ರಯೋಜನಗಳೇನು ಎಂಬುದನ್ನು ಈಗ ತಿಳಿದುಕೊಳ್ಳೋಣ.

    MORE
    GALLERIES

  • 37

    Tech Tips: ವಾಟ್ಸಾಪ್​​ ಬಳಕೆದಾರರಿಗೆ ಗುಡ್​ ನ್ಯೂಸ್​! ಇನ್ಮುಂದೆ ಅಪ್ಲಿಕೇಶನ್​​ನಲ್ಲಿ ಈ ಸಮಸ್ಯೆಗಳು ಬರೋದೇ ಇಲ್ಲ

    ವಾಟ್ಸಾಪ್​ ಇತ್ತೀಚೆಗೆ ತನ್ನ ವಿಂಡೋಸ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನ ಹೊಸ ಆವೃತ್ತಿಯನ್ನು ಬಳಕೆದಾರರಿಗಾಗಿ ಹೊರತಂದಿದೆ. ಈ ಆವೃತ್ತಿಯನ್ನು ವಿಶೇಷವಾಗಿ ವಿಂಡೋಸ್ ಲೋಡ್‌ಗಳಿಗಾಗಿ ತರಲಾಗಿದೆ. ಈ ಹೊಸ ಡೆಸ್ಕ್​​ಟಾಪ್​ ಅಪ್ಲಿಕೇಶನ್ ವಾಟ್ಸಾಪ್​ ಮತ್ತು ವಿಂಡೋಸ್​ ಬಳಕೆದಾರರಿಗೆ, ಪರಿಚಿತ ಬಳಕೆದಾರರ ಇಂಟರ್ಫೇಸ್ನೊಂದಿಗೆ ಬರುತ್ತದೆ.

    MORE
    GALLERIES

  • 47

    Tech Tips: ವಾಟ್ಸಾಪ್​​ ಬಳಕೆದಾರರಿಗೆ ಗುಡ್​ ನ್ಯೂಸ್​! ಇನ್ಮುಂದೆ ಅಪ್ಲಿಕೇಶನ್​​ನಲ್ಲಿ ಈ ಸಮಸ್ಯೆಗಳು ಬರೋದೇ ಇಲ್ಲ

    ಅಲ್ಲದೆ, ಈಗ ನೀವು ಈ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಎಂಟು ಜನರೊಂದಿಗೆ ಗ್ರೂಪ್​​ ವಿಡಿಯೋ ಕರೆಗಳನ್ನು ಮತ್ತು 32 ಜನರೊಂದಿಗೆ ಆಡಿಯೋ ಕರೆಗಳನ್ನು ಮಾಡಬಹುದು. ಆದರೆ ಭವಿಷ್ಯದಲ್ಲಿ ಈ ಸಂಖ್ಯೆ ಹೆಚ್ಚಾಗಬಹುದು ಎಂದು ವರದಿಗಳು ಹೇಳಿವೆ. ಇದರಿಂದ ಬಳಕೆದಾರರು ಸುಲಭವಾಗಿ ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಕರೆಗಳನ್ನು ಮಾಡಬಹುದು.

    MORE
    GALLERIES

  • 57

    Tech Tips: ವಾಟ್ಸಾಪ್​​ ಬಳಕೆದಾರರಿಗೆ ಗುಡ್​ ನ್ಯೂಸ್​! ಇನ್ಮುಂದೆ ಅಪ್ಲಿಕೇಶನ್​​ನಲ್ಲಿ ಈ ಸಮಸ್ಯೆಗಳು ಬರೋದೇ ಇಲ್ಲ

    ಉತ್ತಮ ಬಹು-ಸಾಧನ ಬೆಂಬಲ: ವಾಟ್ಸಾಪ್​ ಬಹು-ಸಾಧನ ಸಾಮರ್ಥ್ಯಗಳನ್ನು ಸುಧಾರಿಸಿದೆ. ವಾಟ್ಸಾಪ್​ನ ಈ ಫೀಚರ್​ ಮೂಲಕ ಯಾವುದೇ ಸಾಧನವನ್ನು ಸಹ ಬೇಗನೆ ಲಿಂಕ್ ಮಾಡಬಹುದಾಗಿದೆ. ಜೊತೆಗೆ ವೇಗವಾಗಿಯೂ ಕಾರ್ಯನಿರ್ವಹಿಸುವಂತೆ ಮಾಡಿದೆ.

    MORE
    GALLERIES

  • 67

    Tech Tips: ವಾಟ್ಸಾಪ್​​ ಬಳಕೆದಾರರಿಗೆ ಗುಡ್​ ನ್ಯೂಸ್​! ಇನ್ಮುಂದೆ ಅಪ್ಲಿಕೇಶನ್​​ನಲ್ಲಿ ಈ ಸಮಸ್ಯೆಗಳು ಬರೋದೇ ಇಲ್ಲ

    ಇನ್ನು ಸುಧಾರಿತ ಬಹು-ಸಾಧನ ಬೆಂಬಲದ ಮೂಲಕ, ಬಳಕೆದಾರರು ಒಂದೇ ಸಮಯದಲ್ಲಿ ತಮ್ಮ ವಾಟ್ಸಾಪ್​ ಖಾತೆಗೆ ನಾಲ್ಕು ಸಾಧನಗಳನ್ನು ಲಿಂಕ್ ಮಾಡಲು ಸಾಧ್ಯವಾಗುತ್ತದೆ. ಇದರರ್ಥ ಅವರು ತಮ್ಮ ಪ್ರಾಥಮಿಕ ಮೊಬೈಲ್ ಫೋನ್ ಹೊರತುಪಡಿಸಿ ಇತರ ನಾಲ್ಕು ಸಾಧನಗಳಲ್ಲಿ ತಮ್ಮ WhatsApp ಖಾತೆಯನ್ನು ಓಪನ್ ಮಾಡಲು ಸಾಧ್ಯವಾಗುತ್ತದೆ.

    MORE
    GALLERIES

  • 77

    Tech Tips: ವಾಟ್ಸಾಪ್​​ ಬಳಕೆದಾರರಿಗೆ ಗುಡ್​ ನ್ಯೂಸ್​! ಇನ್ಮುಂದೆ ಅಪ್ಲಿಕೇಶನ್​​ನಲ್ಲಿ ಈ ಸಮಸ್ಯೆಗಳು ಬರೋದೇ ಇಲ್ಲ

    ಸೈಲೆಂಟ್ ಅನೌನ್​ ನಂಬರ್ ಕಾಲ್: ವಾಟ್ಸಾಪ್​ ಇದೀಗ ಮತ್ತೆ ಹೊಸ ಫೀಚರ್​ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಅದರ ಹೆಸರು ಸೈಲೆಂಟ್ ಅನೌನ್​ ನಂಬರ್ ಕಾಲ್​. ಈ ಫೀಚರ್​ ಮೂಲಕ ಯಾವುದೇ ಅಪರಿಚಿತ ನಂಬರ್​ನಿಂದ ಕಾಲ್​ ಬಂದಾಗ ಅದನ್ನು ಕಾಲ್​ ಲೀಸ್ಟ್​ನಿಂದ, ನಾಟಿಫಿಕೇಶನ್​ನಿಂದ ಮ್ಯೂಟ್​ ಮಾಡಬಹುದು.

    MORE
    GALLERIES