Bajaj Clip Fan: ಬೇಸಿಗೆ ಕಾಲಕ್ಕೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಲೆಕ್ಟ್ರಿಕ್ ಕ್ಲಿಪ್ ಫ್ಯಾನ್! ಬೆಲೆ, ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ
Bajaj Clip Electric Fan: ಸಾಮಾನ್ಯವಾಗಿ ನಾವು ಫ್ಯಾನ್ ಅನ್ನು ಎಲ್ಲಿಯೂ ಇರಿಸಲು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಗಮನಿಸಿದ ಬಜಾಜ್ ಕಂಪನಿ ಕ್ಲಿಪ್ ಫ್ಯಾನ್ ತಂದಿದೆ. ಅದ್ರಲ್ಲೂ ಬೇಸಿಗೆಯ ಸಮಯದಲ್ಲಿ ಈ ಫ್ಯಾನ್ ಬಹಳಷ್ಟು ಉಪಯೋಗಕ್ಕೆ ಬರುತ್ತದೆ. ಹಾಗಿದ್ರೆ ಈ ಫ್ಯಾನ್‌ನ ಬೆಲೆ, ಫೀಚರ್ಸ್ ಹೇಗಿದೆ ಎಂದು ಈ ಲೇಖನದ ಮೂಲಕ ತಿಳಿಯಿರಿ.
ಈ ಬೇಸಿಗೆಯಲ್ಲಿ ನೀವು ಕ್ರಿಯೇಟಿವ್ ಫ್ಯಾನ್ ಅನ್ನು ಖರೀದಿಸಲು ಬಯಸಿದರೆ, ಇದು ನಿಮಗೆ ಸರಿಯಾದ ಆಯ್ಕೆಯಾಗಿರಬಹುದು. ವಿಶೇಷವಾಗಿ ಈ ಫ್ಯಾನ್ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದ್ದು, ಗುಣಮಟ್ಟದ ಫೀಚರ್ಸ್ಗಳನ್ನು ಸಹ ಒಳಗೊಂಡಿದೆ.
2/ 9
ಈ ಫ್ಯಾನ್ 110mm ಮತ್ತು 10W ಹೆಚ್ಚಿನ ವೇಗದ ತಿರುಗುವ ಫೀಚರ್ಸ್ ಅನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ನೀಲಿ ಬಣ್ಣದಲ್ಲಿ ಲಭ್ಯವಿದೆ.
3/ 9
ಇನ್ನು ಈ ಫ್ಯಾನ್ನಲ್ಲಿ ದೊಡ್ಡ ಕ್ಲಿಪ್ ಸಹ ಇರುವುದರಿಂದ ಇದನ್ನು ಟೇಬಲ್ ಫ್ಯಾನ್ ಮತ್ತು ಮೌಂಟೆಡ್ ಫ್ಯಾನ್ (ವಾಲ್ ಆಪರೇಷನ್) ಆಗಿಯೂ ಬಳಸಬಹುದು ಎಂದು ಕಂಪೆನಿ ಹೇಳಿದೆ.
4/ 9
ಇನ್ನು ಈ ಫ್ಯಾನ್ ಅನ್ನು ಚಾರ್ಜ್ ಮಾಡಲು USB ಪೋರ್ಟ್ ಸಹ ನೀಡಲಾಗಿದೆ. ಹಾಗಾಗಿ ಯುಎಸ್‌ಬಿ ಕೇಬಲ್ ಮೂಲಕ ಈ ಸಾಧನವನ್ನು ಸುಲಭದಲ್ಲಿ ಚಾರ್ಜ್ ಮಾಡಬಹುದು.
5/ 9
ಈ ಫ್ಯಾನ್ ವಿಶೇಷವಾಗಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ. ಒಮ್ಮೆ ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, 4 ಗಂಟೆಗಳ ಕಾಲ ಬಳಕೆ ಮಾಡಬಹುದಾಗಿದೆ.
6/ 9
ಈ ಪ್ಲಾಸ್ಟಿಕ್ ಫ್ಯಾನ್‌ನ ಗಾತ್ರ 158 ಎಂಎಂ ಉದ್ದ, 95 ಎಂಎಂ ಅಗಲ ಮತ್ತು 204 ಎಂಎಂ ಎತ್ತರವಿದೆ. ಆದ್ದರಿಂದ ಈ ಫ್ಯಾನ್ ಅನ್ನು ಯಾವುದೇ ಕೋಣೆಯಲ್ಲಿ ಮತ್ತು ಯಾವುದೇ ವ್ಯಕ್ತಿ ಸಹ ಬಳಸಬಹುದು ಎಂದು ಕಂಪೆನಿ ಹೇಳಿದೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.
7/ 9
ಈ ಫ್ಯಾನ್ 3 ಬ್ಲೇಡ್‌ಗಳನ್ನು ಹೊಂದಿದೆ. ಇದು 5 ವೋಲ್ಟೇಜ್ನೊಂದಿಗೆ ಕಾರ್ಯನಿರ್ವಹಿಸುತ್ತದೆ ಜೊತೆಗೆ ಆನ್ ಮಾಡಲು ಪುಶ್ ಬಟನ್ ಸಹ ನೀಡಲಾಗಿದೆ. ಇದರ ತೂಕ ಒಟ್ಟು 430 ಗ್ರಾಂ.
8/ 9
ಈ ಫ್ಯಾನ್ ಕರೆಂಟ್ ಇಲ್ಲದಿದ್ದರೂ ಬಳಸಬಹುದಾಗಿದೆ. ಆದ್ದರಿಂದ ವೈಯಕ್ತಿಕವಾಗಿ ಬೇಸಿಗೆಯ ಸಮಯದಲ್ಲಿ ಗಾಳಿ ಪಡೆಯಲು ಬಯಸುವವರು ಈ ಫ್ಯಾನ್ ಅನ್ನು ಖರೀದಿ ಮಾಡ್ಬಹುದು.
9/ 9
ಅಮೆಜಾನ್ ಇ-ಕಾಮರ್ಸ್ ಸೈಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಬೆಲೆ ರೂ.1620. ಆದರೆ ಇದನ್ನು ಶೇಕಡಾ 39 ರ ರಿಯಾಯಿತಿಯೊಂದಿಗೆ ಕೇವಲ ರೂ.984 ಕ್ಕೆ ಖರೀದಿ ಮಾಡಬಹುದಾಗಿದೆ.
First published:
19