ನಗರದಲ್ಲಿ ಪಿಕ್ ಪಾಕೆಟ್ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಸರಿಯಾಗಿ ದೃಷ್ಠಿ ಹಾಯಿಸಿ ಹೊಂಚು ಹಾಕುತ್ತಿರುತ್ತಾರೆ. ಸ್ಮಾರ್ಟ್ಫೋನ್, ಪರ್ಸ್ಗಳನ್ನು ಎಗರಿಸುತ್ತಿರುತ್ತಾರೆ.
2/ 9
ಇಂತಹ ಸಂದರ್ಭದಲ್ಲಿ ಸ್ಮಾರ್ಟ್ಫೋನ್ ಕಳೆದುಕೊಂಡೆನಲ್ಲ ಎಂಬ ಚಿಂತೆ ಒಂದೆಡೆಯಾದರೆ. ಮತ್ತೊಂದೆಡೆ ಪೊಲೀಸ್ ಠಾಣೆ ಹೋಗಿ ಕಂಪ್ಲೇಂಟ್ ಕೊಡಬೇಕಲ್ಲ ಎಂಬುದು ಮತ್ತೊಂದು ಚಿಂತೆ.
3/ 9
ಇದೀಗ ಆ ಸಮಸ್ಯೆ ಪರಿಹಾರವೆಂಬಂತೆ ರಾಜ್ಯ ಪೊಲೀಸ್ ಇಲಾಖೆ ಹೊಸ ಆ್ಯಪ್ವೊಂದನ್ನು ಅಭಿವೃದ್ಧಿ ಪಡಿಸಿದೆ. ಮನೆಯಿಂದಲೇ ಕಂಪ್ಲೇಂಟ್ ಕೊಡಬಹುದಾದಾಗ ಸೌಲಭ್ಯವನ್ನು ನಿರ್ಮಿಸಿದೆ.
4/ 9
ಒಂದೇ ಕ್ಲಿಕ್ ಸಾಕು ಇದ್ದ ಜಾಗದಿಂದಲೇ ಕಳೆದು ಹೋದ ವಸ್ತುಗಳನ್ನು ಅಥವಾ ಕಳ್ಳತನವಾದ ವಸ್ತುಗಳ ಬಗ್ಗೆ ದೂರು ದಾಖಲಿಸಬಹುದಾಗಿದೆ.
5/ 9
ಅದಕ್ಕಾಗಿ ರಾಜ್ಯ ಪೊಲೀಸ್ ಇಲಾಖೆ E-Lost Report ಎಂಬ ಆ್ಯಪ್ ಅಭಿವೃದ್ಧಿ ಪಡಿಸಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಹಾಯವಾಗಲಿದೆ. ಪೊಲೀಸ್ ಠಾಣೆ ಅಳೆಯುತ್ತಾ ದೂರು ನೀಡುವ ಬದಲು ಈ ಆ್ಯಪ್ ಬಳಸಿ ನಿಮಿರ್ಷಾಧಲ್ಲಿ ದೂರು ದಾಖಲಿಸಬಹುದಾಗಿದೆ.
6/ 9
ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, E-Lost Report ಆ್ಯಪ್ ಡೌನ್ಲೋಡ್ ಮಾಡಿ ಕಳೆದು ಹೋದ ಬಗ್ಗೆ ದೂರು ನೀಡಬಹುದು ಎಂದಿದ್ದಾರೆ.
7/ 9
ಡೌನ್ಲೋಡ್ ಮಾಡಿ: E-Lost Report ಆ್ಯಪ್ ರೂಪದಲ್ಲಿ ಸಿಗಲಿದ್ದು, ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಬಹುದು.
8/ 9
ನಂತರ ಇಮೇಲ್ ಐಡಿ ಬಳಸಿ ಲಾಗಿನ್ ಆಗಬೇಕು. ನಂತರ ಕಳೆದು ಹೊದ ವಸ್ತುವಿನ ಬಗ್ಗೆ ದೂರು ದಾಖಲಿಸಬಹುದು. ಆ್ಯಪ್ ತೆರೆದು ಅಪ್ಲಿಕೇಶನ್ ಒಳಗೆ FAQ ಆಯ್ಕೆಯನ್ನು ಕ್ಕಿಕ್ ಮಾಡಿದರೆ ಮಾಹಿತಿ ಸಿಗುತ್ತದೆ.
9/ 9
E-Lost Report ಆ್ಯಪ್ ಮೂಲಕ ದೂರು ದಾಖಲಿಸುವಾಗ ಹೆಸರು, ವಿಳಾಸ, ಸ್ಥಳ ಬಗ್ಗೆ ವಿವರ ನೀಡಬೇಕು. ದೂರುದಾರ ದೂರಿನ ಪತ್ರಿಯನ್ನು ಪಿಡಿಎಫ್ ಮೂಲಕ ಪಡೆಯಬಹುದಾಗಿದೆ.