ಮಾರುಕಟ್ಟೆಯಲ್ಲಿ ಹಲವಾರು ಬಣ್ಣಗಳಲ್ಲಿ ಸ್ಮಾರ್ಟ್ಫೋನ್ಗಳಿವೆ. ಇನ್ನು ಒಂದೇ ಸ್ಮಾರ್ಟ್ಫೋನ್ಗಳು ವಿವಿಧ ರೀತಿಯ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಆದರೆ ಈ ಸ್ಮಾರ್ಟ್ಫೋನ್ಗಳ ಜೊತೆ ಬರುವ ಚಾರ್ಜರ್ಗಳು ಮಾತ್ರ ಕೇವಲ ಎರಡು ಮಾದರಿಯಲ್ಲಿ ಮಾತ್ರ ಇರುತ್ತದೆ. ಹೌದು, ಮೊಬೈಲ್ಗಳ ರೀತಿ ಕೆಂಪು, ಹಸಿರು, ನೀಲಿ ಹೀಗೆ ಅನೇಕ ಬಣ್ಣಗಳಲ್ಲಿ ಮೊಬೈಲ್ ಚಾರ್ಜರ್ಗಳು ಇರುವುದಿಲ್ಲ. ಅದು ಕೇವಲ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮಾತ್ರ ಇರುತ್ತದೆ. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..
ಸ್ಮಾರ್ಟ್ಫೋನ್ನಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಚಾರ್ಜರ್‌ಗಳ ಬದಲಿಗೆ ಬೇರೆ ಯಾವುದೇ ಬಣ್ಣದ ಚಾರ್ಜರ್ಗಳು ಬರುವುದಿಲ್ಲ. ಇದಕ್ಕೊಂದು ಬಲವಾದ ಕಾರಣವಿದೆ. ಯಾವುದೇ ಒಂದು ಉತ್ಪನ್ನ ಅಥವಾ ಕೆಲಸವನ್ನು ಮಾಡಬೇಕಾದರೆ ಅದರ ಹಿಂದೆ ಏನಾದರು ಒಂದು ಕಾರಣಗಳು ಇದ್ದೇ ಇರುತ್ತದೆ. ಇದೀಗ ಸ್ಮಾರ್ಟ್ಫೋನ್ಗಳ ಚಾರ್ಜರ್ಗಳು ಕಪ್ಪು ಮತ್ತು ಬಿಳಿ ಬಣ್ಣದಿರಲು ಕಾರಣ ಏನೆಂದು ತಿಳಿಬೇಕಾದ್ರೆ ಈ ಲೇಖನವನ್ನೊಮ್ಮೆ ಓದಿ.
ಮೊಬೈಲ್ ಕಂಪನಿಗಳು ಕೆಂಪು, ಹಸಿರು, ಕೆಂಪು ಅಥವಾ ಇತರೆ ಬಣ್ಣಗಳಲ್ಲಿ ಚಾರ್ಜರ್‌ಗಳನ್ನು ತಯಾರಿಸದಿರಲು ಕಾರಣ ಅದರ ಬಾಳಿಕೆ ಮತ್ತು ವೆಚ್ಚವೇ ಮುಖ್ಯ ಕಾರಣವಾಗಿದೆ. ಕಪ್ಪು ಮತ್ತು ಬಿಳಿ ಬಣ್ಣಗಳು ಚಾರ್ಜರ್‌ನ ಜೀವಿತಾವಧಿಯನ್ನು ಹೆಚ್ಚಿಸುತ್ತವೆ. ಇನ್ನು ವಿಶೇಷವಾಗಿ ಇತರ ಬಣ್ಣಗಳಿಗೆ ಹೋಲಿಸಿದರೆ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಚಾರ್ಜರ್‌ಗಳನ್ನು ತಯಾರಿಸಲು ಕಂಪೆನಿಗಳಿಗೆ ವೆಚ್ಚವೂ ಕಡಿಮೆ ಆಗುತ್ತದೆ.
ಬಿಳಿ ಚಾರ್ಜರ್‌ನ ಲಾಭಗಳು: ಕಳೆದ ಕೆಲವು ವರ್ಷಗಳಿಂದ ಕೆಲ ಮೊಬೈಲ್ ಕಂಪೆನಿಗಳು ತನ್ನ ಬ್ರಾಂಡ್ನ ಮೊಬೈಲ್ ಜೊತೆ ಬಿಳಿ ಬಣ್ಣದ ಚಾರ್ಜರ್ ನೀಡುತ್ತಿವೆ. ಬಿಳಿ ಚಾರ್ಜರ್ ನೀಡಲು ವಿಶೇಷವಾಗಿ ಮೂರು ಕಾರಣಗಳಿವೆ. ಮೊದಲನೆಯದಾಗಿ, ಬಿಳಿ ಬಣ್ಣವು ಬಾಹ್ಯ ಶಾಖವನ್ನು ಚಾರ್ಜರ್ ಒಳಗೆ ಪ್ರವೇಶಿಸದಂತೆ ತಡೆಹಿಡಿಯುತ್ತದೆ. ಎಲ್ಲರಿಗೂ ತಿಳಿದಿರುವಂತೆ ಬಿಳಿ ಬಣ್ಣ ಹೆಚ್ಚು ಶಾಖದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಕಡಿಮೆ ಶಾಖ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಈ ಕಾರಣದಿಂದಾಗಿ, ಚಾರ್ಜರ್ ಕಡಿಮೆ ಬಿಸಿಯಾಗುತ್ತದೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ.