ಪ್ರಸ್ತುತ ಹೆಚ್ಚಿನ ಜನರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ ಮತ್ತು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಅತ್ಯಂತ ಜನಪ್ರಿಯ ವೇದಿಕೆಗಳಲ್ಲಿ ಒಂದಾಗಿದೆ. ಅದರ ಮೂಲಕ ಫೋಟೋ, ವಿಡಿಯೋ, ರೀಲ್ಸ್ ಹಂಚಿಕೊಳ್ಳುವುದರ ಜೊತೆಗೆ ಕಾಮೆಂಟ್ ಮಾಡುತ್ತಿರುತ್ತಾರೆ. ಒಂದು ವೇಳೆ ನೀವು ಫೇಸ್ ಬುಕ್ ಬಳಕೆದಾರರಾಗಿದ್ದರೆ ಕೊಂಚ ಎಚ್ಚರಿಕೆಯಲ್ಲಿರುವುದು ಉತ್ತಮ. ಫೇಸ್ಬುಕ್ನಲ್ಲಿ ಅನ್ಯತಾ ಮತ್ತು ಸೂಕ್ತವಲ್ಲದ ಕಾಮೆಂಟ್ಗಳನ್ನು ಮಾಡಿದರೆ ಶಿಕ್ಷೆಯಾಗಬಹುದು. ಮಾತ್ರವಲ್ಲದೆ ಬಳಕೆದಾರ ಜೈಲು ಶಿಕ್ಷೆಯನ್ನು ಎದುರಿಸಬೇಕಾಗಬಹುದು.
ದಯವಿಟ್ಟು ಈ ರೀತಿಯ ಕಾಮೆಂಟ್ ಮಾಡುವುದನ್ನು ತಡೆಯಿರಿ: ಕಾಮೆಂಟ್ ಮಾಡುವ ಮುನ್ನ ಯೋಚಿಸಿ ಕಾಮೆಂಟ್ ಮಾಡುವುದು ಉತ್ತಮ. ಮಾನಹಾನಿ ಮಾಡುವ ಕಾಮೆಂಟ್ ಮಾಡುವ ಮುನ್ನ ಎಚ್ಚರಿಕೆಯಿಂದ ಇರುವುದು ಒಳಿತು. ಅದರಲ್ಲೂ ಯಾರೊಬ್ಬರ ಪೋಸ್ಟ್ನ ಅಡಿಯಲ್ಲಿ ಜಾತಿ ಅಥವಾ ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಕಾಮೆಂಟ್ಗಳನ್ನು ಮಾಡಿದರೆ, ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದಾದ ಅವಕಾಶವಿದೆ. ಕಾಮೆಂಟ್ಗಳ ವಿಭಾಗದಲ್ಲಿ ಬೇರೊಬ್ಬರನ್ನು ಅವಮಾನಿಸಿದರೂ, ನಿಂದಿಸಿದರೂ ಅಥವಾ ಅಶ್ಲೀಲ ಚಿತ್ರಗಳನ್ನು ಕಳುಹಿಸಿದರೂ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು.
ಅನುಚಿತ ಕಾಮೆಂಟ್ಗಳ ಮೇಲೆ ದೂರು ನೀಡಿ: ನಿಮ್ಮ ಪೋಸ್ಟ್ ಅಥವಾ ಬೇರೆಯವರ ಪೋಸ್ಟ್ನಲ್ಲಿ ಮಾಡಿದ ಕಾಮೆಂಟ್ ಅಶ್ಲೀಲವಾಗಿದ್ದರೆ ಅಥವಾ ತಪ್ಪಾಗಿದ್ದರೆ, ಅವರ ವಿರುದ್ಧ ದೂರು ದಾಖಲಿಸುವ ಹಕ್ಕಿದೆ. ಈ ಕುರಿತಾಗಿ ದೂರು ದಾಖಲಾದ ಅನೇಕ ಘಟನೆಗಳಿವೆ. Facebook ನಲ್ಲಿ, ಪ್ರತಿಯೊಬ್ಬ ಬಳಕೆದಾರರು ಕಾಮೆಂಟ್ ಅನ್ನು ವರದಿ ಮಾಡುವ ಆಯ್ಕೆಯನ್ನು ಹೊಂದಿರುತ್ತಾನೆ. ಇದರಿಂದಾಗಿ ಬಳಕೆದಾರನು ತಪ್ಪಾದ ಕಾಮೆಂಟ್ ಅನ್ನು Facebook ಗೆ ವರದಿ ಮಾಡಬಹುದು.