Flipkart Moto Days Sale: ಫ್ಲಿಪ್ಕಾರ್ಟ್ ಮೊಟೊ ಡೇಸ್ ಸೇಲ್ ಆರಂಭ! ಮೊದಲ ಬಾರಿಗೆ ಈ ಸ್ಮಾರ್ಟ್ಫೋನ್ ಮೇಲೆ ಭರ್ಜರಿ ರಿಯಾಯಿತಿ
ಫ್ಲಿಪ್ಕಾರ್ಟ್ ಇದೀಗ ಮೊಟೊ ಡೇಸ್ ಸೇಲ್ ಅನ್ನು ಆರಂಭಿಸಿದೆ. ಈ ಸೇಲ್ನಲ್ಲಿ ಮೊಟೊರೊಲಾ ಕಂಪೆನಿಯ ಸ್ಮಾರ್ಟ್ಫೋನ್ಗಳು ಬಾರೀ ಅಗ್ಗದ ಬೆಲೆಯಲ್ಲಿ ದೊರೆಯುತ್ತದೆ. ಈ ಮೂಲಕ ಹೊಸ ಸ್ಮಾರ್ಟ್ಫೋನ್ ಅನ್ನು ಖರೀದಿ ಮಾಡುವ ಪ್ಲ್ಯಾನ್ನಲ್ಲಿದ್ದವರಿಗೆ ಈ ಸೇಲ್ ಉತ್ತಮವಾಗಿದೆ.
ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಇತ್ತೀಚೆಗೆ ಮತ್ತೊಂದು ಮಾರಾಟದೊಂದಿಗೆ ಗ್ರಾಹಕರ ಮುಂದೆ ಬಂದಿದೆ. ಮೋಟೋ ಡೇಸ್ ಮಾರಾಟವನ್ನು ಇತ್ತೀಚೆಗೆ ಈ ವೆಬ್ಸೈಟ್ ಘೋಷಿಸಿದೆ. ಈ ಮಾರಾಟವು ಜನವರಿ 23 ರವರೆಗೆ ಮುಂದುವರಿಯುತ್ತದೆ. ಈ ಸೇಲ್ನಲ್ಲಿ ಅಗ್ಗದ ಬೆಲೆಯಲ್ಲಿ ಮೊಟೊರೊಲಾ ಫೋನ್ಗಳನ್ನು ಹೊಂದುವ ಅವಕಾಶವನ್ನು ಫ್ಲಿಪ್ಕಾರ್ಟ್ ಒದಗಿಸುತ್ತಿದೆ.
2/ 8
ಈ ಸೇಲ್ನಲ್ಲಿನ ಅತ್ಯುತ್ತಮ ಡೀಲ್ ಕುರಿತು ಮಾತನಾಡುವುದಾದರೆ, ಗ್ರಾಹಕರು ಮೊಟೊ ಇ40 ಸ್ಮಾರ್ಟ್ಫೋನ್ ಅನ್ನು 10,999 ರೂಗಳ ಬದಲಿಗೆ ಕೇವಲ 7,249 ರೂಗಳಲ್ಲಿ ಖರೀದಿಸಬಹುದು. ಇದರ ಮೇಲೆ 27% ರಿಯಾಯಿತಿ ಲಭ್ಯ ಇದೆ. ಇದಲ್ಲದೇ. ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.
3/ 8
ಮೊಟೊ ಇ40 6.5-ಇಂಚಿನ ಮ್ಯಾಕ್ಸ್ ವಿಷನ್ ಹೆಚ್ಡಿ+ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಇದು 90Hz ರಿಫ್ರೆಶ್ ರೇಟ್ ಮತ್ತು 400 ನಿಟ್ಸ್ ಬ್ರೈಟ್ನೆಸ್ನೊಂದಿಗೆ ಬರುತ್ತದೆ. ಮೊಟೊ ಇ40 4ಜಿಬಿ ರ್ಯಾಮ್ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
4/ 8
ಇನ್ನು ಮೊಟೊ ಇ40 ಸ್ಮಾರ್ಟ್ಫೋನ್ ಯುನಿಎಸ್ಓಸಿ ಟಿ700 ಆಕ್ಟಾ-ಕೋರ್ ಚಿಪ್ಸೆಟ್ ಅನ್ನು ಬೆಂಬಲಿಸುತ್ತದೆ. ಮೈಕ್ರೋ ಎಸ್ಡಿ ಕಾರ್ಡ್ನ ಸಹಾಯದಿಂದ ಫೋನ್ನ ಇಂಟರ್ನಲ್ ಸ್ಟೋರೇಜ್ ಅನ್ನು 1ಟಿಬಿ ವರೆಗೆ ಹೆಚ್ಚಿಸಬಹುದು.
5/ 8
ಮೊಟೊ ಇ40 ಕ್ಯಾಮೆರಾ ಫಿಚರ್ಸ್ ಬಗ್ಗೆ ಹೇಳುವುದಾದರೆ ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾವನ್ನು ಹೊಂದಿದೆ.
6/ 8
ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್ಗಾಗಿ ಈ ಸ್ಮಾರ್ಟ್ಫೋನ್ನಲ್ಲಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
7/ 8
ಈ ಮೊಟೊರೊಲಾ ಇ40 ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಇದು 40 ಗಂಟೆಗಳವರೆಗೆ ಬ್ಯಾಕಪ್ ಅನ್ನು ನೀಡುತ್ತದೆ.
8/ 8
ಇನ್ನು ಮೊಟೊ ಇ40 ಸ್ಮಾರ್ಟ್ಫೋನ್ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಬೆಂಬಲ, ವೈಫೈ 802.11, ಬ್ಲೂಟೂತ್ 5.0,ಜಿಪಿಎಸ್, ಯುಎಸ್ಬಿ ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಸೇರಿವೆ. ಫೋನ್ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಅಳವಡಿಸಲಾಗಿದೆ.