ಅಪ್ಡೇಟ್ ಮಾಡಿ: ಸ್ಮಾರ್ಟ್ಫೋನ್ಗಳನ್ನು ಆಗಾಗ ಅಪ್ಡೇಟ್ ಮಾಡುತ್ತಿರಬೇಕು. ಏಕೆಂದರೆ ಕೆಲವೊಂದು ಬಾರಿ ನಮ್ಮ ಸ್ಮಾರ್ಟ್‌ಫೋನ್‌ಗಳು ಇದರಿಂದ ಹೊಸ ಬದಲಾವಣೆಯನ್ನು ತರುತ್ತದೆ. ಈ ಸಂದರ್ಭದಲ್ಲಿ ಕಂಪೆನಿ ಸ್ಮಾರ್ಟ್ಫೋನ್ಗಳಿಗೆ ಅಪ್ಡೇಟ್ ನೀಡಿದ ತಕ್ಷಣವೇ ಅಪ್ಡೇಟ್ ಮಾಡ್ಬೇಕು. ಇಲ್ಲದಿದ್ದರೆ ಸ್ಟೋರೇಜ್, ಪ್ರೊಸೆಸರ್ ವೇಗ ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ.
ಡೇಟಾ ಸೇವರ್ ಬಳಸಿ: ಸ್ಮಾರ್ಟ್‌ಫೋನಿನಲ್ಲಿ ಕ್ರೋಮ್ ಬ್ರೌಸರ್ ಬಳಕೆ ಹೆಚ್ಚು. ಈ ಬ್ರೌಸರ್‌ನಲ್ಲಿ ಡೇಟಾ ಸೇವರ್ ಆಯ್ಕೆ ಸಿಗುತ್ತದೆ. ಅದನ್ನು ಸಕ್ರಿಯಗೊಳಿಸಿದರೆ ನಿಮ್ಮ ಮೊಬೈಲ್ ಡೇಟಾ ಬಳಕೆ ಕಡಿಮೆಯಾಗಿ ನಿಮ್ಮ ಫೋನಿನ ವೇಗ ಹೆಚ್ಚುತ್ತದೆ. ಕಡಿಮೆ ಡಾಟಾ ಬಳಸಿಕೊಂಡು ಹೆಚ್ಚು ಪೇಜ್‌ಗಳು ವೇಗವಾಗಿ ಲೋಡ್ ಆಗುತ್ತವೆ. ಜೊತೆಗೆ ಒಂದು ಸಿನೆಮಾವನ್ನೂ ಕಡಿಮೆ ಡೇಟಾದಲ್ಲೇ ನೋಡಬಹುದು.
ಹೋಮ್ಸ್ಕ್ರೀನ್ ಸೆಟ್ ಮಾಡಿ: ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಹೆಚ್ಚಾಗಿ widgets ಗಳನ್ನು ಮತ್ತು ಲೈವ್ ವಾಲ್‌ಪೇಪರ್‌ಗಳನ್ನು ಬಳಕೆಮಾಡುತ್ತಿರುತ್ತಾರೆ. ಆದರೆ ಖಂಡಿತವಾಗಿಯೂ ಇದು ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಕಡಿಮೆ ಮಾಡುವ ಜೊತೆಗೆ ಸ್ಮಾರ್ಟ್ಫೋನ್ನ ಹ್ಯಾಂಗ್ ಆಗುವ ಸಮಸ್ಯೆಗೂ ಕಾರಣವಾಗುತ್ತದೆ. ಆದ್ದರಿಂದ ಯಾವತ್ತೂ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ, ಲೈವ್ ವಾಲ್ ಪೇಪರ್ಗಳನ್ನು ಬಳಸ್ಬೇಡಿ.