Flipkart: ಆನ್ಲೈನ್ ಇ-ಕಾಮರ್ಸ್ ಮಳಿಗೆಯಾದ ಫ್ಲಿಪ್ಕಾರ್ಟ್ ಸ್ಮಾರ್ಟ್ಫೋನ್ ಕಾರ್ನಿವಲ್ ಫೆಸ್ಟ್ ನಡೆಸುತ್ತಾ ಬಂದಿದೆ, ಸೆಪ್ಟೆಂಬರ್ 2ರಿಂದ ಆರಂಭವಾಗಿ ಇಂದು ರಾತ್ರಿ ಕೊನೆಗೊಳ್ಳಲಿದೆ. ಮಾರಾಟದ ಭಾಗವಾಗಿ ಫ್ಲಿಪ್ಕಾರ್ಟ್ iPhone 12, iPhone 11, ಮತ್ತು iPhone XR ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ಅಂದಹಾಗೆಯೇ ಫ್ಲಿಪ್ಕಾರ್ಟ್ನಲ್ಲಿ 9,499 ರೂ.ಗಳಿಂದ ಆರಂಭವಾಗುವ ಕೆಲವು ಉತ್ತಮ ಫೋನ್ ಬಗ್ಗೆ ಮಾಹಿತಿ ಇಲ್ಲಿದೆ.
Infinix Hot 10S at Rs 9,499: ಫ್ಲಿಪ್ಕಾರ್ಟ್ ಕಾರ್ನಿವಲ್ ಸೇಲ್ನಲ್ಲಿ ಈ ಸ್ಮಾರ್ಟ್ಫೋನನ್ನು 9,499 ರೂ.ಗೆ ಮಾರಾಟ ಮಾಡುತ್ತಿದೆ. ಇದರ ಮೂಲಕ ಬೆಲೆ 9,999 ರೂ ಆಗಿದ್ದು, 500 ರೂ ರಿಯಾಯಿತಿ ನೀಡಿದೆ, ಹಾಗಾಗಿ 9,499 ರೂಗೆ ಖರೀದಿಗೆ ಸಿಗುತ್ತದೆ. ಜೊತೆಗೆ ಎಕ್ಸ್ಚೇಂಜ್ ಆಫರ್ ಕೂಡ ನೀಡಿದೆ. ಇನ್ಫಿನಿಕ್ಸ್ ಹಾಟ್ 10 ಎಸ್ ಸ್ಮಾರ್ಟ್ಫೋನ್ 6.82-ಇಂಚಿನ HD+ 90Hz ಡಿಸ್ಪ್ಲೇ ಹೊಂದಿದ್ದು, 6,000mAh ಬ್ಯಾಟರಿ, ಜೊತೆಗೆ ಮೀಡಿಯಾ ಟೆಕ್ ಹೆಲಿಯೋ G85 ಚಿಪ್ಸೆಟ್ ಹೊಂದಿದೆ.