Tech Tips: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಫೋಲ್ಡೇಬಲ್ ಫ್ಯಾನ್​! ಮಡಚಿ, ಎಲ್ಲಿಗೆ ಬೇಕಾದ್ರೂ ಎತ್ಕೊಂಡ್ ಹೋಗಿ!

Foldable Fan: ಬೇಸಿಗೆ ಕಾಲ ಬಂದಾಗಿದೆ. ಈ ಸಮಯದಲ್ಲಿ ಎಸಿ, ಏರ್​ಕೂಲರ್, ಫ್ಯಾನ್​ ಅಂತ ಮೊರೆ ಹೋಗೋದು ಸಹಜ. ಇದಕ್ಕಾಗಿ ಕಂಪೆನಿಯೊಂದು ಫೋಲ್ಡೇಬಲ್ ಫ್ಯಾನ್​ ಅನ್ನು ಬಿಡುಗಡೆ ಮಾಡಿದೆ. ಇದರ ಫೀಚರ್ಸ್​ ನೋಡಿದ್ರೆ ಗ್ಯಾರಂಟಿ ಖರೀದಿಸ್ತೀರಾ.

First published:

  • 17

    Tech Tips: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಫೋಲ್ಡೇಬಲ್ ಫ್ಯಾನ್​! ಮಡಚಿ, ಎಲ್ಲಿಗೆ ಬೇಕಾದ್ರೂ ಎತ್ಕೊಂಡ್ ಹೋಗಿ!

    ಮಾರುಕಟ್ಟೆಯಲ್ಲಿ ಹಲವಾರು ಫ್ಯಾನ್​​ಗಳು ಎಂಟ್ರಿ ನೀಡುತ್ತಿರುತ್ತದೆ. ಇದೀಗ ಫೋಲ್ಡೇಬಲ್ ಫ್ಯಾನ್ ಸಹ ಬಂದಿದೆ. ಇದನ್ನು ಡಿವೈಸ್ ಕಂಪೆನಿ ತಯಾರಿಸಿದೆ. ಈ ಫೋಲ್ಡಬಲ್ ಫ್ಯಾನ್ ಅನ್ನು ಚಾರ್ಜ್ ಸಹ ಮಾಡಬಹುದು. ಇದಕ್ಕಾಗಿ, ಈ ಫ್ಯಾನ್ ರೀಚಾರ್ಜ್ ಮಾಡಬಹುದಾದ ಬ್ಯಾಟರಿಯನ್ನು ಹೊಂದಿದೆ. ಈ ಫ್ಯಾನ್ 360 ಡಿಗ್ರಿಗಳನ್ನು ತಿರುಗಿಸಬಲ್ಲದು. ವಿದ್ಯುತ್ ಹೋದಾಗ ಇದು ಬ್ಯಾಟರಿಯಿಂದ ಕೆಲಸ ಮಾಡುತ್ತದೆ. ಈ ಫ್ಯಾನ್‌ನ ಬ್ಲೇಡ್‌ಗಳು ಪ್ರತಿ ನಿಮಿಷಕ್ಕೆ 3,800 ಬಾರಿ ತಿರುಗುತ್ತವೆ.

    MORE
    GALLERIES

  • 27

    Tech Tips: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಫೋಲ್ಡೇಬಲ್ ಫ್ಯಾನ್​! ಮಡಚಿ, ಎಲ್ಲಿಗೆ ಬೇಕಾದ್ರೂ ಎತ್ಕೊಂಡ್ ಹೋಗಿ!

    ಈ ಫ್ಯಾನ್‌ನಲ್ಲಿರುವ 1600 mAh ಲಿಥಿಯಂ ಐಯಾನ್ ಬ್ಯಾಟರಿಯನ್ನು USB ಕೇಬಲ್ ಮೂಲಕ ಚಾರ್ಜ್ ಮಾಡಬಹುದು. ಒಮ್ಮೆ ಪೂರ್ತಿ ಚಾರ್ಜ್ ಮಾಡಲು 5-6 ಗಂಟೆ ತೆಗೆದುಕೊಳ್ಳುತ್ತದೆ ಎಂದು ಕಂಪೆನಿ ಹೇಳಿದೆ.

    MORE
    GALLERIES

  • 37

    Tech Tips: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಫೋಲ್ಡೇಬಲ್ ಫ್ಯಾನ್​! ಮಡಚಿ, ಎಲ್ಲಿಗೆ ಬೇಕಾದ್ರೂ ಎತ್ಕೊಂಡ್ ಹೋಗಿ!

    ಇದನ್ನು ಟೇಬಲ್ ಫ್ಯಾನ್ ಆಗಿಯೂ ಬಳಸ್ಬಹುದು. ಅದನ್ನು ನಮಗೆ ಇಷ್ಟವಾದಂತೆ ಮಡಚಿ ಎಲ್ಲಿ ಬೇಕಾದರೂ ಉಪಯೋಗಿಸುವಂತೆ ಸಹ ವಿನ್ಯಾಸ ಮಾಡಲಾಗಿದೆ. ಇದನ್ನು ಅಡುಗೆಮನೆ, ಲಾಂಡ್ರಿ ಕೊಠಡಿ, ಬೆಡ್​ ರೂಮ್​ ಮತ್ತು ಕಚೇರಿಗಳಲ್ಲೂ ಬಳಸಬಹುದು.

    MORE
    GALLERIES

  • 47

    Tech Tips: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಫೋಲ್ಡೇಬಲ್ ಫ್ಯಾನ್​! ಮಡಚಿ, ಎಲ್ಲಿಗೆ ಬೇಕಾದ್ರೂ ಎತ್ಕೊಂಡ್ ಹೋಗಿ!

    ಈ ಫ್ಯಾನ್ 44 ಸೆಂ ಎತ್ತರ ಮತ್ತು 18 ಸೆಂ ಅಗಲವಿದೆ. ಇದನ್ನು ಗೋಡೆಯ ಮೇಲೂ ಹೊಂದಿಸಬಹುದು ಎಂದು ಕಂಪೆನಿ ಹೇಳಿದೆ. ಈ ಫ್ಯಾನ್ ವಿಶೇಷ ಎಲ್ಇಡಿ ಲೈಟ್ ಹೊಂದಿದೆ. ಹಾಗಾಗಿ ರಾತ್ರಿಯಲ್ಲಿ ಬೆಡ್ ಲೈಟ್ ನಂತೆಯೂ ಬಳಸಬಹುದು.

    MORE
    GALLERIES

  • 57

    Tech Tips: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಫೋಲ್ಡೇಬಲ್ ಫ್ಯಾನ್​! ಮಡಚಿ, ಎಲ್ಲಿಗೆ ಬೇಕಾದ್ರೂ ಎತ್ಕೊಂಡ್ ಹೋಗಿ!

    ಪ್ಲಾಸ್ಟಿಕ್‌ನಿಂದ ಮಾಡಲಾದ ಈ ಫ್ಯಾನ್​ನಲ್ಲಿ ಸ್ವಿಚ್ ಮೂಲಕ ನಿಯಂತ್ರಣ ಮಾಡಬಹುದಾಗಿದೆ. ಈ ಫ್ಯಾನ್ 5 ಸ್ಪೀಡ್ ಆಯ್ಕೆಗಳನ್ನು ಸಹ ಹೊಂದಿದೆ. ಇದು 2 ವ್ಯಾಟ್​​ಗಳು ಮತ್ತು 5 ವೋಲ್ಟ್ಗಳ ವೋಲ್ಟೇಜ್ ಅನ್ನುಒಳಗೊಂಡಿದೆ.

    MORE
    GALLERIES

  • 67

    Tech Tips: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಫೋಲ್ಡೇಬಲ್ ಫ್ಯಾನ್​! ಮಡಚಿ, ಎಲ್ಲಿಗೆ ಬೇಕಾದ್ರೂ ಎತ್ಕೊಂಡ್ ಹೋಗಿ!

    ಈ ಫ್ಯಾನಿನ ಒಟ್ಟು ತೂಕ 842 ಗ್ರಾಂ. ಇದನ್ನು ಸಂಪೂರ್ಣವಾಗಿ ಫೋಲ್ಡ್​ ಸಹ ಮಾಡಬಹುದು. ಟ್ರಾವೆಲ್​ ಮಾಡುವಾಗಲು ಇದನ್ನು ಬಳಸ್ಬಹುದು. ಒಮ್ಮೆ ಇದನ್ನು ಚಾರ್ಜ್ ಮಾಡಿದ್ರೆ ಹೆಚ್ಚಿನ ವೇಗದಲ್ಲಿ 2.5 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಅದೇ ಕಡಿಮೆ ವೇಗದಲ್ಲಿ 3 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ.

    MORE
    GALLERIES

  • 77

    Tech Tips: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಫೋಲ್ಡೇಬಲ್ ಫ್ಯಾನ್​! ಮಡಚಿ, ಎಲ್ಲಿಗೆ ಬೇಕಾದ್ರೂ ಎತ್ಕೊಂಡ್ ಹೋಗಿ!

    ಅಲ್ಲದೆ ಇದರ ಲೈಟ್ ಅನ್ನು ಹೆಚ್ಚು ಬ್ರೈಟ್ ನೆಸ್ ನಲ್ಲಿ ಆನ್ ಮಾಡಿಟ್ಟರೆ  6-8 ಗಂಟೆವರೆಗೆ ಕೆಲಸ ಮಾಡುತ್ತದೆ. ಹಾಗೆಯೇ ಕಡಿಮೆ ಬೆಳಕಿನಲ್ಲಿ ಕೆಲಸ ಮಾಡಿದರೆ, 8-10 ಗಂಟೆ ಕೆಲಸ ಮಾಡುತ್ತದೆ. ಈ ಫ್ಯಾನ್‌ನ ಮೂಲ ಬೆಲೆ ರೂ.1,499. ಇದನ್ನು ಅಮೆಜಾನ್‌ನಲ್ಲಿ 47 ಶೇಕಡಾ ರಿಯಾಯಿತಿಯಲ್ಲಿ 799 ರೂ.ಗೆ ಮಾರಾಟ ಮಾಡಲಾಗುತ್ತಿದೆ.

    MORE
    GALLERIES