ಫೋನ್‌ಗಳಿಂದ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ತೆಗೆದುಹಾಕುವುದರ ಹಿಂದೆ ಮೂರು ಪ್ರಮುಖ ಕಾರಣಗಳಿವೆ ಎಮದು ತಂತ್ರಜ್ಞರು ಹೇಳಿದ್ದಾರೆ. ಮೊದಲನೆಯದಾಗಿ, ವಿನ್ಯಾಸ ಮತ್ತು ಎಂಜಿನಿಯರಿಂಗ್ ಅನ್ನು ಸುಧಾರಿಸಲು ಎಂದು ಹೇಳಲಾಗಿದೆ. ಎರಡನೆಯದಾಗಿ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಲಲು. ಇನ್ನು ಮೂರನೆಯದು ಗ್ರಾಹಕರ ನಡವಳಿಕೆಯಲ್ಲಿ ಬದಲಾವಣೆ ತರಲು ಎಂದಿದ್ದಾರೆ.
ಈಗ ನಾವು ಮಾರುಕಟ್ಟೆಯ ಟ್ರೆಂಡ್ ಮತ್ತು ಗ್ರಾಹಕರ ನಡವಳಿಕೆಯ ಬಗ್ಗೆ ಮಾತನಾಡುವುದಾದರೆ, ಹೆಚ್ಚಿನ ಸ್ಮಾರ್ಟ್‌ಫೋನ್ ಕಂಪೆನಿಗಳು ಈಗ ವೈರ್‌ಲೆಸ್ ಆಡಿಯೋ ತಂತ್ರಜ್ಞಾನವನ್ನು ಮೊದಲಿಗಿಂತ ಉತ್ತಮಗೊಳಿಸಿವೆ. ಅಂತಹ ಪರಿಸ್ಥಿತಿಯಲ್ಲಿ, ವೈರ್‌ಲೆಸ್ ಬಡ್‌ಗಳಲ್ಲಿಯೂ ಉತ್ತಮ ಗುಣಮಟ್ಟದ ಆಡಿಯೋವನ್ನು ಕೇಳಲಾಗುತ್ತದೆ. ಅಲ್ಲದೆ, ವೈರ್‌ಗಳ ತೊಂದರೆ ತಪ್ಪಿಸಲು ಗ್ರಾಹಕರು ವೈರ್‌ಲೆಸ್ ಬಡ್‌ಗಳನ್ನು ಹೆಚ್ಚಾಗಿ ಅಳವಡಿಸಿಕೊಂಡಿದ್ದಾರೆ.
ಇನ್ನು ಇದರ ಮಾರಾಟದ ಬಗ್ಗೆ ಹೇಳುವುದಾದ್ರೆ, ಹೆಚ್ಚಿನ ಸ್ಮಾರ್ಟ್ಫೋನ್ಗಳಲ್ಲಿ ಬಳಕೆ ಮಾಡುವಂತಹ ಹೆಡ್ಫೋನ್ಗಳು ಬೇರೆ ಕಂಪೆನಿಯದ್ದಾಗಿರುತ್ತದೆ. ಆದರೆ ಇತ್ತೀಚೆಗೆ ಸ್ಮಾರ್ಟ್‌ಫೋನ್ ಕಂಪೆನಿಗಳು ಸಹ ವೈರ್‌ಲೆಸ್ ಇಯರ್ಬಡ್ಸ್ಗಳನ್ನು ಮಾರಾಟ ಮಾಡಲು ಆರಮಭಿಸಿದೆ. ಇದರಿಂದ ಕಂಪೆನಿಗಳು ತಯಾರಿಸಿದ ಇಯರ್ಬಡ್ಸ್ಗಳಿಗೂ ಬೇಡಿಕೆ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಸ್ಮಾರ್ಟ್ಫೋನ್ಗಳಲ್ಲಿ ಹೆಡ್‌ಫೋನ್ ಜ್ಯಾಕ್ ಅನ್ನು ತೆಗೆಯಲಾಗಿದೆ ಎಂಂದಿದ್ದಾರೆ.