ಈ ಹೊಸ ಗೇಮ್ ಚೇಂಜರ್ ಸ್ಮಾರ್ಟ್ಫೋನ್ ಜೂನ್ 6 ರಂದು ಬಿಡುಗಡೆಯಾಗಲಿದೆ ಎಂದು Doogee ಅಂತಿಮವಾಗಿ ಖಚಿತಪಡಿಸಿದ್ದಾರೆ. ಬಿಡುಗಡೆಗೆ ಕೆಲವು ದಿನಗಳ ಮೊದಲು, ಫೋನ್ನ ವೈಶಿಷ್ಟ್ಯಗಳು ಮತ್ತು ಬೆಲೆಯನ್ನು ಬಹಿರಂಗಪಡಿಸಲಾಗಿದೆ. ಇದು ಪ್ರಬಲ ಫೋನ್ ಎಂದು ಪರಿಗಣಿಸಲಾಗಿದೆ. ನೆಲದ ಮೇಲೆ ಎಸೆದರೂ ಒಡೆಯುವುದಿಲ್ಲ, ನೀರಿನಲ್ಲಿ ಮುಳುಗಿಸಿದರೂ ಹಾಳಾಗುವುದಿಲ್ಲ. Doogee S98 Pro ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
Doogee S98 Pro ಬೆಲೆ: ಹೊಸ Doogee S98 ಪ್ರೊ ಜೂನ್ 6 ರಂದು ಆರ್ಡರ್ಗೆ ಲಭ್ಯವಿರುತ್ತದೆ ಎಂದು ಕಂಪನಿ ದೃಢಪಡಿಸಿದೆ. AliExpress, DoogeeMall, ಮತ್ತು Linio (ಲ್ಯಾಟಿನ್ ಅಮೇರಿಕಾ) ಶಾಪಿಂಗ್ ಪ್ಲಾರ್ಟ್ಫಾರ್ಮ್ಗಳಳಲ್ಲಿ ಸ್ಮಾರ್ಟ್ಫೋನ್ ಸಿಗಲಿದೆ. Doogee S98 Pro ಬೆಲೆ $439 (Rs 34,008), ಆದರೆ ಜೂನ್ 6 ಮತ್ತು 10 ರ ನಡುವೆ $329 (Rs 25,500) ಗೆ ಮಾರಾಟವಾಗಲಿದೆ.