ಸ್ಪೇನ್ನ ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ವರ್ಲ್ಡ್ ಮೊಬೈಲ್ ಕಾಂಗ್ರೆಸ್ನಲ್ಲಿ ಹಲವು ಕಂಪೆನಿಗಳು ತಮ್ಮ ನೂತನ ಸ್ಮಾರ್ಟ್ಫೋನ್ಗಳನ್ನು, ಹೊಸ ಫೀಚರ್ಗಳನ್ನು ಪ್ರದರ್ಶಿಸಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೆಲ ಕಂಪೆನಿಗಳು ಹೊಸ ತಲೆಮಾರಿನ ಸ್ಮಾರ್ಟ್ಫೋನ್ 5G ಮೊಬೈಲ್ಗಳನ್ನು ಬಿಡುಗಡೆಗೊಳಿಸಿದರೆ, ಮತ್ತಷ್ಟು ಕಂಪೆನಿಗಳು ಪಾಪ್ ಅಪ್ ಕ್ಯಾಮೆರಾ, ಫೋಲ್ಡೇಬಲ್ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದೆ. ಇವೆಲ್ಲದರ ನಡುವೆ ಮೊಬೈಲ್ ಪ್ರಿಯರನ್ನು ಅಚ್ಚರಿಗೆ ದೂಡಿರುವುದು ಮಾತ್ರ ಎನರ್ಜೀಝರ್ (Energizer) ಕಂಪೆನಿ ಸ್ಮಾರ್ಟ್ಫೋನ್.