100 ಕಿಲೋ ಮೀಟರ್ಗಿಂತಲೂ ಹೆಚ್ಚಿನ ಮೈಲೇಜ್ ನೀಡುವ ಅತ್ಯುತ್ತಮ ಸ್ಕೂಟರ್ಗಳಿವು..!
ಅತ್ಯಾಧುನಿಕ 6 ಇಂಚಿನ ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೂಡ ಇದರಲ್ಲಿ ನೀಡಲಾಗಿದ್ದು, ಇದು ಚಾಲಕನಿಗೆ ಬೇಕಾದ ಅಗತ್ಯ ಮಾಹಿತಿಯನ್ನು ತೋರಿಸುತ್ತದೆ.
News18 Kannada | May 5, 2020, 6:21 PM IST
1/ 16
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರಗತಿಯತ್ತ ಸಾಗುತ್ತಿದೆ. ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಅನೇಕ ಹೊಸ ಕಂಪೆನಿಗಳು ಬಂಡವಾಳ ಹೂಡುತ್ತಿದೆ. ಇದಾಗ್ಯೂ, ಜನರಲ್ಲಿ ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯಗಳ ಬಗ್ಗೆ ಹೆಚ್ಚಿನ ಚಿಂತೆ ಇದೆ.
2/ 16
ಏಕೆಂದರೆ ಈ ವಾಹನಗಳ ಚಾರ್ಜ್ ಮಾಡುವುದರಿಂದ ಹಿಡಿದು, ಅವುಗಳ ಸರ್ವೀಸ್ ಮುಂತಾದ ವಿಷಯಗಳ ಬಗ್ಗೆ ಇನ್ನಷ್ಟು ಮಾಹಿತಿ ವಾಹನ ಪ್ರಿಯರಿಗೆ ತಲುಪಬೇಕಾದ ಅವಶ್ಯಕತೆ ಇದೆ.
3/ 16
ಈಗಾಗಲೇ ಕೇಂದ್ರ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳ ಮೇಲೆ ಸಬ್ಸಡಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತದ ರಸ್ತೆಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಬಳಕೆ ಹೆಚ್ಚಾಗಲಿದೆ.
4/ 16
ಇನ್ನು ಈಗಾಗಲೇ ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟು ಹಲವು ಕಂಪೆನಿಗಳು ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕೆಲವೊಂದು ಸ್ಕೂಟರ್ಗಳು 100. ಕಿ.ಮೀ ಗಿಂತಲೂ ಹೆಚ್ಚಿನ ರೈಡಿಂಗ್ ರೇಂಜ್ (ಮೈಲೇಜ್) ನೀಡುತ್ತಿದೆ. ಅಂತಹ ಪ್ರಮುಖ ನಾಲ್ಕು ಸ್ಕೂಟರ್ಗಳಾವುವು ಎಂಬುದರ ಮಾಹಿತಿ ಇಲ್ಲಿದೆ.
5/ 16
Okinawa Praise
6/ 16
ಒಕಿನಾವಾ ಪ್ರೈಸ್ ಭಾರತದ ಎಲೆಕ್ಟ್ರಿಕ್ ಸ್ಕೂಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇ-ಸ್ಕೂಟರ್ 45 Ah VRLA ಬ್ಯಾಟರಿ ನೀಡಲಾಗಿದ್ದು, ಇದು 2,500 ವ್ಯಾಟ್ ಗರಿಷ್ಠ ಪವರ್ ಒದಗಿಸುತ್ತದೆ. 75 kmph ವೇಗದಲ್ಲಿ ಚಲಿಸುವ ಈ ಸ್ಕೂಟರ್ನ ಅತ್ಯುತ್ತಮ ಮೈಲೇಜ್ ಕೂಡ ನೀಡುತ್ತದೆ.
7/ 16
ಒಕಿನಾವಾ ಪ್ರೈಸ್ ಸ್ಕೂಟರ್ನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ 170 ಕಿ.ಮೀ ನಿಂದ 200 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಫುಲ್ ಚಾರ್ಜ್ ಆಗಲು ತೆಗೆದುಕೊಳ್ಳುವ ಸಮಯ 6 ರಿಂದ 7 ಗಂಟೆಗಳು. ಮೂರು ರೈಡಿಂಗ್ ಮೋಡ್ಗಳೊಂದಿಗೆ ಬಿಡುಗಡೆಯಾಗಿರುವ ಈ ಸ್ಕೂಟರ್ನ ಬೆಲೆ 69,790 ರೂ.
8/ 16
Avera Retrosa
9/ 16
ಕಳೆದ ವರ್ಷ ಬಿಡುಗಡೆಯಾದ ಅವೆರಾ ರೆಟ್ರೊಸಾ ಕೂಡ ಅತ್ಯುತ್ತಮ ರೈಡಿಂಗ್ ರೇಂಜ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದು ಇದರ ವಿಶೇಷತೆ. ಲಿಥಿಯಂ ಐರನ್ ಫಾಸ್ಫೇಟ್ ಬ್ಯಾಟರಿ ಹೊಂದಿರುವ ಈ ಸ್ಕೂಟರ್ನ್ನು 3-4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು.
10/ 16
3000W ಬಿಎಲ್ಡಿಸಿ ಮೋಟರ್ ಹೊಂದಿರುವ ಈ ಸ್ಕೂಟರ್ನ ಗರಿಷ್ಠ ವೇಗ 90 ಕಿಲೋಮೀಟರ್. ಹಾಗೆಯೇ ಇದನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ 120-140 ಕಿ.ಮೀ ಮೈಲೇಜ್ ಸಿಗಲಿದೆ. ಅಂದಹಾಗೆ ಅವೆರಾ ಹೋಮ್ ಚಾರ್ಜಿಂಗ್ ಸ್ಟೇಷನ್ನಲ್ಲಿ ಇದನ್ನು ಚಾರ್ಜ್ ಮಾಡಿಕೊಳ್ಳಲು ತಗಲುವ ಸಮಯ 1-2 ಗಂಟೆಗಳು. ಹಾಗೆಯೇ ಅವೆರಾ ರೆಟ್ರೊಸಾ ಆಂಧ್ರಪ್ರದೇಶ ಎಕ್ಸ್ ಶೋ ರೂಂ ಬೆಲೆ 1.08 ಲಕ್ಷ ರೂ.
11/ 16
Pure EPluto
12/ 16
2kWh ಪೋರ್ಟಬಲ್ ಬ್ಯಾಟರಿ ಹೊಂದಿರುವ ಪ್ಯೂರ್ ಇಪ್ಲುಟೊ ಸ್ಕೂಟರ್ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಒಂದು. ಮೂರು ಮೋಡ್ಗಳಲ್ಲಿ ಲಭ್ಯವಿರುವ ಈ ಸ್ಕೂಟರ್ನಲ್ಲಿ ಕೇವಲ ಐದು ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗ ಪಡೆದುಕೊಳ್ಳಬಹುದು.
13/ 16
ಹಾಗೆಯೇ ಅತ್ಯಾಧುನಿಕ 6 ಇಂಚಿನ ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೂಡ ಇದರಲ್ಲಿ ನೀಡಲಾಗಿದ್ದು, ಇದು ಚಾಲಕನಿಗೆ ಬೇಕಾದ ಅಗತ್ಯ ಮಾಹಿತಿಯನ್ನು ತೋರಿಸುತ್ತದೆ. ಒಂದು ಬಾರಿ ಇಪ್ಲುಟೊವನ್ನು ಸಂಪೂರ್ಣ ಚಾರ್ಜ್ ಮಾಡಿದ್ರೆ 100 ಕಿ.ಮೀ ಮೈಲೇಜ್ ಸಿಗಲಿದೆ. ಅಂದಹಾಗೆ ಇದರ ಬೆಲೆ 75,000 ರೂ.
14/ 16
22Motors Flow
15/ 16
22 ಮೋಟರ್ಗಳ ಫ್ಲೋ ಎಲೆಕ್ಟ್ರಿಕ್ ಸ್ಕೂಟರ್ ಶೇ.70 ರಷ್ಟು ಚಾರ್ಜ್ ಆಗಲು ತೆಗೆದುಕೊಳ್ಳುವ ಸಮಯ ಕೇವಲ ಒಂದು ಗಂಟೆ ಮಾತ್ರ. ಹಾಗೆಯೇ ಇದರಲ್ಲಿ ಎರಡು ಬ್ಯಾಟರಿ ಬಳಸುವ ಅವಕಾಶ ಕೂಡ ಇರುವುದು ವಿಶೇಷ. ಅಂದರೆ ಒಂದು ಬಾರಿ ಫುಲ್ ಚಾರ್ಜ್ ಮಾಡಿಕೊಂಡರೆ 80 ಕಿ.ಮೀ ರೈಡಿಂಗ್ ರೇಂಜ್ ನೀಡಲಿದೆ.
16/ 16
ಹಾಗೆಯೇ 22 ಮೋಟರ್ಗಳ ಫ್ಲೋನಲ್ಲಿ ನೀವು ಡ್ಯುಯಲ್ ಬ್ಯಾಟರಿ ಬಳಸಿದರೆ ಮೈಲೇಜ್ನ್ನು 160 ಕಿ.ಮೀ ವರೆಗೆ ದ್ವಿಗುಣಗೊಳಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಈ ಸ್ಕೂಟರ್ನ ಬೆಲೆ 83 ಸಾವಿರ ರೂ.