ವೊಡಾಫೋನ್ ಐಡಿಯಾ ರೂ. 539 ಯೋಜನೆಯಲ್ಲಿ ಹೆಚ್ಚುವರಿ ಡೇಟಾ ಕೊಡುಗೆ ಇದೆ. ಈ ಉಚಿತ ಡೇಟಾ ಮಾನ್ಯತೆ 28 ದಿನಗಳು. ಆದರೆ ಯೋಜನೆಯ ಮಾನ್ಯತೆ 56 ದಿನಗಳು. ಈ ಯೋಜನೆಯ ಭಾಗವಾಗಿ ಗ್ರಾಹಕರು ದಿನಕ್ಕೆ 2 ಜಿಬಿ ಡೇಟಾವನ್ನು ಪಡೆಯುತ್ತಾರೆ. ಜೊತೆಗೆ 100 ಎಸ್ಎಮ್ಎಸ್ ಅನ್ನು ಉಚಿತವಾಗಿ ಕಳುಹಿಸಬಹುದು. ಪ್ರಯೋಜನಗಳಲ್ಲಿ ಬಿಂಗ್ ಆಲ್ ನೈಟ್, ವೀಕೆಂಡ್ ಡೇಟಾ ರೋಲ್ ಓವರ್, ಡೇಟಾ ಡಿಲೈಟ್ಸ್ ಎಂಬ ಆಫರ್ಸ್ ಕೂಡ ಸೇರಿವೆ.
ವೊಡಫೋನ್ ಐಡಿಯಾದ ರೂ. 475 ರೀಚಾರ್ಜ್ ಯೋಜನೆಯು ಹೆಚ್ಚುವರಿ ಡೇಟಾ ಕೊಡುಗೆಯನ್ನು ಸಹ ಹೊಂದಿದೆ. 5ಜಿ ಹೆಚ್ಚುವರಿ ಡೇಟಾದೊಂದಿಗೆ ಬರುತ್ತದೆ. ಈ ಯೋಜನೆಯ ಮಾನ್ಯತೆ 28 ದಿನಗಳು ಆಗಿರುತ್ತದೆ. ಈ ಯೋಜನೆಯಡಿ ನೀವು ದಿನಕ್ಕೆ 4 GB ಡೇಟಾವನ್ನು ಪಡೆಯುತ್ತೀರಿ. ಈ ಯೋಜನೆಯು ಜೊತೆಗೆ ಇದರಲ್ಲಿ ಅನ್ಲಿಮಿಟೆಡ್ ಕಾಲ್ ಮತ್ತು ದಿನಕ್ಕೆ 100 ಎಸ್ಎಮ್ಎಸ್ ನಂತಹ ಪ್ರಯೋಜನಗಳು ಕೂಡ ಲಭ್ಯವಿದೆ.