ಕೆಲದಿನಗಳ ಹಿಂದೆ ಅಮೆಜಾನ್ ಕಂಪನಿಯಿಂದ ಉದ್ಯೋಗಿಗಳು ವಜಾ ಆಗುತ್ತಿರುವ ಸಂಖ್ಯೆಯನ್ನು ಘೋಷಿಸಲಾಗಿತ್ತು. ಆದರೆ ಇದೀಗ ಅದಕ್ಕಿಂತಲೂ ಎರಡು ಪಟ್ಟು ಉದ್ಯೋಗಿಗಳನ್ನು ತನ್ನ ಕಂಪನಿಯಿಂದ ವಜಾ ಮಾಡುತ್ತಿದೆ. ಅಮೆಜಾನ್ ಹಲವಾರು ಪ್ರದೇಶಗಳಲ್ಲಿ ಮಾರಾಟ ಕೇಂದ್ರವಾಗಿ ಕೆಲಸಗಾರರು, ತಂತ್ರಜ್ಞಾನ ಸಿಬ್ಬಂದಿ ಮತ್ತು ಕಾರ್ಪೊರೇಟ್ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದವರನ್ನು ವಜಾಗೊಳಿಸುತ್ತಿದೆ ಎಂದು ಹೇಳಲಾಗುತ್ತದೆ. ಮುಂಬರುವ ತಿಂಗಳುಗಳಲ್ಲಿ ಈ ವಜಾಗಳು ಇನ್ನಷ್ಟು ಹೆಚ್ಚಾಗಲಿವೆ ಎಂದು ಕಂಪ್ಯೂಟರ್ವರ್ಲ್ಡ್ ಕೆಲವು ಮೂಲಗಳ ಮೂಲಕ ತಿಳಿದುಕೊಂಡಿದೆ.
ಕಂಪನಿಯು ನವೆಂಬರ್ನಲ್ಲಿ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದೆ ಎಂದು ಕೆಲವು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಆದರೆ ಇದೀಗ ಅಮೆಜಾನ್ ಉದ್ಯೋಗದಲ್ಲಿ ಅತ್ಯಂತ ಉತ್ತಮ ಸ್ಥಾನದಲ್ಲಿರುವವರು ಸೇರಿದಂತೆ ಎಲ್ಲಾ ಹಂತಗಳಲ್ಲಿ ಜನರನ್ನು ವಜಾಗೊಳಿಸಲು ಯೋಜಿಸಿದೆ ಎಂದು ಇತ್ತೀಚಿನ ವರದಿ ಹೇಳುತ್ತದೆ. ಈ ಎಲ್ಲದರ ಜೊತೆಗೆ ಉದ್ಯೋಗಿಗಳ ಕೆಲಸದ ಬಗ್ಗೆ ಮೌಲ್ಯಮಾಪನ ಮಾಡಲು ಅಮೆಜಾನ್ ಕಂಪನಿಯ ವ್ಯವಸ್ಥಾಪಕರಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಏಕೆಂದರೆ ಈ ಮೌಲ್ಯಮಾಪನದ ಮೂಲಕ ಉದ್ಯೋಗಿಗಳ ವಜಾದ ನಿರ್ಧಾರವಾಗುತ್ತದೆ.
ಅಮೆಜಾನ್ ಇತ್ತೀಚೆಗೆ ತನ್ನ ಕಾರ್ಪೊರೇಟ್ನ ಕೆಲಸಗಾರರಲ್ಲಿ 6 ಶೇಕಡಾದಷ್ಟು ವಜಾಗೊಳಿಸಲು ಸಿದ್ಧವಾಗಿದೆ, ಆದರೆ ಅಮೆಜಾನ್ ತನ್ನ 1.5 ಮಿಲಿಯನ್ ಉದ್ಯೋಗಿಗಳಲ್ಲಿ ಸುಮಾರು 1.3 ಶೇಕಡಾದಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದೆ. ಇದು ಜಾಗತಿಕ ವಿತರಣಾ ಕೇಂದ್ರದ ಮತ್ತು ಇತರ ಕೆಲಸಗಾರರನ್ನು ಸಹ ಹೊಂದಿದೆ. ವಜಾಗೊಳಿಸಲಾಗುವ ಉದ್ಯೋಗಿಗಳಿಗೆ ವೇತನದ ಜೊತೆಗೆ 24 ಗಂಟೆಗಳ ಎಚ್ಚರಿಕೆಯ ನೋಟಿಸ್ ನೀಡಲಾಗುತ್ತದೆ. ಈ ಮೊದಲೇ ಕಾರ್ಪೊರೇಟ್ ಸಿಬ್ಬಂದಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಹೇಳಿಕೆಯಲ್ಲಿ, ಕೆಲವು ತಿಂಗಳುಗಳವರೆಗೆ ವಜಾ ಪ್ರಕ್ರಿಯೆ ಮುಂದುವರಿಯುತ್ತದೆ ಮತ್ತು ಕಂಪನಿಯು ಎಲ್ಲವನ್ನೂ ಮೌಲ್ಯಮಾಪನ ಮಾಡಿದ ನಂತರ ಸಂಬಂಧಪಟ್ಟ ಉದ್ಯೋಗಿಗಳಿಗೆ ವಜಾ ತೀರ್ಮಾನದ ಮಾಹಿತಿಯನ್ನು ತಿಳಿಸುತ್ತದೆ ಎಂದು ಅಮೆಜಾನ್ ಸಿಇಒ ಘೋಷಿಸಿದರು. ಆದ್ದರಿಂದ, ಲಾಭವನ್ನು ಉಳಿಸಲು, ಎಲ್ಲಾ ಪ್ರದೇಶಗಳಲ್ಲಿನ ಎಲ್ಲಾ ಇಲಾಖೆಗಳನ್ನು ಪರಿಶೀಲಿಸಲಾಗುತ್ತದೆ, ಆದ್ದರಿಂದ ವಜಾಗೊಳಿಸುವ ಸಂಖ್ಯೆಯು ಹೆಚ್ಚಾಗುವ ನಿರೀಕ್ಷೆಯಿದೆ ಎಮದು ವರದಿಗಳು ತಿಳಿಸಿದೆ.