ಕೊರೋನಾ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ 21 ದಿನಗಳ ಕಾಲ ಲಾಕ್ಡೌನ್ ಘೋಷಿಸಲಾಗಿದೆ. ಇದರಿಂದ ಎಲ್ಲರೂ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಈ ಮಧ್ಯೆ ಟಿವಿ ವೀಕ್ಷಕರಿಗೆ ಚಾನೆಲ್ಗಳು ಒಂದು ಸಿಹಿ ಸುದ್ದಿ ನೀಡಿದೆ.
2/ 5
ಹೌದು, ಮುಂದಿನ 2 ತಿಂಗಳವರೆಗೆ 4ಜನಪ್ರಿಯ ಪೇ ಚಾನೆಲ್ಗಳನ್ನು ಡಿಟಿಎಚ್ ಮತ್ತು ಕೇಬಲ್ ನೆಟ್ವರ್ಕ್ಗಳು ಉಚಿತವಾಗಿ ಪ್ರಸಾರ ಮಾಡಲಿದೆ.
3/ 5
ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ಇಂತಹದೊಂದು ಸೇವೆ ಮುಂದಾಗಿರುವುದಾಗಿ ಭಾರತೀಯ ಪ್ರಸಾರ ಪ್ರತಿಷ್ಠಾನ (ಐಬಿಎಫ್) ತಿಳಿಸಿದೆ. ಯಾವ ಚಾನೆಲ್ಗಳು ಉಚಿತ?
4/ 5
ಐಬಿಎಫ್ ಉಚಿತವಾಗಿ ನೀಡಲಿರುವ ನಾಲ್ಕು ಪೇ ಚಾನೆಲ್ಗಳೆಂದರೆ ಸೋನಿ ಪಾಲ್, ಸ್ಟಾರ್ ಇಂಡಿಯಾದ ಸ್ಟಾರ್ ಉತ್ಸವ್, Zee ಟಿವಿಯ Zee Anmol ಮತ್ತು ವಯಾಕಾಮ್ 18 ಕಲರ್ಸ್ ಚಾನೆಲ್ನ Colors Rishtey ಚಾನೆಲ್.
5/ 5
ಈ ನಿರ್ಧಾರದಿಂದ ಮನೆಯಲ್ಲಿ ಕಾಲ ಕಳೆಯುವ ಜನರಿಗೆ ಮತ್ತಷ್ಟು ಮನರಂಜನೆ ಸಿಗಲಿದೆ ಎಂದು ಭಾವಿಸುತ್ತೇವೆ ಎಂದು ಬ್ರಾಡ್ಕಾಸ್ಟಿಂಗ್ ಅಸೋಸಿಯೇಷನ್ ತಿಳಿಸಿದೆ.