ಭಾರತೀಯರು ಕ್ಯಾಶ್ಲೆಸ್ ವ್ಯವಹಾರದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಅದಕ್ಕಾಗಿ ಫೋನ್ಪೇ, ಗೂಗಲ್ಪೇ, ಪೇಟಿಎಂಗಳನ್ನು ಬಳಸಿ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುತ್ತಿದ್ದಾರೆ.
2/ 9
ಇದೀಗ ಫೇಸ್ಬುಕ್ ಸಂಸ್ಥೆ ಕೂಡ ತನ್ನ ಬಳಕೆದಾರರಿಗೆ ವ್ಯವಹಾರ ಸುಲಭ ರೂಪಗೊಳಿಸಲು ಹೊಸ ಸೇವೆಯೊಂದನ್ನು ಆರಂಭಿಸಿದೆ. ಅದುವೇ ಫೇಸ್ಬುಕ್ ಪೇ.
3/ 9
ಈ ಹಿಂದೆ ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಕೂಡ ಮನಿಟ್ರಾನ್ಸಫರ್ ಸೇವೆಯನ್ನು ಪ್ರಾರಂಭಿಸುವುದಾಗಿ ಹೇಳಿತ್ತು. ಇದೀಗ ಫೇಸ್ಬುಕ್ ಕೂಡ ಡಿಜಿಟಲೀಕರಣದತ್ತ ಹೆಚ್ಚು ಒತ್ತು ನೀಡಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
4/ 9
ಮಾರ್ಕ್ ಜುಕರ್ಬರ್ಗ್ ಒಡೆತನದ ಫೇಸ್ ಬುಕ್ ಸಂಸ್ಥೆ ಈ ವರ್ಷದ ಆರಂಭದಲ್ಲಿ ತನ್ನ ವಿವಿಧ ಅಪ್ಲಿಕೇಶನ್ ಗಳಲ್ಲಿ ಈ ಸೌಲಭ್ಯವನ್ನು ತರುವ ಸುಳಿವನ್ನು ನೀಡಿತ್ತು.
5/ 9
ಜೊತೆಗೆ ಮೆಸೆಂಜಿಂಗ್ ಸೇವೆಯನ್ನು ಉನ್ನತಿಕರಿಸಲು ಮುಂದಾಗಿತ್ತು. ಈ ಹೊಸ ಸೇವೆಯು ಬಳಕೆದಾರರ ಎಲ್ಲಾ ಡೇಟಾ ಮಾಹಿತಿಗಳು ಗೌಪ್ಯವಾಗಿ ಉಳಿಯವಂತೆ ಮಾಡಲಾಗಿದೆ ಎಂದು ಫೇಸ್ ಬುಕ್ ಸಂಸ್ಥೆ ಹೇಳಿಕೊಂಡಿದೆ.
6/ 9
ಫೇಸ್ಬುಕ್ ಪೇ ಬಳಕೆ ಹೇಗೆ?; ಪ್ರತಿಯೊಬ್ಬರ ಸ್ಮಾರ್ಟ್ಫೋನಿನಲ್ಲಿ ಫೇಸ್ಬುಕ್ ಆ್ಯಪ್ ಇದ್ದೇ ಇರುತ್ತದೆ. ಹೋಮ್ ಪೇಜಿನ ಬಲಭಾಗದಲ್ಲಿನ ಮೂರು ಗೆರೆಯ ಮೇಲೆ ಕ್ಲಿಕ್ ಮಾಡಿದರೆ....
7/ 9
ಫ್ರೆಂಡ್ಸ್, ಗ್ರೂಪ್ ಹೀಗೆ ನಾನಾ ತರಹದ ಐಕಾನ್ಗಳು ಕಾಣಸಿಗುತ್ತದೆ. ಅದರ ಜತೆಗೆ ಸೀ ಮೋರ್ ಎಂಬ ಆಯ್ಕೆ ಕಾಣಸಿಗುತ್ತದೆ...
8/ 9
ಸೀ ಮೋರ್ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸೆಂಡ್ ಆರ್ ರಿಕ್ವೆಸ್ಟ್ ಮನಿ ಅನ್ನೊ ಆಯ್ಕೆ ಕಾಣಸಿಗುತ್ತದೆ...
9/ 9
ಇನ್ನು ಈ ಆಯ್ಕೆಯ ಮೂಲಕ ಫೇಸ್ಬುಕ್ ತನ್ನ ಬಳಕೆದಾರರಿಗೆ ಮನಿಟ್ರಾನ್ಸಾಕ್ಷನ್ ಆಯ್ಕೆಯನ್ನು ನೀಡಲಿದೆ.