ಜನಪ್ರಿಯ ಇಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಐಫೋನ್ 12 ನಲ್ಲಿ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ. ಕೈಗೆಟುಕುವ ಬೆಲೆಯಲ್ಲಿ ಫೋನ್ ಹುಡುಕುತ್ತಿರುವವರಿಗೆ ಐಫೋನ್ 12 ಮಿನಿ ಸ್ಮಾರ್ಟ್ಫೋನ್ ಅತ್ಯುತ್ತಮ ಆಯ್ಕೆಯಾಗಿದೆ. ಅತ್ಯುತ್ತಮ ಕಾರ್ಯಕ್ಷಮತೆ, ಉತ್ತಮ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೊಂದಿಗೆ ಈ ಸಾಧನವನ್ನು 2020 ರಲ್ಲಿ ಪ್ರಾರಂಭಿಸಲಾಗಿದೆ. 64ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ನ ಬೆಲೆ ರೂ.59,999 ಆಗಿದ್ದರೆ, ಅದನ್ನು ಈಗ ಫ್ಲಿಪ್ಕಾರ್ಟ್ನಲ್ಲಿ 20,999 ರೂಪಾಯಿಗಳ ರಿಯಾಯಿತಿಯಲ್ಲಿ ಖರೀದಿಸಬಹುದು.
ಪ್ರಸ್ತುತ 64 ಜಿಬಿ ಸ್ಟೋರೇಜ್ನ ಐಫೋನ್ 12 ಮಿನಿ ಸಿರಿಸ್ನ ಬೆಲೆಯು 35% ರಿಯಾಯಿತಿಯ ನಂತರ ರೂ.38,499 ಆಗಿದೆ. ಈ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಫ್ಲಿಪ್ಕಾರ್ಟ್ ಈ ಸಾಧನದ ಮೇಲೆ ಎಕ್ಸ್ಚೇಂಜ್ ಆಫರ್ ಕೂಡ ಇದೆ. ಫೋನ್ ವರ್ಷನ್ ಮತ್ತು ಅದರ ಗುಣಮಟ್ಟವನ್ನು ಅವಲಂಬಿಸಿ, ಗ್ರಾಹಕರು ರೂ.17,500 ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಈ ಎಲ್ಲಾ ರಿಯಾಯಿತಿಯ ನಂತರ ಐಫೋನ್ 12 ಮಿನಿ ಸ್ಮಾರ್ಟ್ಫೋನ್ ಅನ್ನು 20,999 ರೂಪಾಯಿಗೆ ಖರೀದಿ ಮಾಡಬಹುದು
ಫ್ಲಿಪ್ಕಾರ್ಟ್ ಈ ಫೋನ್ನಲ್ಲಿ ವಿವಿಧ ಬ್ಯಾಂಕ್ ಕೊಡುಗೆಗಳನ್ನು ಸಹ ನೀಡುತ್ತಿದೆ. ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವುದಾದರೆ 10% ರಿಯಾಯಿತಿ ಪಡೆಯಬಹುದು. 5000 ರೂ.ಗಿಂತ ಹೆಚ್ಚಿನ ಕೋಟಕ್ ಬ್ಯಾಂಕ್ ಇಎಮ್ಐ ವಹಿವಾಟುಗಳ ಮೇಲೆ, ಬೆಲೆಯು ರೂ.1000 ವರೆಗೆ ಕಡಿಮೆಯಾಗುತ್ತದೆ. ಅಲ್ಲದೆ, ಕೋಟಕ್ ಬ್ಯಾಂಕ್ ಡೆಬಿಟ್ ಕಾರ್ಡ್ ಮೂಲಕ ರೂ.5000 ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ರೂ.750 ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಅಂತೆಯೇ, ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ನಲ್ಲಿ 5% ರಿಯಾಯಿತಿಯನ್ನು ನೀಡುತ್ತದೆ.
ಫ್ಲಿಪ್ಕಾರ್ಟ್ನಲ್ಲಿ ಹೇಗೆ ಖರೀದಿಸೋದು? ರಿಯಾಯಿತಿ ಕೊಡುಗೆಗಳು ಮತ್ತು ಬ್ಯಾಂಕ್ ಕೊಡುಗೆಗಳೊಂದಿಗೆ ಐಫೋನ್ 12 ಮಿನಿ ಸೀರಿಸ್ ಅನ್ನು ಖರೀದಿಸಲು ಬಯಸುವವರು ಫ್ಲಿಪ್ಕಾರ್ಟ್ ವೆಬ್ಸೈಟ್ ಅಥವಾ ಫ್ಲಿಪ್ಕಾರ್ಟ್ ಅಪ್ಲಿಕೇಶನ್ ಅನ್ನು ತೆರೆಯಬೇಕು. ನಂತರ ಅಲ್ಲಿ ಐಫೋನ್ 12 ಮಿನಿ ಸೀರಿಸ್ ಫೋನ್ ಅನ್ನು ಟೈಪ್ ಮಾಡಿ ಮತ್ತು ಸರ್ಚ್ ಆಯ್ಕೆಯನ್ನು ಕೊಡಿ. ಇಲ್ಲಿ ನಿಮ್ಮ ಆಯ್ಕೆಯ ಬಣ್ಣ ಮತ್ತು ಗಾತ್ರವನ್ನು ಸೆಲೆಕ್ಟ್ ಮಾಡಬಹುದಾಗಿದೆ.