ದೀಪಾವಳಿ ಸಮಯದಲ್ಲಿ ಹೊಸ ಟಿವಿಯನ್ನು ಖರೀದಿಸುವವರಾದರೆ ಇದು ಸರಿಯಾದ ಅವಕಾಶ ಎಂದು ಫ್ಲಿಪ್ಕಾರ್ಟ್ ಹೇಳಿದೆ. ಏಕೆಂದರೆ ಸ್ಯಾಮ್ಸಂಗ್ 32 ಇಂಚಿನ ಸ್ಮಾರ್ಟ್ ಟಿವಿ ಅತ್ಯಂತ ಅಗ್ಗವಾಗಿ ಮಾರಾಟ ಮಾಡುತ್ತಿದೆ. ಫ್ಲಿಪ್ಕಾರ್ಟ್ನಲ್ಲಿ ಸ್ಯಾಮ್ಸಂಗ್ 32 ಇಂಚಿನ ಸ್ಮಾರ್ಟ್ ಟಿವಿಯನ್ನು 17,499 ರೂಗಳಲ್ಲಿ ಖರೀದಿಸಬಹುದು, ಆದರೆ ಇದಕ್ಕೂ ಹೆಚ್ಚು ಅಗ್ಗವಾಗಿ ಖರೀದಿಸಬಹುದು ಆಯ್ಕೆಯನ್ನು ಪ್ಲಿಪ್ಕಾರ್ಟ್ ತನ್ನ ಗ್ರಾಹಕರಿಗೆ ನೀಡಿದೆ.
ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ ಮತ್ತಷ್ಟು ಕಡಿಮೆ ಬೆಲೆಗೆ ಹೊಸ ಸ್ಯಾಮ್ಸಂಗ್ ಟಿವಿ ಖರೀದಿಸಬಹುದಾಗಿದೆ. ಆದರೆ ಹಳೆಯ ಟಿವಿಯ ಸ್ಥಿತಿ ಮತ್ತು ಮಾದರಿಯು ಇತ್ತೀಚಿನದ್ದಾಗಿರಬೇಕು, ಆಗ ಮಾತ್ರ ನೀವು ಇದನ್ನು ಹೆಚ್ಚು ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ಹಳೆಯ ಟಿವಿಯನ್ನು ಸಂಪೂರ್ಣ ವಿನಿಮಯ ಮಾಡಿ ಪಡೆದರೆ, ಹೊಸ ಸ್ಯಾಮ್ಸಂಗ್ ಟಿವಿ ನಿಮಗೆ 4,999 ರೂ. ಗೆ ಖರೀದಿಗೆ ಸಿಗುತ್ತದೆ.