Oppo A12 ಅನ್ನು 15 ರೂ.ಗೆ ಖರೀದಿಸಿ: 64GB ಇಂಟರ್ನಲ್ ಸ್ಟೋರೇಜ್ ಹೊಂದಿರುವ Oppo ನ ಈ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ 11,990 ಸಿಗುತ್ತಿದೆ. ಆದರೆ ಇದನ್ನು 4% ರಷ್ಟು ರಿಯಾಯಿತಿಯ ನಂತರ ಫ್ಲಿಪ್ಕಾರ್ಟ್ನಿಂದ 11,490 ರೂ.ಗೆ ಖರೀದಿಸಬಹುದು. ಇಷ್ಟು ಮಾತ್ರವಲ್ಲದೆ, ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಟ್ನೊಂದಿಗೆ ಖರೀದಿಸಿದರೆ, 5% ಅಂದರೆ 575 ರೂಗಳ ಕ್ಯಾಶ್ಬ್ಯಾಕ್ ಸಿಗಲಿದೆ. ಆ ಮೂಲಕ ಸ್ಮಾರ್ಟ್ಫೋನ್10,915 ರೂ.ಗೆ ಸಿಗಲಿದೆ.
ಫ್ಲಿಪ್ಕಾರ್ಟ್ Oppo A12 ಸ್ಮಾರ್ಟ್ಫೋನಿನ ಮೇಲೆ ವಿನಿಮಯ ಕೊಡುಗೆಯನ್ನು ಸಹ ನೀಡುತ್ತಿದೆ. ಹಳೆಯ ಸ್ಮಾರ್ಟ್ಫೋನ್ಗೆ ಬದಲಾಗಿ ನೀವು ಈ Oppo ಸ್ಮಾರ್ಟ್ಫೋನ್ ಅನ್ನು ಖರೀದಿಸಿದರೆ 10,900 ರೂ.ವರೆಗೆ ಉಳಿಸಬಹುದಾಗಿದೆ. ಈ ಸ್ಮಾರ್ಟ್ಫೋನನ್ನ ಸಂಪೂರ್ಣ ಪ್ರಯೋಜನವನ್ನು ಪಡೆದರೆ 10,915 ರೂ.ವಿನ ಬದಲಿಗೆ ಕೇವಲ 15 ರೂಗಳಲ್ಲಿ Oppo A12 ಅನ್ನು ಖರೀದಿಸಲು ಸಾಧ್ಯವಾಗುತ್ತದೆ.
Oppo A12 ನ ವೈಶಿಷ್ಟ್ಯಗಳು: ಈ 4G ಸ್ಮಾರ್ಟ್ಫೋನ್ 3D ಡೈಮಂಡ್ ಬ್ಲೇಜ್ ವಿನ್ಯಾಸದೊಂದಿಗೆ ಬರುತ್ತದೆ. ಡಿಸ್ಪ್ಲೇ ಬಗ್ಗೆ ಮಾತನಾಡುವುದಾದರೆ, ತೆಳುವಾದ ಮತ್ತು ಹಗುರವಾದ ಫೋನ್ ಇದಾಗಿದ್ದು, 6.22-ಇಂಚಿನ HD + TFT LCD ಡಿಸ್ಪ್ಲೇಯನ್ನು ಹೊಂದಿದೆ. MediaTek Helio P35 ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಮತ್ತು 4,230mAh ಬ್ಯಾಟರಿಯನ್ನು ಅಳವಡಿಸಿಕೊಂಡಿದೆ.