ಮೆಟಾ ಮಾಲೀಕತ್ವದ ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವಂತಹ ವಾಟ್ಸಪ್ ಅನ್ನು ಅಪ್ಡೇಟ್ ಮಾಡುತ್ತಲೇ ಇದೆ. ವಾಟ್ಸಪ್ ಬಳಕೆದಾರರಿಗೆ ಇದೀಗ ಮತ್ತೊಂದು ಫೀಚರ್ ಅನ್ನು ಘೋಷಿಸಿದೆ. ವೆಬ್ ಬಳಕೆದಾರರಿಗೆ ಡೋಂಟ್ ಡಿಸ್ಟರ್ಬ್ ಆಯ್ಕೆಯನ್ನು ಆನ್ ಮಾಡುವ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಬಳಕೆದಾರರು ವಾಟ್ಸಪ್ ಕರೆಗಳ ನಾಟಿಫಿಕೇಶನ್ಗಳನ್ನು ಆಫ್ ಮಾಡಬಹುದು. ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿದೆ ಮಾಹಿತಿ.
ಇನ್ನು ಇ ಕ್ರಿಯೇಟ್ ಮಾಡಿದ ಅವತಾರ್ ಅನ್ನು ಫ್ರೆಂಡ್ಸ್ ಮತ್ತು ಕುಟುಂಬದೊಂದಿಗೆ ವಾಟ್ಸಪ್ನಲ್ಲಿ ಶೇರ್ ಮಾಡಿಕೊಳ್ಳಬಹುದು. ವಾಟ್ಸಾಪ್ನಲ್ಲಿ ನೈಜ ಫೋಟೋವನ್ನು ತಮ್ಮ ಪ್ರೊಫೈಲ್ ಚಿತ್ರವನ್ನಾಗಿ ಹಾಕಲು ಯೋಚಿಸುತ್ತಿರುವವರು ಡಿಜಿಟಲ್ ಅವತಾರ್ ವೈಶಿಷ್ಟ್ಯವನ್ನು ಬಳಸಬಹುದು. ಗೌಪ್ಯತೆ ಬಗ್ಗೆ ಕಾಳಜಿ ಹೊಂದಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇಲ್ಲಿಯವರೆಗೆ ಈ ವೈಶಿಷ್ಟ್ಯವು ಬೀಟಾ ಬಳಕೆದಾರರಿಗೆ ಲಭ್ಯವಿದೆ.
ವಾಟ್ಸಪ್ ನಲ್ಲಿ ಅವತಾರ್ ಕ್ರಿಯೇಟ್ ಮಾಡುವುದು ಹೇಗೆ? ವಾಟ್ಸಪ್ನಲ್ಲಿ ಅವತಾರ್ ರಚಿಸಲು ಮೊದಲು ವಾಟ್ಸಪ್ ಸೆಟ್ಟಿಂಗ್ಗಳನ್ನು ತೆರೆಯಿರಿ. ಅದರ ನಂತರ, ನೀವು ಅಲ್ಲಿ ಕಾಣಿಸಿಕೊಳ್ಳುವ ಅವತಾರ್ ಎಂಬ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಅದರ ನಂತರ, ನಿಮ್ಮ ಅವತಾರ್ ಅನ್ನು ರಚಿಸಿ ಸೇವ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ನಂತರ ನಿಮಗೆ ಬೇಕಾದ ಹಾಗೆ ಶೇರ್ ಮಾಡಬಹುದು.
Undo ಬಟನ್ ವೈಶಿಷ್ಟ್ಯ: ವಾಟ್ಸಪ್ ಇತ್ತೀಚೆಗೆ ಬಳಕೆದಾರರಿಗೆ Undo ಬಟನ್ ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯವು ಬಳಕೆದಾರರು ಮೆಸೇಜ್ ಅನ್ನು ಸೆಂಡ್ ಮಾಡಿದಾಗ ತಪ್ಪು ಮಾಡಿದರೆ ತಕ್ಷಣವೇ ಅಂಡೂ ಆಯ್ಕೆಯನ್ನು ಸೆಲೆಕ್ಟ್ ಮಾಡುವ ಮೂಲಕ ಚೇಂಜ್ ಮಾಡಬಹುದು. ಯಾವುದೇ ವಾಟ್ಸಪ್ ಗ್ರೂಪ್ ಅಥವಾ ಪರ್ಸನಲ್ ಆಗಿ ಮೆಸೇಜ್ ಸೆಂಡ್ ಮಾಡಿದಾಗ ಈ ಫೀಚರ್ ಲಭ್ಯವಾಗುತ್ತದೆ. ಇನ್ನು ವಾಟ್ಸಪ್ನಲ್ಲಿ ಡಿಲೀಟ್ ಫಾರ್ ಮಿ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡುವ ಮೂಲಕ ಇದನ್ನು ಬಳಸಬಹುದು.