ರಿಯಲ್ಮಿ ಟೆಕ್ ಲೈಫ್ಬಡ್ಸ್ ಟಿ100: ಈ ಇಯರ್ಬಡ್ಗಳು 10mm ಡ್ರೈವರ್ಗಳೊಂದಿಗೆ ಬರುತ್ತವೆ, AI ENC. 1.5 ಗಂಟೆಗಳ ಕಾಲ ಇದು ಫುಲ್ ಚಾರ್ಜ್ ಆಗಲು ಸಮಯ ತೆಗೆದುಕೊಳ್ಳುತ್ತದೆ ಆದರೆ 28 ಗಂಟೆಗಳ ಬ್ಯಾಟರಿ ಅವಧಿಯನ್ನು ಸಹ ಇದು ನೀಡುತ್ತದೆ. ರಿಯಲ್ಮಿ ಟೆಕ್ ಲೈಫ್ಬಡ್ಸ್ ಟಿ100 ಪ್ರಸ್ತುತ ರೂ.2,999 ಕ್ಕೆ ಲಭ್ಯವಿದೆ, ಆದರೆ ಫ್ಲಿಪ್ಕಾರ್ಟ್ ವರ್ಷಾಂತ್ಯದ ಮಾರಾಟದ ಸಮಯದಲ್ಲಿ ರೂ.1692 ರ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಮತ್ತು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮೂಲಕ ಇಎಮ್ಐ ವಹಿವಾಟು ನಡೆಸಿದರೆ ನೀವು ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು.
ನಾಯ್ಸ್ ಬಡ್ಸ್ ವಿಎಸ್102 ಪ್ಲಸ್: ಈ ಸಾಧನವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 11mm ಡ್ರೈವರ್ಗಳೊಂದಿಗೆ ಇದು ಲಭ್ಯವಿದೆ. ಒಟ್ಟು ಬ್ಯಾಟರಿ ಬಾಳಿಕೆ 36 ಗಂಟೆಗಳವರೆಗೆ ಇರುತ್ತದೆ. ನಾಯ್ಸ್ ಬಡ್ಸ್ ವಿಎಸ್102 ಪ್ಲಸ್ ಅನ್ನು ರೂ 3,999 ಕ್ಕೆ ಬಿಡುಗಡೆ ಮಾಡಲಾಗಿದೆ. ಆದರೆ ವರ್ಷಾಂತ್ಯದ ಮಾರಾಟದ ಸಮಯದಲ್ಲಿ, ಫ್ಲಿಪ್ಕಾರ್ಟ್ ರೂ.1,599 ರ ರಿಯಾಯಿತಿ ಬೆಲೆಯಲ್ಲಿ ಗ್ರಾಹಕರು ಇದನ್ನು ಪಡೆಯಬಹುದು. ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಇಎಮ್ಐ ವಹಿವಾಟಿನ ಮೇಲೆ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು.
ಬೌಲ್ಟ್ ಆಡಿಯೋ ಏರ್ಬಡ್ಸ್ ವೈ1: ಫ್ಲಿಪ್ಕಾರ್ಟ್ನಲ್ಲಿ ವರ್ಷಾಂತ್ಯದ ಮಾರಾಟದ ಸಮಯದಲ್ಲಿ ಈ ಇಯರ್ಬಡ್ಸ್ ಅನ್ನು ರೂ.1399 ಕ್ಕೆ ಪಡೆಯಬಹುದು. ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಇಎಮ್ಐ ವಹಿವಾಟಿನ ಮೇಲೆ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆಯಬಹುದು.ಇದು ಅಂತರ್ನಿರ್ಮಿತ ಆಡಿಯೋ ಇಯರ್ಫೋನ್ಗಳು, ಬ್ಲೂಟೂತ್ ವಿ5.1, IPX5 ವಾಟರ್ ರೆಸಿಸ್ಟೆಂಟ್ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಇದನ್ನು 10 ನಿಮಿಷಗಳ ಕಾಲ ಚಾರ್ಜ್ ಮಾಡಿದ್ರೆ 100 ನಿಮಿಷಗಳಕಅಲ ಬಳಸಬಹುದಾಗಿದೆ.
ಬೋಟ್ ಏರ್ಡೋಪ್ಸ್ 161 : ಬೋಟ್ ಕಂಪನಿಯ ಈ ಇಯರ್ ಬಡ್ಗಳು ಬ್ಲೂಟೂತ್ v5.1 ನೊಂದಿಗೆ ಕನೆಕ್ಟ್ ಮಾಡಬಹುದಾಗಿದೆ. ಇದು IPX5 ವಾಟರ್ ರೆಸಿಸ್ಟೆಂಟ್ನೊಂದಿಗೆ ಬರುತ್ತದೆ. ಇದರ ಒಟ್ಟು ಬ್ಯಾಟರಿ ಬಾಳಿಕೆ 17 ಗಂಟೆಗಳು. ಇದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಬೋಟ್ ಏರ್ಡೋಪ್ಸ್ 161 ಬೆಲೆ ರೂ.1,399 ಆಗಿದೆ. ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಇಎಮ್ಐ ವಹಿವಾಟುಗಳ ಮೂಲಕ 10% ರಿಯಾಯಿತಿಯನ್ನು ಪಡೆಯಬಹುದು.