ಮೊಟೊರೊಲಾ ಇಂಡಿಯಾ ಕಳೆದ ವರ್ಷ ಬಿಡುಗಡೆಯಾದ Moto G31 ಸ್ಮಾರ್ಟ್ಫೋನ್ನ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ. ಬಿಡುಗಡೆ ಬೆಲೆಗೆ ಹೋಲಿಸಿದರೆ ಈ ಮೊಬೈಲ್ ಬೆಲೆ 1000 ರೂಪಾಯಿ ಇಳಿಕೆಯಾಗಿದೆ. ಪ್ರಸ್ತುತ ಫ್ಲಿಪ್ಕಾರ್ಟ್ನಲ್ಲಿ ಬ್ಯಾಂಕ್ ರಿಯಾಯಿತಿ ಕೊಡುಗೆಯಂದಿಗೆ ಮಾರಾಟ ಮಾಡುತ್ತಿದೆ. ಈ ಆಫರ್ನೊಂದಿಗೆ Moto G31 ಸ್ಮಾರ್ಟ್ಫೋನನ್ನು 10,700 ರೂ.ಗೆ ಖರೀದಿಸಬಹುದು.
ಇದೀಗ ಫ್ಲಿಪ್ಕಾರ್ಟ್ನಲ್ಲಿ ಬ್ಯಾಂಕ್ ರಿಯಾಯಿತಿ ಕೊಡುಗೆಯೊಂದಿಗೆ 4GB + 64GB ರೂಪಾಂತರವನ್ನು 10,700 ರೂ.ನಲ್ಲಿ ಖರೀದಿಸಬಹುದಾಗಿದೆ. ಸಿಟಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ನೊಂದಿಗೆ ಮಾಡಿದ ಖರೀದಿಗಳ ಮೇಲೆ 10% ರಿಯಾಯಿತಿ ನೀಡುತ್ತಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ನೊಂದಿಗೆ ಮಾಡಿದ ಖರೀದಿಗಳ ಮೇಲೆ 5% ಕ್ಯಾಶ್ಬ್ಯಾಕ್. EMI ಮೂಲಕ ಈ ಮೊಬೈಲ್ ಖರೀದಿಸಲು EMI ಕೊಡುಗೆಗಳಿವೆ. EMI ರೂಪಾಯಿ 416 ರಿಂದ ಪ್ರಾರಂಭವಾಗುತ್ತದೆ.
Moto G31 ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು 50 ಮೆಗಾಪಿಕ್ಸೆಲ್ ಮುಖ್ಯ ಸಂವೇದಕ + 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ + 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸಂವೇದಕದೊಂದಿಗೆ ಹೊಂದಿದೆ. ಕ್ಯಾಮೆರಾವು ಡ್ಯುಯಲ್ ಕ್ಯಾಪ್ಚರ್, ಸ್ಪಾಟ್ ಕಲರ್, ನೈಟ್ ವಿಷನ್, ಪೋಟ್ರೇಟ್, ಲೈವ್ ಫಿಲ್ಟರ್, ಎಆರ್ ಸ್ಟಿಕ್ಕರ್ಗಳು, ಪ್ರೊ ಮೋರ್ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 13 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
Moto G31 ಸ್ಮಾರ್ಟ್ಫೋನ್ Android 11 ಸ್ಟಾಕ್ ಆಪರೇಟಿಂಗ್ ಸಿಸ್ಟಮ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು Google Apps ಹೊರತುಪಡಿಸಿ ಯಾವುದೇ ಬ್ಲೋಟ್ವೇರ್ ಅಥವಾ ಅಂತರ್ಗತ ಅಪ್ಲಿಕೇಶನ್ಗಳನ್ನು ಹೊಂದಿಲ್ಲ. ಮೈಕ್ರೊ SD ಕಾರ್ಡ್ ಸ್ಲಾಟ್ನೊಂದಿಗೆ ಮೆಮೊರಿಯನ್ನು 1TB ವರೆಗೆ ವಿಸ್ತರಿಸಬಹುದು. 4G LTE, FM ರೇಡಿಯೋ, 3.5mm ಆಡಿಯೋ ಜ್ಯಾಕ್, ಬ್ಲೂಟೂತ್ ಆವೃತ್ತಿ 5, ಡ್ಯುಯಲ್ ಬ್ಯಾಂಡ್ ವೈಫೈ, USB ಟೈಪ್-ಸಿ ಬೆಂಬಲವನ್ನು ಒಳಗೊಂಡಿದೆ.