ಆದರೆ ನಿಮ್ಮ ಕೆಲಸಕ್ಕೆ ಯಾವ ಲ್ಯಾಪ್ಟಾಪ್ ಸೂಕ್ತ ಎಂದು ತಿಳಿಯುವುದು ಹೇಗೆ? ಲ್ಯಾಪ್ಟಾಪ್ನ ಪ್ರೊಸೆಸರ್ ಅಥವಾ ಚಿಪ್ಸೆಟ್ ಹೇಗಿದೆ ಎಂಬುದನ್ನು ತಿಳಿಯುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ. ಲ್ಯಾಪ್ಟಾಪ್ ಪ್ಯಾಕಿಂಗ್ ಅನ್ನು ತೆರೆಯದೆಯೇ ಪ್ರೊಸೆಸರ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ನಾವು ಇಲ್ಲಿ ತಿಳಿಯಬಹುದು. ಇಂಟೆಲ್ನ 12 ನೇ ಚಿಪ್ ಸೆಟ್ ಮೂಲಕ ಲ್ಯಾಪ್ಟಾಪ್ನ ಕಾರ್ಯವೈಛರಿಯ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು.
ಲ್ಯಾಪ್ಟಾಪ್ನಲ್ಲಿ ನೀಡಿರುವಂತಹ ಸಂಖ್ಯೆಗಳನ್ನು ಸೀರಿಸ್ ನಂಬರ್ ಎಂದು ಕರೆಯುತ್ತಾರೆ. ಈ ನಂಬರ್ನ ಕೊನೆಯಲ್ಲಿ ಬರೆಯಲಾದ H ಅನ್ನು ಹೊಂದಿರುವ ಸೀರಿಸ್ ಸಂಖ್ಯೆಯು ಉನ್ನತ-ಶ್ರೇಣಿಯ ಚಿಪ್ಸೆಟ್ ಅನ್ನು ಒಳಗೊಂಡಿರುತ್ತದೆ. ಅಂದರೆ ಈ ಲ್ಯಾಪ್ಟಾಪ್ನ ಕಾರ್ಯವೈಖರಿ, ವೇಗ ಮತ್ತು ಗ್ರಾಫಿಕ್ಸ್ ಎಲ್ಲವೂ ಉನ್ನತ ಮಟ್ಟದಲ್ಲಿವೆ ಎಂದರ್ಥ. ಗೇಮಿಂಗ್ ಜೊತೆಗೆ ಬಹುತೇಕ ಎಲ್ಲಾ ಕೆಲಸದ ಅಗತ್ಯಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಒಂದು ವೇಳೆ ಸೀರಿಸ್ ನಂಬರ್ನ ಕೊನೆಯಲ್ಲಿ P ಎಂದು ಬರೆದಿದ್ದರೆ, ಈ ಲ್ಯಾಪ್ಟಾಪ್ನ ಚಿಪ್ಸೆಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಗುಣಮಟ್ಟದ ಫೀಚರ್ಸ್ಗಳನ್ನು ಹೊಂದಿರುತ್ತದೆ. ಆದರೆ ಇದರ ಗ್ರಾಫಿಕ್ಸ್ ಅಷ್ಟು ಉತ್ತಮವಾಗಿರುವುದಿಲ್ಲ, ಆದ್ದರಿಂದ ಈ ಲ್ಯಾಪ್ಟಾಪ್ ಗೇಮರ್ಸ್ಗಳಿಗೆ ಅಷ್ಟೊಂದು ಉಪಯೋಗಕ್ಕೆ ಬರುವುದಿಲ್ಲ. ಆದರೆ ಇದು ಆಫೀಸ್ ಕೆಲಸಗಳಿಗೆ ಉಪಯುಕ್ತವಾಗಿದೆ.
ಲ್ಯಾಪ್ಟಾಪ್ ಅದರ ಚಿಪ್ಸೆಟ್ನ ಕೊನೆಯಲ್ಲಿ U ಎಂದು ಬರೆದಿದ್ದರೆ, ಅಂತಹ ಲ್ಯಾಪ್ಟಾಪ್ ಉತ್ತಮ ಬ್ಯಾಟರಿಯನ್ನು ಹೊಂದಿದೆ ಮತ್ತು ಇತರ ಫಿಚರ್ಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದರ್ಥ. ಆದರೆ, ಪ್ರೊಸೆಸರ್ ಅಷ್ಟೊಂದು ಶಕ್ತಿಯುತವಾಗಿಲ್ಲ. ಇದರರ್ಥ ನೀವು ಎಡಿಟಿಂಗ್, ಈ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಪ್ರಾಜೆಕ್ಟ್ ವರ್ಕ್, ಆನ್ಲೈನ್ ತರಗತಿಗಳನ್ನು ಮಾಡಲು ಈ ಲ್ಯಾಪ್ಟಾಪ್ ತುಂಬಾ ಉಪಯುಕ್ತವಾಗಿದೆ.