ಈ ರಾಜ್ಯದಲ್ಲಿ ವಾಹನ ಖರೀದಿಸಿದರೆ ಸಿಗುತ್ತೆ ಶೇ.50 ರಷ್ಟು ತೆರಿಗೆ ವಿನಾಯಿತಿ

First published:

  • 18

    ಈ ರಾಜ್ಯದಲ್ಲಿ ವಾಹನ ಖರೀದಿಸಿದರೆ ಸಿಗುತ್ತೆ ಶೇ.50 ರಷ್ಟು ತೆರಿಗೆ ವಿನಾಯಿತಿ

    ದೇಶದಲ್ಲಿ ವಾಹನ ಮಾರಾಟ ಕುಸಿತದಿಂದ ಆಟೋಮೊಬೈಲ್ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಹಲವು ವಾಹನ ತಯಾರಿಕಾ ಕಂಪೆನಿಗಳು ನಾನಾ ರೀತಿಯ ಆಫರ್​ಗಳನ್ನು ಪ್ರಕಟಿಸಿದರೂ, ಮಾರಾಟದಲ್ಲಿ ಪ್ರಗತಿ ಕಾಣುತ್ತಿಲ್ಲ.

    MORE
    GALLERIES

  • 28

    ಈ ರಾಜ್ಯದಲ್ಲಿ ವಾಹನ ಖರೀದಿಸಿದರೆ ಸಿಗುತ್ತೆ ಶೇ.50 ರಷ್ಟು ತೆರಿಗೆ ವಿನಾಯಿತಿ

    ಇದರ ಹೊರತಾಗಿಯು ಕೆಲ ಕಂಪೆನಿಗಳು ನೂತನ ವಾಹನಗಳ ಉತ್ಪಾದನೆಯನ್ನು ನಿಲ್ಲಿಸಿದ್ದು, ಅದರೊಂದಿಗೆ ನಷ್ಟವನ್ನು ಸರಿದೂಗಿಸಲು ಉದ್ಯೋಗ ಕಡಿತದತ್ತ ಯೋಚಿಸಿದೆ.

    MORE
    GALLERIES

  • 38

    ಈ ರಾಜ್ಯದಲ್ಲಿ ವಾಹನ ಖರೀದಿಸಿದರೆ ಸಿಗುತ್ತೆ ಶೇ.50 ರಷ್ಟು ತೆರಿಗೆ ವಿನಾಯಿತಿ

    ಈಗಾಗಲೇ ಹಲವು ಕಂಪೆನಿಗಳು ವಾಹನಗಳ ಮೇಲಿನ ಜಿಎಸ್​ಟಿ ತೆರಿಗೆಯನ್ನು ಕಡಿಮೆ ಮಾಡಲು ಮನವಿ ಸಲ್ಲಿಸಿದ್ದು, ಹಾಗೆಯೇ ರೋಡ್ ಟ್ಯಾಕ್ಸ್ ಇಳಿಸುವಂತೆ ರಾಜ್ಯ ಸರ್ಕಾರಗಳನ್ನು ಕೋರಿದೆ. ಇದರ ಬೆನ್ನಲ್ಲೇ ಇದೀಗ..

    MORE
    GALLERIES

  • 48

    ಈ ರಾಜ್ಯದಲ್ಲಿ ವಾಹನ ಖರೀದಿಸಿದರೆ ಸಿಗುತ್ತೆ ಶೇ.50 ರಷ್ಟು ತೆರಿಗೆ ವಿನಾಯಿತಿ

    ಗೋವಾ ಸರ್ಕಾರವು ಹೊಸ ವಾಹನ ಖರೀದಿ ಮೇಲೆ ಶೇ.50 ರಷ್ಟು ತೆರಿಗೆ ವಿನಾಯಿತಿ ಘೋಷಿಸಿದೆ. ಕುಸಿತ ಕಂಡಿರುವ ಆಟೋಮೊಬೈಲ್ ಕ್ಷೇತ್ರಕ್ಕೆ ಪುನಶ್ಚೇತನ ನೀಡಲು ಸರ್ಕಾರ ಈ ಕ್ರಮಕೈಗೊಂಡಿದೆ. ಅಂದರೆ...

    MORE
    GALLERIES

  • 58

    ಈ ರಾಜ್ಯದಲ್ಲಿ ವಾಹನ ಖರೀದಿಸಿದರೆ ಸಿಗುತ್ತೆ ಶೇ.50 ರಷ್ಟು ತೆರಿಗೆ ವಿನಾಯಿತಿ

    ಮುಂದಿನ ಮೂರು ತಿಂಗಳಲ್ಲಿ ಗೋವಾದಲ್ಲಿ ರಸ್ತೆಗಿಳಿಯುವ ಹೊಸ ವಾಹನಗಳಿಗೆ ಶೇ. 50 ರಷ್ಟು ರಸ್ತೆ ತೆರಿಗೆ ವಿನಾಯಿತಿ ಸಿಗಲಿದೆ.

    MORE
    GALLERIES

  • 68

    ಈ ರಾಜ್ಯದಲ್ಲಿ ವಾಹನ ಖರೀದಿಸಿದರೆ ಸಿಗುತ್ತೆ ಶೇ.50 ರಷ್ಟು ತೆರಿಗೆ ವಿನಾಯಿತಿ

    ಸಂಕಷ್ಟದಲ್ಲಿರುವ ವಾಹನ ವಲಯದಲ್ಲಿ ಬೇಡಿಕೆ ಹೆಚ್ಚಿಸಲು ಡಿಸೆಂಬರ್ 31 ರೊಳಗೆ ಹೊಸ ವಾಹನಗಳ ಖರೀದಿಗೆ ರಸ್ತೆ ತೆರಿಗೆಯನ್ನು ಶೇಕಡಾ 50 ರಷ್ಟು ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಈ ತೆರಿಗೆ ವಿನಾಯಿತಿಗೆ ಸಂಪುಟ ಅನುಮೋದನೆ ನೀಡಿದೆ ಎಂದು ರಾಜ್ಯ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

    MORE
    GALLERIES

  • 78

    ಈ ರಾಜ್ಯದಲ್ಲಿ ವಾಹನ ಖರೀದಿಸಿದರೆ ಸಿಗುತ್ತೆ ಶೇ.50 ರಷ್ಟು ತೆರಿಗೆ ವಿನಾಯಿತಿ

    ಗೋವಾದ ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ವಾಹನಗಳ ನೋಂದಣಿಯಲ್ಲಿ ಶೇಕಡಾ 15 ರಿಂದ 17 ರಷ್ಟು ಕುಸಿತ ಕಂಡುಬಂದಿದೆ.

    MORE
    GALLERIES

  • 88

    ಈ ರಾಜ್ಯದಲ್ಲಿ ವಾಹನ ಖರೀದಿಸಿದರೆ ಸಿಗುತ್ತೆ ಶೇ.50 ರಷ್ಟು ತೆರಿಗೆ ವಿನಾಯಿತಿ

    2019 ರ ಏಪ್ರಿಲ್‌ನಿಂದ ಜುಲೈ ವರೆಗೆ ರಾಜ್ಯದಲ್ಲಿ 19,480 ವಾಹನಗಳು ನೋಂದಣಿಯಾಗಿವೆ. ಇದೀಗ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ವರೆಗೂ ಈ ತೆರಿಗೆ ಕಡಿತ ಆಫರ್ ನೀಡಲಾಗಿದ್ದು, ಇದನ್ನು ಸದುಪಯೋಗ ಪಡಿಸುವಂತೆ ಗೋವಾ ರಾಜ್ಯ ರಸ್ತೆ ಸಾರಿಗೆ ಸಚಿವ ಮೌವಿನ್ ಗೋಡಿನ್ಹೋ ತಿಳಿಸಿದ್ದಾರೆ.

    MORE
    GALLERIES