ನಥಿಂಗ್ ಫೋನ್ 1 ಸ್ಮಾರ್ಟ್ಫೋನ್ ಕಪ್ಪು, ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದರ ವಿಶಿಷ್ಟ ಗ್ಲಿಫ್ ಇಂಟರ್ಫೇಸ್ ಇದುವರೆಗಿನ ಎಲ್ಲಾ ಮೊಬೈಲ್ ಫೋನ್ಗಳಿಗಿಂತ ಭಿನ್ನವಾಗಿದೆ. ಇದು ಡ್ಯುಯಲ್ 50 ಎಮ್ಪಿ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ಫೋನ್ 6.55-ಇಂಚಿನ ಫುಲ್ ಹೆಚ್ಡಿ+ OLED ಡಿಸ್ಪ್ಲೇ ಜೊತೆಗೆ ಅಡಾಪ್ಟಿವ್ ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುತ್ತದೆ.
ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778+ ಪ್ರೊಸೆಸರ್ನಿಂದ ಚಾಲಿತವಾಗಿದೆ. ಈ ಪ್ರೊಸೆಸರ್ ಕಾಲ್ ಆಫ್ ಡ್ಯೂಟಿಯಂತಹ ಭಅರೀ ಸ್ಟೋರೇಜ್ ಹೊಂದಿದ ಗೇಮ್ ಅನ್ನು ಅತ್ಯಂತ ಸಲೀಸಾಗಿ ಮತ್ತು ಲ್ಯಾಗ್ ಫ್ರೀಯಾಗಿ ಆಡಲು ಅನುಮತಿಸುತ್ತದೆ. ನಥಿಂಗ್ ಫೋನ್ 1 ಸ್ಮಾರ್ಟ್ಫೋನ್ ವಿಶೇಷವಾಗಿ 18 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ವೇಗದ ಚಾರ್ಜಿಂಗ್ನೊಂದಿಗೆ 30 ನಿಮಿಷಗಳಲ್ಲಿ 50% ಚಾರ್ಜ್ ಆಗುತ್ತದೆ. ನಥಿಂಗ್ ಫೋನ್ 1 4,500mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 33W ವೇಗದ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ