Free Call: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ

Bluetooth Call: ಇತ್ತೀಚೆಗೆ ಸ್ಮಾರ್ಟ್​ಫೋನ್​ಗಳ ಬಳಕೆ ಹೆಚ್ಚಾಗಿದೆ. ಯಾವುದೇ ಅಗತ್ಯ ಮಾಹಿತಿಯನ್ನು ಇನ್ನೊಬ್ಬರೊಂದಿಗೆ ಹೇಳ್ಬೇಕಾದ್ರು ತಕ್ಷಣ ಕಾಲ್ ಮಾಡಿ ಹೇಳ್ತಾರೆ. ಆದರೆ ಯಾರಿಗೆ ಕರೆ ಮಾಡ್ಬೇಕಾದ್ರೂ ರೀಚಾರ್ಜ್​​ ಇರಲೇ ಬೇಕು. ಇನ್ಮುಂದೆ ನೀವು ರೀಚಾರ್ಜ್​ ಮಾಡದೆಯೇ ಉಚಿತವಾಗಿ ಯಾರಿಗೆ ಬೇಕಾದ್ರು ಕಾಲ್​ ಮಾಡ್ಬಹುದು.

First published:

  • 18

    Free Call: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ

    ಇತ್ತೀಚೆಗೆ ಸ್ಮಾರ್ಟ್​ಫೋನ್​ಗಳ ಬಳಕೆ ಹೆಚ್ಚಾಗಿದೆ. ಯಾರ ಕೈ ನೋಡಿದ್ರೂ ಮೊಬೈಲ್​ ಇದ್ದೇ ಇದೆ. ಯಾರೇ ಆಗಲಿ ಸ್ಮಾರ್ಟ್​​ಫೋನ್ ಅನ್ನು ಕರೆ ಮಾಡಲು, ಮೆಸೇಜ್​ ಮಾಡಲು ಬಳಸುತ್ತಾರೆ. ಆದರೆ ಈಗಂತೂ ಯಾರಿಗೂ ಕರೆ ಮಾಡ್ಬೇಕಾದ್ರು ಸಿಮ್​ಗೆ ರೀಚಾರ್ಜ್ ಮಾಡಲೇ ಬೇಕು. ಆದ್ರೆ ಈ ಟ್ರಿಕ್ ಮೂಲಕ ನೀವು ಯಾರಿಗೆ ಬೇಕಾದ್ರು ಉಚಿತವಾಗಿಯೇ ಕಾಲ್​ ಮಾಡ್ಬಹುದು.

    MORE
    GALLERIES

  • 28

    Free Call: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ

    ಹಿಂದೆಲ್ಲಾ ಕೇವಲ ಸಿಮ್​​ನಲ್ಲಿ 1 ರೂಪಾಯಿ ಇದ್ದರೆ ಸಾಕು ಕರೆ ಮಾಡಿ ಮಾತನಾಡಬಹುದಿತ್ತು. ಆದರೆ ಕೆಲ ವರ್ಷಗಳ ಹಿಂದೆ ಟೆಲಿಕಾಂ ಕಂಪೆನಿಗಳು ಮಹತ್ತರವಾದ ನಿಯಮವೊಂದನ್ನು ಜಾರಿಗೆ ತಂದಿದೆ. ಈ ಮೂಲಕ ಯಾರೇ ಆಗಲಿ, ಯಾವುದೇ ಸಿಮ್ ಹೊಂದಿದ್ದರು ತಮ್ಮ ಸಿಮ್​​ನಲ್ಲಿ ನಿಗದಿತವಾಗಿ ತಿಂಗಳ ರೀಚಾರ್ಜ್​ ಪ್ಯಾಕ್​ ಅನ್ನು ಹೊಂದಿರಬೇಕು.

    MORE
    GALLERIES

  • 38

    Free Call: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ

    ಆದರೆ ಇನ್ಮುಂದೆ ಯಾವುದೇ ರೀಚಾರ್ಜ್​ ಮಾಡದೇ ಉಚಿತವಾಗಿಯೇ ಇನ್ನೊಬ್ಬರಿಗೆ ಕಾಲ್​ ಮಾಡಬಹುದಾಗಿದೆ. ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್​ ಮೂಲಕ ಆ್ಯಪ್​ ಒಂದನ್ನು ಡೌನ್​ಲೋಡ್​ ಮಾಡಿಕೊಂಡರೆ ಸಾಕು. ಇನ್ನು ಕಾಲ್​ ಮಾಡಲು ಇಂಟರ್ನೆಟ್​ ಸಹ ಅಗತ್ಯವಿರುವುದಿಲ್ಲ.

    MORE
    GALLERIES

  • 48

    Free Call: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ

    ಈ ಅಪ್ಲಿಕೇಶನ್‌ನ ಹೆಸರು ಬ್ಲೂಟೂತ್ ವಾಕಿ ಟಾಕಿ. ಇದನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ನೀವು ಹಣ ಮತ್ತು ಇಂಟರ್ನೆಟ್ ಖರ್ಚು ಮಾಡದೆಯೇ ಜೀವಮಾನದ ಉಚಿತ ಕರೆಗಳನ್ನು ಮಾಡಲು ಬಯಸಿದರೆ, ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ.

    MORE
    GALLERIES

  • 58

    Free Call: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ

    ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ಲೂಟೂತ್ ವಾಕಿ ಟಾಕಿ ಅಪ್ಲಿಕೇಶನ್ ಅನ್ನು ಡೌನ್​ಲೋಡ್​ ಮಾಡಿದ ನಂತರ, ಇಲ್ಲಿ ನಿಮಗೆ ವೈ-ಫೈ ಮತ್ತು ರಿಫ್ರೆಶ್‌ಗಾಗಿ 2 ಆಯ್ಕೆಗಳನ್ನು ತೋರಿಸಲಾಗುತ್ತದೆ.

    MORE
    GALLERIES

  • 68

    Free Call: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ

    ನೀವು ಈ ಅಪ್ಲಿಕೇಶನ್‌ ಮೂಲಕ ಉಚಿತವಾಗಿ ಕಾಲ್​ ಮಾಡಲು ಬಯಸಿದ್ರೆ , ನಂತರ ನೀವು ಮಾತನಾಡಲು ಬಯಸುವ ವ್ಯಕ್ತಿಯಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್​ಲೋಡ್​ ಮಾಡಲು ಮತ್ತು ನೀವು ಮಾಡಿದಂತೆಯೇ ಲಾಗಿನ್​ ಆಗಲು ಹೇಳಿ.

    MORE
    GALLERIES

  • 78

    Free Call: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ

    ನಂತರ ನೀವು ರಿಫ್ರೆಶ್ ಆಯ್ಕೆಯನ್ನು ಸೆಲೆಕ್ಟ್ ಮಾಡಿದಾಗ ಅಲ್ಲಿ ನಿಮಗೆ ಆನ್​ ಆಗಿರುವ ಬ್ಲೂಟೂತ್​​ ಸಾಧನಗಳನ್ನು ತೋರಿಸುತ್ತದೆ. ಅದರಲ್ಲಿ ನೀವು ಕರೆ ಮಾಡಲು ಬಯಸುವಂತಹ ಬ್ಲೂಟೂತ್​ ಅನ್ನು ಆಯ್ಕೆ ಮಾಡ್ಬೇಕು.

    MORE
    GALLERIES

  • 88

    Free Call: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ

    ಗಮನಿಸಬೇಕಾದ ಅಂಶವೆಂದರೆ ಬ್ಲೂಟೂತ್ ವಾಕಿ ಟಾಕಿ ಅಪ್ಲಿಕೇಶನ್‌ನ ವ್ಯಾಪ್ತಿಯು 100 ಮೀಟರ್‌ಗಳವರೆಗೆ ಮಾತ್ರ ಇರುತ್ತದೆ, ಅಂದರೆ, ಈ ಅಪ್ಲಿಕೇಶನ್ ಹೊಂದಿರುವ 100 ಮೀಟರ್ ವ್ಯಾಪ್ತಿಯಲ್ಲಿ ಬರುವ ಯಾವುದೇ ವ್ಯಕ್ತಿಯೊಂದಿಗೆ ನೀವು ಉಚಿತವಾಗಿ ಮಾತನಾಡಬಹುದು.

    MORE
    GALLERIES