ಟೆಲಿಕಾಂ ಮಾರುಕಟ್ಟೆಯಲ್ಲಿ ಅನೇಕ ಖಾಸಗಿ ಕಂಪನಿಗಳು ಮತ್ತು ಸರ್ಕಾರಿ ಸಂಸ್ಥೆಗಳಿವೆ. ಈ ಟೆಲಿಕಾಂ ಕಂಪನಿಗಳು ನಿರಂತರವಾಗಿ ತಮ್ಮ ಬಳಕೆದಾರರಿಗಾಗಿ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯ ಮಾಡುತ್ತಲೇ ಇದ್ದಾರೆ.. ತಮ್ಮ ಗ್ರಾಹಕರಿಗೆ ಕೈಗೆಟುಕುವ ರೀತಿಯಲ್ಲಿ. ಅವರ ಬಜೆಟ್‌ಗೆ ಸರಿಹೊಂದುವ ರೀತಿಯಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಕಂಪನಿಗಳು ತಮ್ಮ ಗ್ರಾಹಕರಿಗಾಗಿ ನಿರಂತರವಾಗಿ ವಿವಿಧ ರೀತಿಯ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡುತ್ತಿದೆ.
ಪ್ರಸ್ತುತ ಟೆಲಿಕಾಂ ಕಂಪನಿಗಳಲ್ಲಿ ಜಿಯೋ ಮುಂಚೂಣಿಯಲ್ಲಿದೆ. ಕಡಿಮೆ ವೆಚ್ಚದಲ್ಲಿ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುವ ಮೂಲಕ ಜಿಯೋ ಈ ಸ್ಥಾನವನ್ನು ಪಡೆದುಕೊಂಡಿದೆ. ಜೊತೆಗೆ ಇದರಲ್ಲಿ 5ಜಿ ನೆಟ್‌ವರ್ಕ್ ಕೂಡ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಆದರೆ ಜಿಯೋ ಜೊತೆಗೆ.. ಏರ್ಟೆಲ್, ವಿಐ, ಮತ್ತು ಬಿಎಸ್ಎನ್ಎಲ್ ತಮ್ಮ ಬಳಕೆದಾರರಿಗೆ ಆಫರ್‌ಗಳೊಂದಿಗೆ ರೀಚಾರ್ಜ್‌ಗಳನ್ನು ನೀಡುತ್ತಿವೆ.
ಇತರ ನೆಟ್‌ವರ್ಕ್‌ಗಳಿಗೆ ಕರೆಗಳಿಗೆ ರೂ. 0.90 ಪೈಸೆಯಷ್ಟು ಹಣ ಕಟ್ ಆಗುತ್ತದೆ. ಎಸ್ಎಮ್ಎಸ್ ವಿಷಯಕ್ಕೆ ಬಂದರೆ. ಸ್ಥಳೀಯ ಎಸ್ಎಮ್ಎಸ್ ವೆಚ್ಚ 0.50 ಪೈಸೆ.. ರಾಷ್ಟ್ರೀಯ ಎಸ್ಎಮ್ಎಸ್ ವೆಚ್ಚ ರೂ. 1.50 ಮತ್ತು ಅಂತಾರಾಷ್ಟ್ರೀಯ ಎಸ್ಎಮ್ಎಸ್ ಬೆಲೆ ರೂ. 4 ರಿಂದ 5 ರೂಪಾಯಿಯಾಗಿರುತ್ತದೆ. ಪ್ರತಿ ಎಮ್ಬಗೆ 3 ಪೈಸೆಯಂತೆ ಡೇಟಾವನ್ನು ವಿಧಿಸಲಾಗುತ್ತದೆ. ಕಂಪನಿಯು ಈ ಯೋಜನೆಯನ್ನು ದೀರ್ಘಕಾಲದವರೆಗೆ ನೀಡುತ್ತಿದೆಯಾದರೂ, ಅನೇಕ ಬಳಕೆದಾರರಿಗೆ ಇದರ ಬಗ್ಗೆ ತಿಳಿದಿಲ್ಲ.