Flipkart Big Saving Days: ಸ್ಮಾರ್ಟ್​ಫೋನ್​, ಸ್ಮಾರ್ಟ್​ಟಿವಿಗಳ ಮೇಲೆ ಭರ್ಜರಿ ರಿಯಾಯಿತಿ​

Flipkart Big Saving Days 2021: ಫ್ಲಿಪ್​ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಇಂದಿನಿಂದ ಪ್ರಾರಂಭವಾಗಿ ಡಿಸೆಂಬರ್​ 21 ರವರೆಗೆ ನಡೆಯಲಿದೆ. ಈ ಮಾರಾಟದ ಸಮಯದಲ್ಲಿ ಸಾಮಾನ್ಯ ಗ್ರಾಹಕರಿಗೆ ಮತ್ತು ಫ್ಲಿಪ್​ಕಾರ್ಟ್ ಪ್ಲಸ್ ಗ್ರಾಹಕರಿಗೆ ಕಡಿಮೆ ಬೆಲೆಗಳೊಂದಿಗೆ ಉತ್ಪನ್ನಗಳು ಸಿಗಲಿದೆ. ಜೊತೆಗೆ SBI ಕ್ರೆಡಿಟ್ ಕಾರ್ಡ್​ ಮತ್ತು EMI ವಹಿವಾಟುಗಳ ಮೂಲಕ 10% ತ್ವರಿತ ರಿಯಾಯಿತಿ ಸಿಗಲಿದೆ. ಫ್ಲಿಪ್​ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸಮಯದಲ್ಲಿ, ಟ್ಯಾಬ್ಲೆಟ್​, ಸ್ಮಾರ್ಟ್​ಫೋನ್​, ಟಿವಿ, ಉಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್​ಗಳಂತಹ ಉತ್ಪನ್ನಗಳ ಶ್ರೇಣಿಯು ರಿಯಾಯಿತಿ ದರದಲ್ಲಿ ಖರೀದಿಗೆ ಸಿಗಲಿದೆ. ಜನಪ್ರಿಯ ಮಾದರಿಗಳಾದ iPhone 11, Vivo X60 ಮತ್ತು ಇತರ ಸ್ಮಾರ್ಟ್​ಫೋನ್​ಗಳ ಮೇಲೆ ರಿಯಾಯಿತಿಗಳು ನೀಡಿದ್ದು, ಈ ಮಾರಾಟದ ಸಮಯದಲ್ಲಿ 80% ವರೆಗಿನ ಆಕರ್ಷಕ ಡೀಲ್​ಗಳನ್ನು ಪಡೆಯಬಹುದಾಗಿದೆ.

First published: