ಆ್ಯಪಲ್ ಕಂಪೆನಿ ತಮ್ಮ ಹಳೆಯ ಐಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಕಡಿಮೆ ಬೆಲೆಗೆ ಹೊಸ ಐಫೋನ್ ಅನ್ನು ಪಡೆಯುವ ಡೀಲ್‌ಗಳನ್ನು ನೀಡುತ್ತಾ ಬರುತ್ತಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಇದೇ ರೀತಿಯ ಕೊಡುಗೆಗಳು ಇತ್ತೀಚೆಗ ಬಹಳಷ್ಟು ಲಭ್ಯವಿದೆ. ಕೆಲವೊಮ್ಮೆ ಹಳೆಯ ಫೋನ್ ಕೆಲಸ ಮಾಡದಿದ್ದರೂ ವಿನಿಮಯ ಮಾಡಿಕೊಳ್ಳುವ ಆಯ್ಕೆಯನ್ನು ಸಹ ನೀಡುತ್ತಾರೆ. ವಿದ್ಯುನ್ಮಾನ ತ್ಯಾಜ್ಯ ಸಂಗ್ರಹವಾಗುವುದನ್ನು ತಡೆಯಲು ಕಂಪೆನಿಗಳು ಈ ನಿರ್ಧಾರವನ್ನು ಕೈಗೊಂಡಿದೆ. ಆದರೆ ಹಲವರಿಗೆ ಇದೊಂದು ದೊಡ್ಡ ದಂಧೆ ಎಂಬುದು ತಿಳಿದಿಲ್ಲ.
2022 ರಲ್ಲಿ 282 ಮಿಲಿಯನ್‌ಗಿಂತಲೂ ಹೆಚ್ಚು ಸೆಕೆಂಡ್‌ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳನ್ನು ಕಲೆಕ್ಟ್ ಮಾಡಲಾಗಿದೆ ಎಂದು ವಿಶ್ಲೇಷಕ ಕಂಪೆನಿ IDC ಹೇಳಿದೆ. ಇವುಗಳಲ್ಲಿ ಅಪ್ಡೇಟ್ ಮಾಡಿದ ಮತ್ತು ಬಳಸಿದ ಸ್ಮಾರ್ಟ್‌ಫೋನ್‌ಗಳು ಸಹ ಸೇರಿವೆ. ಆದರೆ 2026 ರವರೆಗೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯು ವಾರ್ಷಿಕವಾಗಿ 10 ಪ್ರತಿಶತಕ್ಕಿಂತ ಹೆಚ್ಚು ಬೆಳೆಯುತ್ತದೆ ಎಂದು IDC ತನ್ನ ವರದಿಯಲ್ಲಿ ಹೇಳಿದೆ.
ಜೋನ್ನಾ ಸ್ಟರ್ನ್ Apple, Samsung, AT&T, Verizon ಮತ್ತು T-Mobile ಕಂಪೆನಿಯೊಂದಿಗೆ ಹಳೆಯ ಫೋನ್‌ಗಳನ್ನು ಏನು ಮಾಡುತ್ತೀರ ಎಂದು ಕೇಳಿದರು. ಗ್ರಾಹಕರಿಗೆ ಉತ್ತಮ ವ್ಯವಹಾರವನ್ನು ಪಡೆಯಲು ಮತ್ತು ನಂತರ ಅವುಗಳನ್ನು ಮರುಮಾರಾಟ ಮಾಡಲು ಅಥವಾ ಮರುಬಳಕೆ ಮಾಡಲು ಈ ಸೆಕೆಂಡ್ ಹ್ಯಾಂಡ್ ಫೋನ್‌ಗಳನ್ನು ಸಂಗ್ರಹಿಸುತ್ತೇವೆ ಎಂದು ಹೇಳುತ್ತಾರೆ. ಎಷ್ಟೇ ಕಂಪೆನಿಗಳನ್ನು ಸಂಪರ್ಕಿಸಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದರೆ USMobile ಫೋನ್ಸ್ ಕಂಪೆನಿಯೊಂದು ತನ್ನ ಕಂಪೆನಿಯೊಳಗೆ ಪ್ರವೇಶಿಸಲು ಅನುಮತಿಯನ್ನು ಪಡೆದುಕೊಂಡಿತು.
ಈ ಮೂಲಕ ಕಂಪನಿಯು ಕಳೆದ ವರ್ಷ 2.5 ಮಿಲಿಯನ್ ಫೋನ್‌ಗಳನ್ನು ನ್ಯೂ ಬ್ರನ್ಸ್‌ವಿಕ್, ಎನ್ಜೆ ನಲ್ಲಿರುವ ತನ್ನ ಕಂಪೆನಿಯಲ್ಲಿ ಸಂಗ್ರಹಿಸಿದೆ. ಅವುಗಳಲ್ಲಿ ಹೆಚ್ಚಿನವು ಐಫೋನ್ಗಳಾಗಿವೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರರೊಬ್ಬರು ಐಫೋನ್ ಅಪ್ಡೇಟ್ ಪ್ರಕ್ರಿಯೆಯನ್ನು ಪತ್ತೆಹಚ್ಚುವ ಮೂಲಕ ಈ ಸೆಕೆಂಟ್ ಹ್ಯಾಂಡ್ ಫೋನ್‌ಗಳನ್ನು ಏಕೆ ಪಡೆಯುತ್ತಾರೆ ಎಂಬ ಪ್ರಶ್ನೆಗೆ ಉತ್ತರಗಳನ್ನು ಪಡೆದರು.
USMP ಗೆ ಬರುವ ಸುಮಾರು ಮೂರನೇ ಎರಡರಷ್ಟು ಸಾಧನಗಳ ಡೇಟಾವನ್ನು ಅಳಿಸಿಹಾಕಿವೆ. ನಂತರ ಈ ಮೊಬೈಲ್ಗಳನ್ನು ಸ್ವಚ್ಛಗೊಳಿಸಿ ವಿದೇಶದಲ್ಲಿರುವ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ. ಜೊತೆಗೆ ಮತ್ತೊಂದು ಕಂಪನಿಯು ಅವರಿಂದ ಖರೀದಿಸುತ್ತದೆ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮತ್ತು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತದೆ. ಆ್ಯಂಡ್ರಾಯ್ಡ್ ಫೋನ್‌ಗಳನ್ನು ಸಹ ಹೀಗೆ ಮರುಮಾರಾಟ ಮಾಡಲಾಗುತ್ತದೆ. ಆದರೆ ಐಫೋನ್‌ಗಳು ಈ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿವೆ.
ಈ ರೀತಿಯಲ್ಲಿ ಸಂಗ್ರಹಿಸಲಾದ ಐಫೋನ್‌ಗಳಲ್ಲಿನ ಡೇಟಾವನ್ನು ವಿಶೇಷ ಸಾಫ್ಟ್‌ವೇರ್‌ನೊಂದಿಗೆ ಕ್ಲಿಯರ್ ಮಾಡಲಾಗುತ್ತದೆ. ಮೈಕ್ರೊಫೋನ್, ಸ್ಪೀಕರ್‌ಗಳು, ಸ್ಕ್ರೀನ್, ಕ್ಯಾಮೆರಾ, ಬಟನ್‌ಗಳು, ವೈರ್‌ಲೆಸ್ ರೇಡಿಯೊಗಳು ಇತ್ಯಾದಿಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಲಾಗುತ್ತದೆ. ಬ್ಯಾಟರಿಗಳನ್ನು ಸಹ ಪರೀಕ್ಷಿಸಲಾಗುತ್ತದೆ. 80% ಅಥವಾ ಅದಕ್ಕಿಂತ ಕಡಿಮೆ ಬ್ಯಾಟರಿ ಬ್ಯಾಕಪ್ ಹೊಂದಿರುವ ಫೋನ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸೆಕೆಂಡ್ ಹ್ಯಾಂಡ್ಫೋನ್ಗಳನ್ನು ಸರಿಯಾಗಿ ಕ್ಲೀನ್ ಮಾಡಿ ನಂತರ ಮರು ಮಾರಾಟ ಮಾಡುತ್ತಾರೆ.
ಮರುಮಾರಾಟದಿಂದ ಲಾಭ: ಹೊಸದಾಗಿ ಅಪ್ಡೇಟ್ ಮಾಡಿದ ಫೋನ್‌ಗಳನ್ನು ಚಿಲ್ಲರೆ ಬೆಲೆಗಿಂತ 20 ರಿಂದ 30 ಪ್ರತಿಶತ ಕಡಿಮೆಗೆ ಮಾರಾಟ ಮಾಡಲಾಗುತ್ತದೆ. ಅಲ್ಲದೆ ಅವರು ಬಳಕೆದಾರರಿಗೆ ಉತ್ತಮ ರಿಯಾಯಿತಿಯನ್ನು ಸಹ ನೀಡುತ್ತಾರೆ. ಪರಿಣಾಮವಾಗಿ, ಇವುಗಳನ್ನು ಮಾರಾಟ ಮಾಡುವ ಕಂಪನಿಗಳು 10% ರಿಂದ 15% ವರೆಗೆ ಮಾರ್ಜಿನ್ ಪಡೆಯುತ್ತವೆ. ಇನ್ನು ಈ ರೀತಿಯ ಮಾರಾಟದಿಂದ ಕಂಪೆನಿಗಳು ಬಹಳಷ್ಟು ಲಾಭವನ್ನು ಪಡೆಯುತ್ತಿದೆ.