ಇತ್ತೀಚೆಗೆ ವಾಟ್ಸ್ಆ್ಯಪ್ ಹೊಸ ಗೌಪ್ಯತೆ ನೀತಿಯನ್ನು ಕುರಿತಾಗಿ ನೋಟಿಫಿಕೇಶನ್ ಕಳುಹಿಸಿತ್ತು. ಆದರೆ ಈ ನೀತಿಯನ್ನು ಒಪ್ಪಿಕೊಳ್ಳದೆ ವಿಶ್ವದಾದ್ಯಂತ ಜನರು ಆಕ್ರೋಶ ಹೊರ ಹಾಕಿದರು.
2/ 9
ಅನೇಕರು ವಾಟ್ಸ್ಆ್ಯಪ್ ಅನ್ನು ತೊರೆದು ಬೇರೆ ಆ್ಯಪ್ಗಳತ್ತ ಮುಖ ಮಾಡಿದರು. ಕೆಲವರು ಟೆಲಿಗ್ರಾಂ, ಸಿಗ್ನಲ್ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡುವ ಮೂಲಕ ಬಳಸಲು ಮುಂದಾದರು. ಹೀಗಾಗಿ ವಾಟ್ಸ್ಆ್ಯಪ್ ತನ್ನ ಬಳಕೆದಾರರನ್ನು ಕಳೆದುಕೊಂಡು ಬಂದಿದೆ.
3/ 9
ಬಳಕೆದಾರರನ್ನು ಕಳೆದುಕೊಳ್ಳುತ್ತಿದ್ದ ವಾಟ್ಸ್ಆ್ಯಪ್ ಸ್ವತಃ ಸ್ಟೇಟಸ್ ಹಾಕಿ ನಿಮ್ಮ ಗೌಪ್ಯತೆಗೆ ನಾವು ಬದ್ಧವಾಗಿದ್ದೇವೆ ಎಂದು ಹೇಳಿತ್ತು. ಆದರು ಅನೇಕರು ವಾಟ್ಸ್ಆ್ಯಪ್ ಅನ್ನು ತೊರೆದು ಬೇರೆ ಆ್ಯಪ್ಗಳತ್ತ ಮುಖ ಮಾಡಿದ್ದಾರೆ.
4/ 9
ಭಾರತದಲ್ಲಿ ಅನೇಕರು ವಾಟ್ಸ್ಆ್ಯಪ್ ಅನ್ನು ಬಳಸುತ್ತಿದ್ದರು. ಆದರೆ ಹೊಸ ಗೌಪ್ಯತೆ ನೀತಿಯಿಂದಾಗಿ ವಾಟ್ಸ್ಆ್ಯಪ್ ಅನ್ನು ಅನ್ಇನ್ಸ್ಟಾಲ್ ಮಾಡಿದ್ದಾರೆ.
5/ 9
ಅಂದಹಾಗೆಯೇ ಭಾರತದಲ್ಲಿ ಎಷ್ಟು ಮಂದಿ ವಾಟ್ಸ್ಆ್ಯಪ್ ತೊರೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
6/ 9
ಅನ್ಲೈನ್ ಮೂಲಕ ನಡೆದ ಸರ್ವೆಯಲ್ಲಿ ಸುಮಾರು 17 ಸಾವಿರ ಮಂದಿ ಪಾಲ್ಗೊಂಡಿದ್ದರು. ಈವರೆಗೆ ಶೇ.5ರಷ್ಟು ಭಾರತೀಯರು ವಾಟ್ಸ್ಆ್ಯಪ್ ಡಿಲೀಟ್ ಮಾಡಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ.
7/ 9
ಹಾಗಾಗಿ ಸುಮಾರು 40 ಕೋಟಿ ವಾಟ್ಸ್ಆ್ಯಪ್ ಬಳಕೆದಾರರ ಪೈಕಿ 2 ಕೋಟಿ ಜನರು ಅನ್ಇನ್ಸ್ಟಾಲ್ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
8/ 9
ಅಂತೆಯೇ ಶೇ.21ರಷ್ಟು ವಾಟ್ಸ್ಆ್ಯಪ್ ಬಳಸುವುದನ್ನು ಕಡಿಮೆಗೊಳಿಸಿ ಮಂದಿ ಸಿಗ್ನಲ್, ಟೆಲಿಗ್ರಾಂ ಆ್ಯಪ್ಗಳನ್ನು ಬಳಸುತ್ತಿದ್ದಾರೆ.
9/ 9
ಶೇ.22 ರಷ್ಟು ಮಂದಿ ವಾಟ್ಸ್ಆ್ಯಪ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಆದರೆ ಖಾತೆಯನ್ನು ಅನ್ಇನ್ಸ್ಟಾಲ್ ಮಾಡಿಲ್ಲ ಎಂದು ಸರ್ವಯಿಂದ ತಿಳಿದು ಬಂದಿದೆ.