ಮಾರುಕಟ್ಟೆಯಲ್ಲಿ ಇಂಧನ ಚಾಲಿತ ವಾಹನಗಳ ನಡುವೆ ಎಲೆಕ್ಟ್ರಿಕ್ ವಾಹನಗಳ ಹವಾ ಜೋರಾಗಿಯೇ ಇದೆ. ಇದೀಗ ಅದೇ ಸಾಲಿಗೆ Bgauss BG D15i ರೂಪಾಂತರ ಕಾಲಿರಿಸಿದೆ. ಇದರ ಎಕ್ಸ್ ಶೋರೂಂ ಬೆಲೆಯನ್ನು 99,999 ರೂ ಆಗಿದೆ. ಅದರ ಟಾಪ್ ಮಾಡೆಲ್ D15 Pro ನ ಎಕ್ಸ್ ಶೋರೂಂ ಬೆಲೆಯನ್ನು 1,14,999 ರೂಗಳಲ್ಲಿ ಆಗಿದೆ. ನೂತನ ವಾಹನ ಗಟ್ಟಿಮುಟ್ಟಾದ ದೇಹ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 3.2 kWh ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ.