ವಾತಾವರಣದಲ್ಲಿ ತಾಪಮಾನ ಹೆಚ್ಚಾಗುವುದು ಮಾತ್ರವಲ್ಲ, ಈ ಸಂದರ್ಭದಲ್ಲಿ ಎಸಿಗಳು ಮತ್ತು ಫ್ಯಾನ್‌ಗಳು ರನ್ ಆಗುತ್ತಲೇ ಇರುತ್ತವೆ. ಕೆಲವರು ಹೊಸ ಎಸಿಗಳನ್ನು ಖರೀದಿಸುತ್ತಿದ್ದರೆ, ಇನ್ನು ಕೆಲವರು ಈಗಾಗಲೇ ಇರುವ ಎಸಿಗಳನ್ನೇ ಬಳಸುತ್ತಾರೆ. ಆದರೆ, ಮಾರ್ಚ್‌ಗಿಂತ ಏಪ್ರಿಲ್‌ನಲ್ಲಿ ವಿದ್ಯುತ್ ಬಿಲ್ ಜಾಸ್ತಿಯಾಗಲಿದೆ ಎಂಬ ಭಯ ಅನೇಕರಲ್ಲಿದೆ. ಅದರಲ್ಲೂ ಎಸಿ ಬಳಸಿದರೆ ಸಾವಿರಾರು ರೂಪಾಯಿಯಷ್ಟು ಒಂದು ತಿಂಗಳಿನಲ್ಲಿ ಬಿಲ್ ಬರುತ್ತದೆ.
ಎಸಿ ಜೊತೆಗೆ ಫ್ಯಾನ್ ಬಳಸಿ: ಎಸಿ ತಾಪಮಾನವನ್ನು ಕಡಿಮೆ ಮಾಡದೆ 24 ರ ಹತ್ತಿರ ಇಟ್ಟು, ಕೊಠಡಿಯನ್ನು ತಂಪಾಗಿರಿಸಲು ಫ್ಯಾನ್ ಬಳಸಿ. ಸ್ವಲ್ಪ ಸಮಯದ ನಂತರ ನೀವು ಎಸಿಯನ್ನು ಸ್ವಿಚ್ ಆಫ್ ಮಾಡಬಹುದು. ಇದರಿಂದ ಫ್ಯಾನ್ ಕೂಲಿಂಗ್ ನೀಡುತ್ತದೆ. ಹಾಗೆಯೇ ಎಸಿ ಆನ್ ಮಾಡುವ ಮುನ್ನ ಕೊಠಡಿಯಲ್ಲಿರುವ ಬಿಸಿ ಗಾಳಿಯನ್ನು ಹೊರಹಾಕಲು ಫ್ಯಾನ್ ಅನ್ನು ಸ್ವಲ್ಪ ಹೊತ್ತು ಆನ್ ಮಾಡಿ. ಅದರ ನಂತರ ಎಸಿ ಆನ್ ಮಾಡಿದ ತಕ್ಷಣ ಕೊಠಡಿ ತಂಪಾಗುತ್ತದೆ.